ಗದಗ: ಕಬ್ಬಿಗರ ಕೂಟದಿಂದ ಸಾಹಿತ್ಯ ಭವನದಲ್ಲಿನ.1 ರಂದು ಮುಂಜಾನೆ 11 ಗಂಟೆಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಜಯನಗರ ಸಂಸ್ಥಾಪಕ, ವಿದ್ಯಾಗುರು ವಿದ್ಯಾರಣ್ಯರ ಮೂಲ ಪರಿಕಲ್ಪನೆಯ ಕನ್ನಡ ರಾಜರಾಜೇಶ್ವರಿಯ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಏಕೀಕರಣ, ಸ್ವಾತಂತ್ರತ್ರ್ಯ ಹೋರಾಟಕ್ಕೆ ನಿಸ್ವಾರ್ಥದಿಂದ ದುಡಿದು ಮಡಿದ ತೋಟಪ್ಪ ನಾರಾಯಣಪೂರ ಅವರ 121ನೇ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಆಯ್ದ ಕವಿಗಳಿಂದ ಕವನವಾಚನ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಲು ಕಬ್ಬಿಗರ ಕೂಟದ ಅಧ್ಯಕ್ಷರು ಕೋರಿದ್ದಾರೆ.

