ಇಂದು ಸಾವಿರ ವಿದ್ಯಾರ್ಥಿಗಳಿಂದ ನಾಡಗೀತೆ ಗಾಯನ
((ನಾಡಗೀತೆಗೆ ಶತಮಾನ ಹಿನ್ನೆಲೆಯಲ್ಲಿಸಂಭ್ರಮಾಚರಣೆ))
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
ಕುವೆಂಪು ರಚಿಸಿರುವ ನಾಡಗೀತೆಗೆ ನೂರು ವರ್ಷ ತುಂಬಿದ ಹಿನ್ನೆಲೆ ನ.1 ರಂದು ಡಾ.ರಾಜ್ ಕುಮಾರ್ ಪ್ರತಿಮೆ ಮುಂಭಾಗ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿನಗರದ ನಾನಾ ಶಾಲೆಗಳ ಸಾವಿರ ವಿದ್ಯಾರ್ಥಿಗಳು ನಾಡಗೀತೆ ಹಾಡಲಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಗೋವಿಂದರಾಜು ತಿಳಿಸಿದರು.
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿನಡೆದ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಕುವೆಂಪು ಅವರು 1924-25ರಲ್ಲಿನಾಡಗೀತೆ ಬರೆದಿದ್ದರು. 2004ರಲ್ಲಿಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿಕರ್ನಾಟಕ ಸರಕಾರ ಈ ಗೀತೆಯನ್ನು ಅಧಿಕೃತವಾಗಿ ನಾಡ ಗೀತೆಯನ್ನಾಗಿಸಿ, ಅದಕ್ಕೊಂದು ವಿಶೇಷ ಸ್ಥಾನ ನೀಡಿತು. ಶಾಲೆಗಳಲ್ಲಿತರಗತಿಗಳು ಪ್ರಾರಂಭವಾಗುವ ಮೊದಲು ಪ್ರತಿದಿನ ಹಾಡಬೇಕು ಮತ್ತು ಎಲ್ಲಾಕಾರ್ಯಕ್ರಮಗಳಲ್ಲಿಯೂ ಸಹ ಹಾಡಬೇಕು ಎಂದು ಅದು ನಿರ್ದೇಶಿಸಿತು ಎಂದು ವಿವರಿಸಿದರು.
ಕುವೆಂಪು ಅವರು ರಚಿಸಿರುವ ನಾಡಗೀತೆಗೆ ಗಾಯಕ ಮೈಸೂರು ಅನಂತಸ್ವಾಮಿ ಅವರು 1960ರ ದಶಕದಲ್ಲಿಒಂದು ರಾಗವನ್ನು ನೀಡಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿಕುವೆಂಪು ಅವರ ಸಮ್ಮುಖದಲ್ಲಿಅನಂತಸ್ವಾಮಿ ಕೂಡ ಇದನ್ನು ಹಾಡಿದ್ದರು. ಕರ್ನಾಟಕವನ್ನು ಭಾರತಮಾತೆಯ ಮಗಳು ಎಂದು ಬಣ್ಣಿಸುತ್ತದೆ. ಇದು ಕನ್ನಡಿಗರಲ್ಲಿಅಭಿಮಾನ ಮತ್ತು ಸ್ಫೂರ್ತಿಯನ್ನು ತುಂಬುವ ಮೂಲಕ ನಾಡಿನ ಘನತೆಯನ್ನು ಸಾರುತ್ತದೆ ಎಂದು ತಿಳಿಸಿದರು.
ಈ ವೇಳೆ ಕಸಾಪ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಫೋಟೋ:31ವಿಕೆ3: ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿನಡೆದ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

