ಅಡಕೆ ಹಾನಿಕಾರಕವೆಂದು ಪರಿಗಣನೆಗೆ ಬೆಳೆಗಾರರ ಖಂಡನೆ
ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಘೋಷಣೆ
ವಿಕ ಸುದ್ದಿಲೋಕ ಅಂಕೋಲಾ
ಅಡಕೆಯನ್ನು ತಂಬಾಕು, ನಿಕೋಟಿನ್ ನಂತಹ ಮಾದಕ ಉತ್ಪನ್ನಗಳ ಜತೆ ಸೇರಿಸಿಕೊಂಡು ವಿಶ್ವ ಆರೋಗ್ಯ ಸಂಸ್ಥೆಯು ಉತ್ಪಾದನೆ ಮತ್ತು ಬಳಕೆಯ ನಿಷೇಧದ ಬಗ್ಗೆ ನಿರ್ಣಯಗಳನ್ನು ಕೈಗೊಂಡಿರುವುದನ್ನು ವಿರೋಧಿಸಿ ಗುರುವಾರ ತಾಲೂಕಿನ ಅಗಸೂರು ಗ್ರಾಮದಲ್ಲಿನಡೆದ ಅಡಕೆ ಬೆಳೆಗಾರ ಸಭೆಯಲ್ಲಿಚರ್ಚಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿವಿಶ್ವ ಆರೋಗ್ಯ ಸಂಸ್ಥೆಯು ನಿರ್ಣಯ ವಿರುದ್ಧ ಕಾನೂನು ಸಮರ ನಡೆಸಲು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.
ಕೋಲಂಬೊದಲ್ಲಿಜರುಗಿದ ದಕ್ಷಿಣ ಏಷಿಯಾ ದೇಶಗಳ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಸಭೆಯಲ್ಲಿಅಡಕೆಯನ್ನು ಹಾನಿಕಾರಕವೆಂದು ಪರಿಗಣಿಸಿರುವುದು ಆಘಾತಕಾರಿ ಎಂದು ಅಭಿಪ್ರಾಯ ಪಡಲಾಯಿತು. ಈ ತೀರ್ಮಾನವು ಮಾದಕ ಉತ್ಪನ್ನಗಳ ಜತೆ ಅಡಕೆ ಉತ್ಪಾದನೆ, ಮಾರಾಟ, ಜಾಹೀರಾತು, ಪ್ರಚಾರ ಮತ್ತು ಪ್ರಾಯೋಜಕತ್ವದ ಸಂಪೂರ್ಣ ನಿಷೇಧವಾಗಲಿದೆ. ಇದು ಅಡಕೆ ಬೆಳೆಯನ್ನೆ ನಂಬಿಕೊಂಡ ಬೆಳೆಗಾರರ ಭವಿಷ್ಯಕ್ಕೆ ಮಾರಕವಾಗುವುದರಲ್ಲಿಸಂಶಯವಿಲ್ಲಎಂದು ಸಭೆ ಅಭಿಪ್ರಾಯಪಟ್ಟಿತು.
ಈ ಸಂದರ್ಭದಲ್ಲಿತಾಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ, ರಾಮಚಂದ್ರ ನಾಯ್ಕ, ಶೋಭಾ ಗೌಡ, ಚಂದ್ರು ನಾಯ್ಕ ಕೊಡ್ಲಗದ್ದೆ, ಸಂತೋಷ ನಾಯ್ಕ, ನಾರಾಯಣ ನಾಯಕ, ರಮಾನಂದ ನಾಯಕ ಅಚವೆ, ಮಾದೇವ ನಾಯಕ ಮಾಬಗಿ, ಕೇಶವ ನಾಯಕ ಶಿರಗುಂಜಿ, ಅನಂತ ಗೌಡ ಅಗಸೂರು, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರ, ಮಾಣಿ ಭಟ್ , ವೆಂಕಟರಮಣ ಹೆಗಡೆ ಸುಂಕಸಾಳ, ರಾಮದಾಸ ನಾಯಕ, ರಮೇಶ ನಾಯಕ, ಗೋವಿಂದ ಸುಬ್ರಾಯ ಮುಕ್ರಿ, ಸವಿತಾ ನಾಯಕ, ಬೆಳ್ಳಾ ರಮಣಿ ಕುಣಬಿ, ಮಾದೇವ ಕುಸ್ಲುಗೌಡ ಇದ್ದರು.
30ಅಂಕೋಲಾ2
ಅಂಕೋಲಾದ ಅಗಸೂರಿನಲ್ಲಿನಡೆದ ಅಡಕೆ ಬೆಳೆಗಾರರ ಸಭೆಯಲ್ಲಿವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಘೋಷಣೆ ಕೂಗಲಾಯಿತು.

