ಬೆಳೆಹಾನಿ: 140 ಕೋಟಿ ರೂ. ಬಿಡುಗಡೆ

Contributed byVijaykumar.belde@timesofindia.com|Vijaya Karnataka
Subscribe

ಬೀದರ್ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ರೈತರಿಗೆ 140 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಮೊದಲ ಹಂತವಾಗಿ 17.25 ಕೋಟಿ ರೂ. ರೈತರ ಖಾತೆಗೆ ಜಮಾ ಆಗುತ್ತಿದೆ. ರಾಜ್ಯ ಸರ್ಕಾರ ಘೋಷಿಸಿದ ಹೆಚ್ಚುವರಿ 8500 ರೂ. ಮುಂದಿನ 15 ದಿನದಲ್ಲಿ ಬರಲಿದೆ. ಒಟ್ಟಾರೆ 275 ರಿಂದ 300 ಕೋಟಿ ರೂ. ಪರಿಹಾರ ಹಣ ರೈತರ ಖಾತೆಗೆ ಜಮೆಯಾಗಲಿದೆ.

crop loss release of 140 crore rupees compensation to farmers

ಚಿತ್ರ:31ಬಿಡಿಆರ್ 7

ಬೀದರ್ ನ ಜಿಪಂ ಕಚೇರಿ ಸಭಾಂಗಣದಲ್ಲಿಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.

ರೈತರ ಖಾತೆಗೆ ಪರಿಹಾರ ಜಮೆ ಪ್ರಕ್ರಿಯೆ ಆರಂಭ | ಸಚಿವ ಈಶ್ವರ ಖಂಡ್ರೆ ಹೇಳಿಕೆ (ಕಿಕ್ಕರ್ )

ಬೆಳೆಹಾನಿ: 140 ಕೋಟಿ ರೂ. ಬಿಡುಗಡೆ

ವಿಕ ಸುದ್ದಿಲೋಕ ಬೀದರ್

ಜಿಲ್ಲೆಯಲ್ಲಿಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ಒಟ್ಟು 140 ಕೋಟಿ ರೂ. ಬೆಳೆಹಾನಿ ಪರಿಹಾರ ಮೊತ್ತ ಎನ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ನಿಧಿಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿಶುಕ್ರವಾರ ಕರೆದ ಸುಧಿದ್ದಿಧಿಗೋಧಿಷ್ಠಿಧಿಯಲ್ಲಿಮಾತನಾಡಿದರು. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಅಡಿ ಒಟ್ಟು 143.34 ಕೋಟಿ ರೂ.ಗಳಲ್ಲಿಪ್ರಥಮ ಹಂತವಾಗಿ 17.25 ಕೋಟಿ ರೂ. ಹಣ ಈಗಾಗಲೇ ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

ರಾಜ್ಯ ಸರಕಾರವು ಘೋಷಣೆ ಮಾಡಿದ ಹೆಚ್ಚುವರಿ 8500 ರೂ. ಮುಂದಿನ 15 ದಿನದೊಳಗೆ ರೈತರ ಖಾತೆಗೆ ಜಮೆ ಮಾಡಲಾಗುವುದು. ಸುಮಾರು 130 ಕೋಟಿ ರೂ. ಇದಾಗಲಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಹಾಗೂ ರಾಜ್ಯ ಸರಕಾರದ ಹೆಚ್ಚುವರಿ 8500 ರೂ. ಸೇರಿ ಒಟ್ಟು ಅಂದಾಜು 275ರಿಂದ 300 ಕೋಟಿ ರೂ. ರೈತರ ಬೆಳೆಹಾನಿ ಪರಿಹಾರದ ಹಣ ಮುಂಬರುವ 15 ದಿನದೊಳಗೆ ರೈತರ ಖಾತೆಗೆ ಜಮೆಯಾಗಲಿದೆ ಎಂದು ತಿಧಿಳಿಧಿಸಿಧಿದಧಿರು.

ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗಿದೆ. ಜೂನ್ , ಜುಲೈನಲ್ಲಿಮಳೆ ಕೊರತೆಯಾಗಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿಅಧಿಕ ಮಳೆಯಿಂದಾಗಿ ಬೆಳೆ, ಮನೆ ಪ್ರಾಣಿ, ಮೂಲಸೌಕರ್ಯಗಳು ಸೇರಿ ಇತರೆ ಹಾನಿ ಸಂಭವಿಸಿದೆ.

1,67,202.78 ಹೆಕ್ಟೇರ್ ಪ್ರದೇಶ ಬೆಳೆಹಾನಿಯಾಗಿದೆಂದು ಪ್ರಾಥಮಿಕ ಸಮೀಕ್ಷೆಯಲ್ಲಿತಿಳಿದಿದ್ದು, ಪರಿಹಾರ ತಂತ್ರಾಂಶದಲ್ಲಿ1,68,653.94 ಹೆಕ್ಟೇರ್ ಪ್ರದೇಶ ಬೆಳೆಹಾನಿ ದಾಖಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಜಿಲ್ಲಾಅರಣ್ಯ ಸಂರಕ್ಷಣಾಧಿಕಾರಿ ಅಶೀಷರೆಡ್ಡಿ ಇದ್ದರು.

*ಬಾಕ್ಸ್ *

* ಉದ್ದು ಖರೀದಿ ಆಗಿಲ್ಲ

ಜಿಲ್ಲೆಯ 6 ತಾಲೂಕುಗಳಲ್ಲಿತಲಾ 6 ಉದ್ದು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1204 ರೈತರು ಮಾತ್ರ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಎಫ್ ಎಕ್ಯೂ ಗುಣಮಟ್ಟದಲ್ಲಿಯಾವುದೇ ಉದ್ದು ಬಾರದ ಹಿಧಿನ್ನೆಲೆಯಲ್ಲಿಒಬ್ಬ ರೈತರ ಉದ್ದು ಖರೀದಿಸಲು ಸಾಧ್ಯವಾಗಲಿಲ್ಲಎಂದು ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. 7800 ರೂ. ಉದ್ದು ಬೆಳೆಗೆ ಎಂಎಸ್ ಪಿ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಹೆಸರು ಬೆಳೆ ಮಾರಾಟಕ್ಕಾಗಿ 1713 ರೈತರ ಹೆಸರು ನೋಂದಣಿಯಾಗಿದೆ. 8768 ರೂ. ಎಂಎಸ್ ಪಿ ಬೆಂಬಲ ಬೆಲೆ ಇದೆ. ಇದರಲ್ಲಿಬರೀ ಮೂವರು ರೈತರ 18.50 ಕ್ವಿಂಟಾಲ್ ಹೆಸರು ಖರೀದಿಸಲಾಗಿದೆ. 121 ಸೋಯಾಬಿನ್ ಖರೀದಿ ಕೇಂದ್ರಗಳು ಸ್ಥಾಪಿಸಿದ್ದು, ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದುವರೆಗೆ 9 ಜನರ 63 ಕ್ವಿಂಟಾಲ್ ಖರೀದಿಸಲಾಗಿದೆ ಎಂದು ಹೇಳಿದರು. ಉದ್ದು, ಹೆಸರು ಮತ್ತು ಸೋಯಾಬಿನ್ ಖರೀದಿ ಕೇಂದ್ರಗಳು ಸ್ಥಾಪಿಸಲಾಗಿದ್ದು, ಗುಣಮಟ್ಟದ ಸಮಸ್ಯೆಯಿಂದ ಸ್ವಲ್ಪ ತೊಂದರೆ ಉಂಟಾಗುತ್ತಿದೆ. ಈ ಕುರಿತು ಕೃಷಿ ಸಚಿವ ಮತ್ತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ರೈತರ ಈ ಸಮಸ್ಯೆ ನಿವಾರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

*ಬಾಕ್ಸ್ *

150 ಕೋಟಿಗೂ ಅಧಿಕ ಬೆಳೆವಿಮೆ

ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿಸುಮಾರು 2,04,019 ಪ್ರಸ್ತಾವನೆಗಳನ್ನು ಪಿಎಂಎಫ್ ಬಿವೈ ಯೋಜನೆಯಡಿ ನೋಂದಾಯಿಸಲಾಗಿದ್ದು, ಒಟ್ಟು 1,22,061 ಹೆಕ್ಟೇರ್ ಪ್ರದೇಶ ಬೆಳೆ ವಿಮೆಯಡಿ ಧಿನೋಂದಾಯಿಸಿದೆ. ಅಂದಾಜು ಶೇ.30ರಷ್ಟು ಬೆಳೆ ಹಾನಿ ಆಗಿದೆ. ಅಂದಾಜು 150ಕ್ಕೂ ಅಧಿಕ ಕೋಟಿ ರೂ.ಬೆಳೆವಿಮೆ ಪರಿಹಾರ ಬರಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಬೆಳೆವಿಮೆ ಕಂತು ಪಾವತಿಸಿದ ರೈತರಿಗೆ ನ್ಯಾಯ ಸಿಗಲಿದೆ. ಈಗಾಗಲೇ ಕೃಷಿ, ತೋಟಗಾರಿಕೆ, ಕಂದಾಯ ಮತ್ತು ವಿಮೆ ಕಂಪನಿ ಅವರು ಪಾರದರ್ಶಕವಾಗಿ ಸಮೀಕ್ಷೆ ನಡೆಸುತ್ತಿದ್ದು, ಶೀಘ್ರವೇ ಅಂತಿಮ ವರದಿ ಬರಲಿದೆ. ಮುಂಬರುವ ನ.15ರೊಳಗೆ ಬೆಳೆವಿಮೆ ಬಗ್ಗೆ ಮಾಹಿತಿ ಸಿಗಲಿದೆ ಎಂದರು.

*ಬಾಕ್ಸ್ *

ವಾರದೊಳಗೆ ಬ್ರಿಮ್ಸ್ ಗೆ ಕಾಯಕಲ್ಪ

ಬ್ರಿಮ್ಸ್ ಆಸ್ಪತ್ರೆಯ ನೆಲ ಮಹಡಿಯಲ್ಲಿನೀರು ಹೊರ ಹಾಕುವ ಪ್ರಯತ್ನ ಮಾಡಿಲ್ಲ. 40 ವೈದ್ಯರ ನೇಮಕಾತಿ, ವಜಾ, ಸಂಬಳಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬ್ರಿಮ್ಸ್ ಆಸ್ಪತ್ರೆ ವಿವಾದಕ್ಕೆ ಸಿಲುಕಿದೆ. ಸಾರ್ವಜನಿಕರಿಗೆ ನಾನಾ ದೂರುಗಳು ಕೇಳಿ ಬಂದಿವೆ. ಔಷಧ ಖರೀದಿಯಲ್ಲೂಅವ್ಯವಹಾರ ನಡೆದಿದೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಶೀಘ್ರವೇ ಪತ್ರ ಬರೆದು ಸಮಸ್ಯೆ ಬಗೆಹರಿಸಲಾಗುವುದು. ಬ್ರಿಮ್ಸ್ ನಿರ್ದೇಶಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವಾರದೊಳಗೆ ಬ್ರಿಮ್ಸ್ ಗೆ ಕಾಯಕಲ್ಪ ಕೊಡಲಾಗುವುದು ಎಂದು ಭರವಸೆ ನೀಡಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ