ರಾಮನಗರ : ಇತ್ತೀಚೆಗಷ್ಟೇ ನಿಧನ ಹೊಂದಿದ ಖ್ಯಾತ ಸಾಹಿತಿ ಮೊಗಳ್ಳಿ ಗಣೇಶ್ ಅವರ ನುಡಿನಮನ ಕಾರ್ಯಕ್ರಮವನ್ನು ನಮ್ಮವರು ತಂಡ ಹಮ್ಮಿಕೊಂಡಿದೆ. ಅ.17ರಂದು ಶುಕ್ರವಾರ ಬೆ.10 ಗಂಟೆಗೆ ನಗರದ ಡಾ. ಬಿ.ಆರ್ . ಅಂಬೇಡ್ಕರ್ ಭವನದಲ್ಲಿಕಾರ್ಯಕ್ರಮ ನಡೆಯಲಿದೆ.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ. ಸಾಹಿತಿ ಹಾಗೂ ವಿಮರ್ಶಕ ಡಾ. ನಟರಾಜ ಹುಳಿಯಾರ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಎನ್ .ಕೆ. ಲೋಲಾಕ್ಷಿ ಅವರು ಮೊಗಳ್ಳಿ ಅವರ ಸಾಹಿತ್ಯ ಮತ್ತು ಬದುಕಿನ ವಿವಿಧ ಮಗ್ಗುಲುಗಳ ಕುರಿತು ಮಾತನಾಡಲಿದ್ದಾರೆ.
ಶೋಭಾ ಮೊಗಳ್ಳಿ ಗಣೇಶ್ ಅವರು ಕಾರ್ಯಕ್ರಮದಲ್ಲಿಉಪಸ್ಥಿತರಿರಲಿದ್ದಾರೆ. ದಲಿತಪರ, ರೈತಪರ, ಕನ್ನಡಪರ, ಮಹಿಳಾಪರ, ಜನಪರ ಸಂಘಟನೆಗಳು ಹಾಗೂ ಸಂಘ, ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಮೊಗಳ್ಳಿ ಅವರು ಬರೆದಿರುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕೂಡ ಇರಲಿದೆ ಎಂದು ನಮ್ಮವರು ತಂಡದ ಪ್ರಕಟಣೆ ತಿಳಿಸಿದೆ.
ಫೋಟೋ:
15್ಕN್ಕಏ02
ಮೊಗಳ್ಳಿ ಗಣೇಶ್ , ಖ್ಯಾತ ಸಾಹಿತಿ

