ಹೋಟೆಲ್ ಗಳಿಗೆ ಗ್ಯಾಸ್ ಟ್ರಬಲ್

Contributed byvenkatesh.narasappa@timesgroup.com|Vijaya Karnataka

ಕಲಬುರಗಿಯಲ್ಲಿ ಹೋಟೆಲ್‌ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಯುದ್ಧದ ಪರಿಣಾಮ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಗ್ಯಾಸ್‌ ಏಜೆನ್ಸಿಗಳು ವಾಣಿಜ್ಯ ಸಿಲಿಂಡರ್‌ ಪೂರೈಕೆ ಸ್ಥಗಿತಗೊಳಿಸಿವೆ. ಇದರಿಂದ ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳಿಗೂ ಒಂದು ವಾರ ಕಾಯಬೇಕಾಗಿದೆ. ಆಹಾರ ಇಲಾಖೆ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡಿದೆ.

gas supply to hotels suspended severe issues arise

ಚಿತ್ರ: ಸಿಲಿಂಡರ್ ಚಿತ್ರ ಬಳಸಿ ಅಥವಾ ಎಐ ಚಿತ್ರ

**

(ಕಿಕ್ಕರ್ ) ವಾಣಿಜ್ಯ ಸಿಲಿಂಡರ್ ಗಳ ಪೂರೈಕೆ ಸ್ಥಗಿತಗೊಳಿಸಿದ ಏಜೆನ್ಸಿಗಳು | ಪೂರೈಕೆ ಆಗದ ವಾಣಿಜ್ಯ ಸಿಲಿಂಡರ್ | ಗೃಹ ಬಳಕೆ ಸಿಲಿಂಡರ್ ಬರಲು ವಾರ ಕಾಯಲೇಬೇಕು

ಹೋಟೆಲ್ ಗಳಿಗೆ ಗ್ಯಾಸ್ ಟ್ರಬಲ್

ವಿಕ ಸುದ್ದಿಲೋಕ ಕಲಬುರಗಿ

ಯುದ್ಧದ ಪರಿಣಾಮ ಅಡುಗೆ ಅನಿಲದ ಪೂರೈಕೆಯಲ್ಲಿವ್ಯತ್ಯಯ ಕಂಡುಬರುತ್ತಿರುವುದರಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಗ್ಯಾಸ್ ಏಜೆನ್ಸಿಗಳು ಸ್ಥಗಿತಗೊಳಿಸಿದ್ದರಿಂದ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.

ಮಧ್ಯಪ್ರಾಚ್ಯದಲ್ಲಿನಡೆಯುತ್ತಿರುವ ಯುದ್ಧದ ಪರಿಣಾಮ ಎಲ್ ಪಿಜಿ ಗ್ಯಾಸ್ ಪೂರೈಕೆಯಲ್ಲಿಕೊರತೆಯಾಗುತ್ತಿದೆ. ಬಹುತೇಕ ಗ್ಯಾಸ್ ಏಜೆನ್ಸಿಗಳು ಸೋಮವಾರದಿಂದಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳನ್ನು ಪೂರೈಕೆ ಮಾಡುವುದನ್ನು ನಿಲ್ಲಿಸಿವೆ. ಪ್ರಸ್ತುತ ಗ್ಯಾಸ್ ಉಗ್ರಾಣಗಳು ಕಮರ್ಷಿಯಲ್ ಸಿಲಿಂಡರ್ ಗಳು ಖಾಲಿಯಾಗಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗಳ ಪೂರೈಕೆಯೂ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿಪ್ರಸ್ತುತ ವಾಣಿಜ್ಯ ಸಿಲಿಂಡರ್ ಗಳನ್ನು ಗ್ರಾಹಕರಿಗೆ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಿದೆ.

*ಹೋಟೆಲ್ ಉದ್ಯಮ ಬಂದ್ ?: ಯುದ್ಧದ ಪರಿಣಾಮ ಇತ್ತೀಚೆಗೆ ಕೇಂದ್ರ ಸರಕಾರ ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದು ಒಂದೆಡೆಯಾದರೆ ಇನ್ನೊಂದೆಡೆ ಈಗ ಏಜೆನ್ಸಿಗಳು ಪೂರೈಕೆಯನ್ನೇ ಮಾಡುವುದನ್ನ ಸ್ಥಗಿತಗೊಳಿಸಿದ್ದರಿಂದ ಈಗ ಹೋಟೆಲ್ ಉದ್ಯಮ ಬಂದ್ ಮಾಡುವ ಪರಿಸ್ಥಿತಿಗೆ ಸಿಲುಕಿವೆ. ಇನ್ನೂ ಕೆಲ ದಿನಗಳಲ್ಲಿಪೂರೈಕೆ ಆರಂಭಿಸದಿದ್ದರೆ ಹೋಟೆಲ್ ಉದ್ಯಮವೇ ಬಂದ್ ಆಗುವ ಎಲ್ಲಲಕ್ಷಣಗಳು ಕಂಡು ಬರುತ್ತಿದೆ. ಜತೆಗೆ ಹಲವು ಪಿಜಿಗಳಿಗೂ ಸಿಲಿಂಡರ್ ಕೊರತೆ ಕಾಡುತ್ತಿದೆ.

*ಉಗ್ರಾಣದಲ್ಲಿಖಾಲಿ ಸಿಲಿಂಡರ್ : ಗ್ಯಾಸ್ ಉಗ್ರಾಣದಲ್ಲಿಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಖಾಲಿ ಖಾಲಿಯಾಗಿ ಬಿದ್ದಿವೆ. ಪ್ರತಿದಿನ ಗ್ಯಾಸ್ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿಫುಲ್ ಸಿಲಿಂಡರ್ ಗಳು ಉಗ್ರಾಣದಲ್ಲಿಇರುತ್ತಿದ್ದವು. ಆದರೆ, ಈಗ ಎಲ್ಲಖಾಲಿ ಖಾಲಿಯಾಗಿ ಬಿದ್ದಿದ್ದರಿಂದ ಅನಿವಾರ್ಯವಾಗಿ ಏಜೆನ್ಸಿಗಳು ಕಮರ್ಷಿಯಲ್ ಸ್ಥಗಿತಕ್ಕೆ ನಿರ್ಧಾರ ಮಾಡಿದ್ದಾರೆ.

*ಗ್ಯಾಸ್ ಬುಕ್ ಮಾಡಲು ತೊಂದರೆ: ಪ್ರಸ್ತುತ ಗೃಹ ಬಳಕೆಯ ಸಿಲಿಂಡರ್ ಗಳನ್ನು ಬುಕ್ ಮಾಡಲು ಹೋದರೆ ಗ್ರಾಹಕರು ತಾಂತ್ರಿಕ ತೊಂದರೆ ಎದುರಿಸುತ್ತಿದ್ದಾರೆ. ಈ ಮುಂಚೆ ಮೊಬೈಲ್ ನಂಬರ್ ಗೆ ಕರೆ ಮಾಡಿ ಬುಕ್ ಮಾಡಲಾಗುತಿತ್ತು. ಆದರೆ, ಈಗ ಕರೆ ಮಾಡಿ ಬುಕ್ ಮಾಡಲು ಹೋದರೆ ಮೊಬೈಲ್ ರಿಂಗ್ ಆಗುತ್ತಿಲ್ಲ. ಇದರಿಂದ ಗ್ರಾಹಕರು ಪರೇಶಾನ್ ಆಗಿ ಗ್ಯಾಸ್ ಏಜೆನ್ಸಿಗಳಿಗೆ ದೌಡಾಯಿಸಿ ಅಲ್ಲಿಯೇ ಹೋಗಿ ಬುಕ್ ಮಾಡಿ ಬರುತ್ತಿದ್ದಾರೆ.

ಬಾಕ್ಸ್ .....

ಗೃಹ ಬಳಕೆ ಗ್ಯಾಸ್ ಗೆ ವಾರ ಕಾಯಬೇಕು

ಗೃಹ ಬಳಕೆಯ ಸಿಲಿಂಡರ್ ಗಳನ್ನು ಪೂರೈಕೆ ಮಾಡುತ್ತಿರುವುದರಿಂದ ಪ್ರಸ್ತುತ ಗೃಹ ಬಳಕೆಗೆ ಹೆಚ್ಚಿನ ತೊಂದರೆಯಿಲ್ಲ. ಆದರೆ, ಈ ಹಿಂದೆ ಬುಕ್ ಮಾಡಿದ ಒಂದು ದಿನಕ್ಕೆ ಗ್ಯಾಸ್ ಮನೆಗೆ ಬರುತಿತ್ತು. ಆದರೆ, ಇಂದು ಬುಕ್ ಮಾಡಿದರೆ ಒಂದು ವಾರದವರೆಗೆ ಕಾಯಲೇಬೇಕು. ಒಂದು ವಾರದ ನಂತರ ನಿಮ್ಮ ಮನೆಗೆ ಸಿಲಿಂಡರ್ ತಲುಪಲಿದೆ ಎಂದು ಗ್ಯಾಸ್ ಏಜೆನ್ಸಿಗಳು ಹೇಳುತ್ತಾರೆ.

*

ಕೋಟ್ ....

ವಾಣಿಜ್ಯ ಸಿಲಿಂಡರ್ ಗಾಗಿ ಈಗಾಗಲೇ ಎರಡು ಬಾರಿ ಏಜೆನ್ಸಿಯವರಿಗೆ ಹೋಗಿ ಭೇಟಿ ನೀಡಿದ್ದೇನೆ. ಆದರೆ, ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ. ಈಗ ಪೂರೈಕೆಯನ್ನೇ ಬಂದ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಹೀಗಾದರೆ ಖಾನಾವಳಿಯನ್ನೇ ಬಂದ್ ಮಾಡಬೇಕಾಗುತ್ತದೆ.

- ಸಿದ್ದರಾಮ ಗುರುಲಿಂಗಪ್ಪ ಕಲಶೆಟ್ಟಿ, ಖಾನಾವಳಿ ಮಾಲೀಕ (ಚಿತ್ರ ಇದೆ )

*

ಕೋಟ್ ...

ಕಮರ್ಷಿಯಲ್ ಸಿಲಿಂಡರ್ ಗಳು ವಿತರಣೆ ಸ್ಥಗಿತಗೊಳಿಸುವಂತೆ ಕೇಂದ್ರದ ನಿರ್ದೇಶನವಿದೆ. ಪ್ರಸ್ತುತ ಗೃಹ ಬಳಕೆಗೆ, ಹಾಸ್ಟೆಲ್ ಗಳಿಗೆ ಯಾವುದೇ ತೊಂದರೆ ಇಲ್ಲ. ಗ್ಯಾಸ್ ಡೀಲರ್ಸ್ ಜತೆ ಸಂಜೆ ಸಭೆ ನಡೆಸಲಾಗಿದೆ. ಗೃಹ ಬಳಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.

- ಮುನಾವರ ದೌಲಾ, ಉಪನಿರ್ದೇಶಕ, ಆಹಾರ ಇಲಾಖೆ ಕಲಬುರಗಿ