ಜಾಥಾ

Contributed bykeregaddemurthy@gmail.com|Vijaya Karnataka

ಅ.16ರಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಪರಿಸರ ಸಂರಕ್ಷಣೆಯ ಜನಜಾಗೃತಿ ಬೈಕ್ ಜಾಥಾ ನಡೆಯಲಿದೆ. ತಾರಗೋಡಿನಿಂದ ಮತ್ತು ಸೋಂದಾದಿಂದ ಸಹಸ್ರಲಿಂಗಕ್ಕೆ ಜಾಥಾ ಹೊರಡಲಿದೆ. ಸಹಸ್ರಲಿಂಗದಲ್ಲಿ ಜನಜಾಗೃತಿ ಸಭೆ ಜರುಗಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಗಣ್ಯರು ಭಾಗವಹಿಸುವರು. ಸೋಂದಾ, ಭೈರುಂಬೆ, ಸದಾಶಿವಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

bike rally for environmental conservation awareness

ಪರಿಸರ ರಕ್ಷಣೆ ಜಾಗೃತಿಗೆ

ಇಂದು ಬೈಕ್ ಜಾಥಾ

ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ‘ಸಹಸ್ರಲಿಂಗ ಉಳಿಸಿ, ಶಾಲ್ಮಲೆ ರಕ್ಷಿಸಿ’ ಪರಿಸರ ಸಂರಕ್ಷಣೆಯ ಜನಜಾಗೃತಿ ಬೈಕ್ ಜಾಥಾ ಅ.16ರಂದು ನಡೆಯಲಿದೆ.

ಬೆಳಗ್ಗೆ 9.30ಕ್ಕೆ ತಾರಗೋಡಿನಿಂದ ಸಹಸ್ರಲಿಂಗಕ್ಕೆ ಮತ್ತು ಸೋಂದಾದಿಂದ ಸಹಸ್ರಲಿಂಗಕ್ಕೆ ಜಾಥಾ ನಡೆಯಲಿದ್ದು 10.45ಕ್ಕೆ ಸಹಸ್ರಲಿಂಗದಲ್ಲಿಜನಜಾಗೃತಿ ಸಭೆ ಜರುಗಲಿದೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ ಹೆಗಡೆ ಅಶೀಸರ, ಶಿವಾನಂದ ಕಳವೆ, ಕೇಶವ ಕೊರ್ಸೆ, ವಿ.ಎನ್ .ಹೆಗಡೆ ಬೊಮ್ಮನಳ್ಳಿ ಭಾಗವಹಿಸುವರು. ಸೋಂದಾ, ಭೈರುಂಬೆ, ಸದಾಶಿವಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಲು ಕೋರಲಾಗಿದೆ.