ಮನುಷ್ಯನಂತೆ ನಾಯಿಗೆ ಅಂತ್ಯಸಂಸ್ಕಾರ
ವಿಕ ಸುದ್ದಿಲೋಕ ಹುನಗುಂದ
ಸಾಮಾನ್ಯವಾಗಿ ಮನುಷ್ಯ ಸತ್ತರೆ ಪೆಂಡಾಲ್ ಹಾಕಿ, ಬಂಧು ಬಳಗ ಕರೆದು, ಬಾಜಾ ಭಜಂತ್ರಿ ತರಿಸಿ, ವಿಧಿ ವಿಧಾನಗಳ ಮೂಲಕ ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬ ಶ್ವಾನ ಪ್ರಿಯ ತನ್ನ ಸಾಕಿದ ನಾಯಿ ತೀರಿದ ಬಳಿಕ ಶವಸಂಸ್ಕಾರ ಮಾಡಿ ಗಮನಸೆಳೆದಿದ್ದಾರೆ.
ತಾಲೂಕಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿಇಂತಹದೊಂದು ಘಟನೆ ನಡೆದಿದೆ. ಕೇಂದ್ರದ ನಿವಾಸಿ, ಜಂಗಮ ಸಮಾಜದ ಅಧ್ಯಕ್ಷ ಪ್ರಭು ಸರಗಣಾಚಾರಿ ಕಳೆದ ಹತ್ತು ವರ್ಷದ ಹಿಂದೆ ನಾಯಿಯೊಂದನ್ನು ಸಾಕಿದ್ದರು. ಅದಕ್ಕೆ ಕೆಂಪ ಎಂದು ಹೆಸರಿಟ್ಟಿದ್ದರು. ಕೆಂಪ ಇದ್ದಕ್ಕಿದ್ದಂತೆ ಶುಕ್ರವಾರ ಮೃತಪಟ್ಟಿತ್ತು. ಇದಾದ ನಂತರ ವಿಶಿಷ್ಟ ಸಂಪ್ರದಾಯ ಮೂಲಕ ನಾಯಿಯ ಶವ ಸಂಸ್ಕಾರಕ್ಕೆ ಸಜ್ಜಾದರು.
ಸತ್ತ ನೆಚ್ಚಿನ ನಾಯಿಯನ್ನು ಮನುಷ್ಯರಂತೆ ಶವ ಸಂಸ್ಕಾರ ಮಾಡಬೇಕೆಂದು ಪ್ರಭು ಸರಗಣಾಚಾರಿ ಒತ್ತುವ ಬಂಡಿಯಲ್ಲಿನಾಯಿಯ ಕೂಡಿಸಿ ಹತ್ತಾರು ಜನ ಯುವಕರು ಸೇರಿಸಿ, ಹೂವಿನ ಹಾರ ಹಾಕಿ ವಿಶೇಷ ಪೂಜೆ ಮಾಡಿ ಪ್ರಮುಖ ಬೀದಿಯಲ್ಲಿಮೆರವಣಿಗೆ ಮಾಡಿ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದರು.
31 ಎಚ್ ಎನ್ ಡಿ 1
ಹುನಗುಂದ ತಾಲೂಕಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿಮನುಷ್ಯರಂತೆ ಶವ ಸಂಸ್ಕಾರ ಮಾಡಿ ಶ್ವಾನ ಪ್ರೀತಿ ಮೆರೆಯಲಾಯಿತು.

