ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಸರಿಪಡಿಸಲು ಆಗ್ರಹ

Contributed bynaveena.channappa@timesofindia.com|Vijaya Karnataka
Subscribe

ಮಂಡ್ಯ ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಲೋಪಗಳನ್ನು ಸರಿಪಡಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಸಂಘಟನೆಗಳು ಆಗ್ರಹಿಸಿವೆ. ಡಿಸೆಂಬರ್ 2024ಕ್ಕೆ ಪೂರ್ಣಗೊಳ್ಳಬೇಕಾದ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಪಾದಚಾರಿ ಮಾರ್ಗ ನಿರ್ಮಾಣದಲ್ಲಿ ಲೋಪಗಳಾಗಿವೆ. ಅತಿಕ್ರಮಣ ತೆರವುಗೊಳಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳು ಭರವಸೆ ನೀಡಿದ್ದಾರೆ.

bengaluru mysore highway work political leaders respond to public concerns

ವಿಕ ಸುದ್ದಿಲೋಕ ಮಂಡ್ಯ

ಮಂಡ್ಯ ಹೊರವಲಯದ ಅಮರಾವತಿ ಹೋಟೆಲ್ ನಿಂದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ವರೆಗೆ ನಡೆಯುತ್ತಿರುವ ಬೆಂಗಳೂರು-ಮೈಸೂರು ಹೆದ್ದಾರಿ ಹಳೆಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೂಡಲೇ ಕಾಮಗಾರಿಯ ಲೋಪವನ್ನು ಸರಿಪಡಿಸಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕೆಂದು ನಾನಾ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಯೊಂದಿಗೆ ನಗರದಲ್ಲಿಸ್ಥಳ ಪರಿಶೀಲನೆ ನಡೆಸಿದ ಬಳಿಕ ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ, ‘‘ಡಿಸೆಂಬರ್ 2024ಕ್ಕೆ ಪೂರ್ಣಗೊಳ್ಳಬೇಕಾದ ಕಾಮಗಾರಿ ಡಿಸೆಂಬರ್ 2025 ಸಮೀಪಿಸಿದ್ದರೂ ಅಪೂರ್ಣವಾಗಿದೆ. ರಾಷ್ಟೀಯ ಹೆದ್ದಾರಿ ಮಧ್ಯ ಭಾಗದಿಂದ ಇಕ್ಕೆಲಗಳಲ್ಲಿ60 ಅಡಿ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ, ಮಂಡ್ಯ ನಗರದಲ್ಲಿಒತ್ತುವರಿ ತೆರವುಗೊಳಿಸದೆ ಮನಸೋಇಚ್ಛೆ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ,’’ ಎಂದು ಆರೋಪಿಸಿದರು.

‘‘ಎಸ್ .ಡಿ.ಜಯರಾಮ್ (ನಂದಾ ಸರ್ಕಲ್ ) ವೃತ್ತದಿಂದ ಮಹಾವೀರ ವೃತ್ತದವರೆಗೆ ಪಾದಚಾರಿ ಮಾರ್ಗದ ಅಪೂರ್ಣ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹಲವಾರು ಅಪಘಾತಗಳು ಸಂಭವಿಸಿದ್ದು, ಜನರು ಗಾಯಗೊಂಡಿದ್ದಾರೆ. ಈ ಪ್ರದೇಶವು ಬ್ಯಾಂಕ್ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಈ ಮಾರ್ಗವನ್ನು ಬಳಸುತ್ತಾರೆ. ನಿಯಮಾನುಸಾರ ಪಾದಚಾರಿ ಮಾರ್ಗ ನಿರ್ಮಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ,’’ಎಂದು ದೂರಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್ .ಡಿ.ಜಯರಾಂ ಮಾತನಾಡಿ, ‘‘ಹೆದ್ದಾರಿಯ ಅತಿಕ್ರಮಣಕ್ಕೆ ಹೆದ್ದಾರಿ ಪ್ರಾಧಿಕಾರವೇ ಅವಕಾಶ ಕೊಟ್ಟಿದೆ. ನಗರದ ಆಯ್ದ ವೃತ್ತಗಳಲ್ಲಿಪ್ರಾಧಿಕಾರದಿಂದ ರಸ್ತೆ ಅತಿಕ್ರಮಿಸದಂತೆ ಎಚ್ಚರಿಕೆ ಫಲಕ ಅಳವಡಿಸಬೇಕು. ಶೀಘ್ರ ಕಾಮಗಾರಿ ಮುಗಿಸದಿದ್ದಲ್ಲಿಹೆದ್ದಾರಿ ಕಚೇರಿ ಎದುರು ಹೋರಾಟ ನಡೆಸಲಾಗುವುದು,’’ಎಂದು ಎಚ್ಚರಿಸಿದರು.

‘‘ನಗರ ವ್ಯಾಪ್ತಿಯಲ್ಲಿಈ ಹಿಂದೆ ಹೆದ್ದಾರಿ ಅತಿಕ್ರಮಣವನ್ನು ನಗರಸಭೆ ತೆರವುಗೊಳಿಸಿತ್ತು. ಆದರೆ, ಕೆಲವರು ಹೆದ್ದಾರಿ ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಹೆದ್ದಾರಿ ಅತಿಕ್ರಮಣದ ತೆರವಿಗೆ ಮುಂದಾಗಬೇಕು,’’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ , ‘‘ಪಾದಚಾರಿ ಮಾರ್ಗದ ನಿರ್ಮಾಣದಲ್ಲಿಕೆಲವು ಲೋಪಗಳಾಗಿವೆ. ಇವೆಲ್ಲವನ್ನು ಸರಿಪಡಿಸಿ ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಹೆದ್ದಾರಿ ಅತಿಕ್ರಮಣವನ್ನು ತೆರವುಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು,’’ ಎಂದು ಭರವಸೆ ನೀಡಿದರು. ರಕ್ಷಣಾ ವೇದಿಕೆಯ ಆಟೋ ಘಟಕದ ವೆಂಕಟೇಶ್ , ಮುದ್ದೇಗೌಡ, ಕುಮಾರ್ ಕನ್ನಡಿಗ, ಶಿವರಾಂ ಇತರರು ಭಾಗವಹಿಸಿದ್ದರು.

ಮಂಡ್ಯ: ಫೋಟೋ ಶೀರ್ಷಿಕೆಗಳು...

ಎಂಡಿವೈ30ಎನ್ 8

ಮಂಡ್ಯ ನಗರದಲ್ಲಿನಡೆಯುತ್ತಿರುವ ರಾಷ್ಟಿ್ರಯ ಹೆದ್ದಾರಿ ರಸ್ತೆ ಮತ್ತು ಫುಟ್ಬಾಲ್ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಸಹಾಯಕ ಎಂಜಿನಿಯರ್ ಶಿವಕುಮಾರ್ ಅವರೊಂದಿಗೆ ನಾನಾ ಸಂಘಟನೆಗಳ ಪ್ರತಿನಿಧಿಗಳು ವೀಕ್ಷಿಸಿ ಪರಿಶೀಲಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ