ಅಮ್ಮ ಫೌಂಡೇಶನ್ ನಿಂದ ಮಹಿಳೆಯರಿಗೆ ಉದ್ಯೋಗವಕಾಶ

Contributed byjalandhara223149@gmail.com|Vijaya Karnataka

ತುಮುಖಾನೆಯ ಅಮ್ಮ ಫೌಂಡೇಶನ್ 20 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಈ ಅವಕಾಶ ಲಭ್ಯವಿದೆ. ಕನಿಷ್ಠ 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಒಂದು ವರ್ಷ ತರಬೇತಿ ನೀಡಲಾಗುವುದು. ತರಬೇತಿ ಸಮಯದಲ್ಲಿ 19 ಸಾವಿರ ರೂ. ಸ್ಟೈಫಂಡ್‌, ಉಚಿತ ಊಟ, ವಸತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಫೌಂಡೇಶನ್ ಕಚೇರಿ ಸಂಪರ್ಕಿಸಬಹುದು.

employment opportunity for women from amma foundation

ಅಮ್ಮ ಫೌಂಡೇಶನ್ ನಿಂದ ಮಹಿಳೆಯರಿಗೆ ಉದ್ಯೋಗವಕಾಶ

ವಿಕ ಸುದ್ದಿಲೋಕ ಕೊಪ್ಪ

ತಾಲೂಕಿನ ತುಮುಖಾನೆಯ ಅಮ್ಮ ಫೌಂಡೇಶನ್ ವತಿಯಿಂದ 20 ಸಾವಿರ ಮಹಿಳೆಯರಿಗೆ ಉದ್ಯೋಗವಕಾಶ ನೀಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್ .ಶೆಟ್ಟಿ ತುಮುಖಾನೆ ಹೇಳಿದರು.

ಪಟ್ಟಣದ ಸಂಸ್ಥೆಯ ಕಚೇರಿಯಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿ, ಅಮ್ಮ ಫೌಂಡೇಶನ್ ನಿಂದ ಈಗಾಗಲೆ ಹಲವು ಬಾರಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರಸ್ತುತ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈ.ಲಿಮಿಟೆಡ್ ಸಹಯೋಗದಲ್ಲಿಕ್ಷೇತ್ರದ ಮಹಿಳೆಯರಿಗೆ ಉದ್ಯೋಗವಕಾಶ ಬಂದಿದೆ. ಕನಿಷ್ಠ 10ನೇ ತರಗತಿ ಅನುತೀರ್ಣರಾದವರಿಂದ ಪಿಯುಸಿ, ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿಒಂದು ವರ್ಷ ಕಾಲ ತರಬೇತಿ ನೀಡಲಾಗುವುದು. ತರಬೇತಿ ಸಮಯದಲ್ಲಿಅವರಿಗೆ 19 ಸಾವಿರ ರೂ. ಸ್ಟೈಫಂಡ್ , ಉಚಿತ ಊಟ, ವಸತಿ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗೆ ಅಮ್ಮ ಫೌಂಡೇಶನ್ ಕಚೇರಿ ಸಂಪರ್ಕಿಸಬೇಕು ಎಂದರು.

ಹೊಲಸು ರಾಜಕಾರಣ:

ಕ್ಷೇತ್ರದಲ್ಲಿಆಡಳಿತಾರೂಢ ಮತ್ತು ಪ್ರತಿಪಕ್ಷದ ಮುಖಂಡರು ಸಭೆ ಏರ್ಪಡಿಸಿ ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿಪರಸ್ಪರ ಟೀಕಿಸುತ್ತಿರುವುದು ಜುಗುಪ್ಸೆ ತರುವ ಸಂಗತಿಯಾಗಿದೆ. ಸೈದ್ಧಾಂತಿಕ ಟೀಕೆಗಳಿರಲಿ, ಆದರೆ ಯಾರ ಬಗ್ಗೆಯೂ ವೈಯಕ್ತಿಕ ವಿಚಾರದ ಟೀಕೆ ಸಲ್ಲದು. ಇದರಿಂದ ಮತದಾರರ ದೃಷ್ಟಿಯಲ್ಲಿಅವರ ವರ್ಚಸ್ಸು ಕುಂದುತ್ತದೆಯೆ ಹೊರತು ವಿರೋಧಿಗಳದ್ದಲ್ಲಎಂಬುದನ್ನು ಅರಿಯಬೇಕು. ಮುಂದಾದರೂ ಅಂತಹವರು ವೈಯಕ್ತಿಕ ಟೀಕೆಗೆ ಕಡಿವಾಣ ಹಾಕಲಿ ಎಂದು ಹಾರೈಸುತ್ತೇನೆ ಎಂದು ಸುಧಾಕರ ಎಸ್ .ಶೆಟ್ಟಿ ಹೇಳಿದರು.

ಫೋಟೊ-15ಕೆಪಿಎಚ್ ಜೆಎಲ್ ಎನ್ ಡಿಆರ್ 1-ಸುಧಾಕರ ಎಸ್ .ಶೆಟ್ಟಿ ತುಮುಖಾನೆ