ಸಾಧನೆಗೆ ಬಡತನ ಅಡ್ಡಿಯಲ್ಲ

Contributed bychinnagirigowdabp@gmail.com|Vijaya Karnataka

ಚನ್ನಪಟ್ಟಣದ ಮತ್ತಿಕೆರೆ ಸರಕಾರಿ ಆದರ್ಶ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ನಡೆಯಿತು. ಜಿಲ್ಲಾ ಉಪನಿರ್ದೇಶಕ ಸ್ವಾಮಿ ಅವರು ಬಡತನ ಸಾಧನೆಗೆ ಅಡ್ಡಿಯಲ್ಲ ಎಂದರು. ಆತ್ಮವಿಶ್ವಾಸ, ಶ್ರಮ ಮತ್ತು ಸಮಯ ನಿರ್ವಹಣೆಯ ಮಹತ್ವವನ್ನು ಅವರು ವಿವರಿಸಿದರು. ಹಲವು ಸಾಧಕರ ಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಕಾರ್ಯಾಗಾರ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿತು.

achievement against poverty motivation workshop for students

ವಿಕ ಸುದ್ದಿಲೋಕ ಚನ್ನಪಟ್ಟಣ

ನಿಮ್ಮ ಮೇಲೆ ನೀವು ನಂಬಿಕೆ ಇಡಿ, ಬಡತನ ಸಾಧನೆಗೆ ಅಡ್ಡಿಯಲ್ಲ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ, ನಿಮ್ಮೊಳಗಿನ ಶಕ್ತಿಯನ್ನು ಅರಿತು ಶ್ರಮದಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ. ಪ್ರತಿದಿನ ನಿಗದಿತ ಸಮಯದಲ್ಲಿಓದುವ ಅಭ್ಯಾಸ ಬೆಳೆಸಿಕೊಂಡರೆ ಯಾವುದೇ ಗುರಿಯನ್ನೂ ಮುಟ್ಟಬಹುದು ಎಂದು ಶಿಕ್ಷಣ ಇಲಾಖೆಯ ಜಿಲ್ಲಾಉಪನಿರ್ದೇಶಕ ಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಮತ್ತಿಕೆರೆ ಸರಕಾರಿ ಆದರ್ಶ ಪ್ರೌಢಶಾಲೆಯಲ್ಲಿನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳು ಎಂಬ ಶೀರ್ಷಿಕೆಯಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಹಾಗೂ ಪಾಠ ಬೋಧನೆ ನಡೆಸಿ, ಆತ್ಮವಿಶ್ವಾಸ ಮತ್ತು ಶ್ರಮದ ಮಹತ್ವ ವಿವರಿಸಿದರು ಅವರು ಮಾತನಾಡಿದರು.

ಸುಮಾರು 2 ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿದ ಉಪನಿರ್ದೇಶಕರು ಹಲವು ಸಾಧಕರ ನಿದರ್ಶನಗಳನ್ನು ಉದಾಹರಣೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ತುಂಬಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಉತ್ತಮ ಅಂಕಗಳನ್ನು ಪಡೆಯಲು ಅಗತ್ಯವಾದ ತಂತ್ರಗಳು ಹಾಗೂ ಸಮಯ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿಶಾಲೆಯ ಮುಖ್ಯೋಪಾಧ್ಯಾಯ ಸಿ.ವಿ.ಜಯಣ್ಣ, ಶಿಕ್ಷಕರಾದ ಜಗದೀಶ್ , ಅನಿಲ್ ಕುಮಾರ್ , ಶ್ರೀನಿಧಿ, ದೀಪಿಕಾ, ಅಶ್ವಿನಿ, ನವೀನ, ಭ್ರಮರಾಂಭ, ವಾಣಿಶ್ರೀ, ರಾಜೇಶ್ವರಿ, ಪುಷ್ಪ ನಾಯಕ್ , ಸೂರಜ್ ಪೃಥ್ವಿ, ಸತೀಶ, ಗುರುಮಲ್ಲಯ್ಯ, ರಮೇಶ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಡಿಡಿಪಿಐ ಅವರ ಪ್ರೇರಣಾದಾಯಕ ಮಾತುಗಳಿಂದ ಉತ್ಸಾಹಿತರಾಗಿ, ತಮ್ಮ ಗುರಿ ಸಾಧನೆಗೆ ಹೊಸ ಶಕ್ತಿ ಮತ್ತು ಸ್ಫೂರ್ತಿ ಪಡೆದುಕೊಂಡರು.

ಪೋಟೊ31ಸಿಪಿಟಿ3: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಹಾಗೂ ಪಾಠ ಬೋಧನೆ ಮಾಡಿದ ಶಿಕ್ಷಣ ಇಲಾಖೆಯ ಜಿಲ್ಲಾಉಪನಿರ್ದೇಶಕ ಸ್ವಾಮಿ.