ಮೇವಿನ ಕೊರತೆ ನೀಗಿಸಲು ಒತ್ತಾಯ

Contributed by: mahanteshsangam31@gmail.com|Vijaya Karnataka•
farmers protest against forage shortage
ಮೇವಿನ ಕೊರತೆ ನೀಗಿಸಲು ಒತ್ತಾಯ

ಅಧಿಕಾರಿಗಳಿಂದ ತಪ್ಪು ಮಾಹಿತಿ | ರೈತರ ಆರೋಪ
ವಿಕ ಸುದ್ದಿಲೋಕ ಬಸವಮಬಾಗೇವಾಡಿ

ಬರದ ಬರೆಯಲ್ಲಿಜೀವನ ಸಾಗಿಸುತ್ತಿರುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಎಂಬ ಆತಂಕ ಹೊರ ಹಾಕಿದ್ದಾರೆ.

ಬಿಳಿ ಜೋಳದ ಕಣಿಕೆಯನ್ನೇ ಹೆಚ್ಚು ಪ್ರಮಾಣದಲ್ಲಿಸೇವಿಸುವ ಜಾನುವಾರುಗಳಿಗೆ ಕಣಿಕೆ ಕೊರತೆ ಉಂಟಾಗಲಿದೆ. ಅಧಿಕಾರಿಗಳು ಮೇವು ಸಂಗ್ರಹದ ಬಗ್ಗೆ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿಜೋಳದ ಕಣಿಕೆ ತುಂಬಾ ಕಡಿಮೆ ಇದೆ. ಆದರೆ, ಬಸವನಬಾಗೇವಾಡಿ ಪಶು ಅಧಿಕಾರಿ ರಾಠೋಡ ಅವರು ತಾಲೂಕಿನಲ್ಲಿ25 ವಾರದವರೆಗಾಗುವಷ್ಟು ಮೇವು ಇದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ. ಇದರಲ್ಲಿಜೋಳದ ಕಣಿಕೆ, ಮೆಕ್ಕೆಜೋಳದ ಕಣಿಕೆ, ತೊಗರಿ ಮತ್ತು ಹೆಸರು ಹೊಟ್ಟು ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರೈತರು ತಿಳಿಸಿದ್ದಾರೆ.

ಜೋಳದ ಕಣಿಕೆಯೇ ಜಾನುವಾರುಗಳಿಗೆ ನೆಚ್ಚಿನ ಆಹಾರ. ಮೆಕ್ಕೆಜೋಳದ ಮೇವು ಹಸಿಯಿದ್ದಾಗ ಮಾತ್ರ ಸೇವಿಸುತ್ತವೆ. ಇದೆಲ್ಲವನ್ನೂ ಮರೆಮಾಚಿದ ಅಧಿಕಾರಿಗಳು ತಪ್ಪು ಮಾಹಿತಿ ಹೇಳುತ್ತಿದ್ದಾರೆ ಎಂದೇ ಖಾರವಾಗಿ ಪ್ರಶ್ನಿಸಿದ್ದಾರೆ. ಜತೆಗೆ ಸರಕಾರ ಜೋಳದ ಮೇವು ವ್ಯವಸ್ಥೆ ಮಾಡಬೇಕು. ಬೇರೆ ರಾಜ್ಯಗಳಿಂದಲಾದರೂ ಈ ಮೇವು ಸಂಗ್ರಹಿಸಿ, ಜಾನುವಾರು ಉಳಿವಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

----

ಮೇವು ಸಂಗ್ರಹ ಎಷ್ಟಿದೆ ಎಂಬ ಕುರಿತು ರೈತರನ್ನೊಳಗೊಂಡು ಅಧಿಕಾರಿಗಳು ಸಮೀಕ್ಷೆ ಮಾಡಿ ತೋರಿಸಲಿ. ಉತ್ತರ ಕರ್ನಾಟಕದಲ್ಲೇ ಮೇವು ಕೊರತೆಯಿದೆ. ಹೆಸರು, ತೊಗರಿ ಪೂರ್ಣ ಹಾಳಾಗಿವೆ. ಜೋಳದ ಮೇವು ಸಂಗ್ರಹಿಸಿ ರೈತರಿಗೆ ವಿತರಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು.

-ನಿಂಗರಾಜ ಆಲೂರ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

12ಅಕ್ಟೋಬರ್ 1 2 ಫೋಟೊ *ಎ* (ಮೆಕ್ಕೆಜೋಳ)

ಬಸವನಬಾಗೇವಾಡಿ ತಾಲೂಕಿನಲ್ಲಿಬರಗಾಲದಿಂದ ಒಣಗಿ ನಿಂತ ಮೆಕ್ಕೆಜೋಳ ಪರಿಶೀಲಿಸಿದ ಕೃಷಿ ಇಲಾಖೆ ಅಧಿಕಾರಿಗಳು.

*ಬಿ* (ಆಲೂರ) . ಕೋಟ್ ನಲ್ಲಿಬಳಸಿ...

====