ನಿತ್ಯದರ್ಶಿ 01 ನವೆಂಬರ್ 2025
ಕೆ.ಸುಬ್ರಹ್ಮಣ್ಯ ಆಚಾರ್ಯ, ಹಿರಿಯಂಗಡಿ, ಕಾರ್ಕಳ
----------
ಮೇಷ: ಪ್ರಸ್ತುತ ನೀವು ಮಾಡುತ್ತಿರುವ ಉದ್ಯೋಗದಲ್ಲಿಬದಲಾವಣೆ ಮಾಡಿಕೊಳ್ಳುವ ಸೂಚನೆ ಕಂಡುಬರುತ್ತಿದೆ. ಕುಜ, ಬುಧ ಅಷ್ಟಮದಲ್ಲಿದ್ದು ಅನಾರೋಗ್ಯದ ಬಗ್ಗೆ ಎಚ್ಚರವಾಗಿರಿ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮ ಪಡಬೇಕು.
ಅದೃಷ್ಟ ಸಂಖ್ಯೆ :05
----------
ವೃಷಭ: ದೈವಾನುಗ್ರಹದ ಕೊರತೆಯ ಕಾರಣದಿಂದ ದೈನಂದಿನ ಜೀವನದಲ್ಲಿಸಹೋದರ ವರ್ಗದವರಿಂದ ಅನ್ಯೋನ್ಯತೆಯ ಇರುವುದಿಲ್ಲ. ಹೊಸತನ ನಿಮ್ಮ ಸಾಧನೆಗೆ ಪೂರಕವಾಗಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿದೆ.
ಅದೃಷ್ಟ ಸಂಖ್ಯೆ : 04
----------
ಮಿಥುನ: ನಿರೀಕ್ಷೆಯಂತೆ ಆರ್ಥಿಕ ಸ್ಥಿತಿ ಉತ್ತಮಗೊಂಡು ಸಂಸಾರ ಸುಖ ಸರಿತೂಗಿಸ ಬಹುದು. ಆತ್ಮ ವಿಮರ್ಶೆಗೆ ಸಕಾಲ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಕಾಲ. ತಾಯಿಯ ಅನಾರೋಗ್ಯದ ಬಗ್ಗೆ ಗಮನವಿರಲಿ.
ಅದೃಷ್ಟ ಸಂಖ್ಯೆ : 03
--------
ಕರ್ಕಾಟಕ: ವ್ಯವಹಾರದಲ್ಲಿಆಗಾಗ ಏರುಪೇರುಗಳು ಇರುತ್ತವೆ. ಮನಸ್ಸಿನ ಸುಪ್ತ ಆಸೆಗಳು ನೆರವೇರುವ ಕಾಲ. ಯಾವುದೇ ವಾದ ವಿವಾದಗಳಿಗೆ ಸಿಲುಕದೆ ಮುಂದುವರಿಯಿರಿ. ಅಸಾಧ್ಯವಾದದ್ದೂ ಸಾಧ್ಯವಾಗಲಿದೆ.
ಅದೃಷ್ಟ ಸಂಖ್ಯೆ : 02
------------
ಸಿಂಹ: ನೀವು ತೆಗೆದುಕೊಳ್ಳುವ ನಿರ್ಧಾರಗಳು ಅಚಲವಾಗಿರದೆ ಋುಣಾತ್ಮಕ ಚಿಂತೆಗಳು ಕಾಡಲಿವೆ. ಗುರು ವ್ಯಯದಲ್ಲಿ, ಶನಿ ಅಷ್ಟಮದಲ್ಲಿಇರುವುದೇ ಇದಕ್ಕೆ ಕಾರಣ. ಒಳ್ಳೆಯ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ.
ಅದೃಷ್ಟ ಸಂಖ್ಯೆ : 01
-----
ಕನ್ಯಾ: ನಿವೃತ್ತರು ಪ್ರವೃತ್ತಿಯಲ್ಲಿತಮ್ಮನ್ನು ತೊಡಗಿಸಿ ಕೊಳ್ಳುವುದು ಅವಶ್ಯ. ರಾಜಕೀಯ ರಂಗವೆನ್ನುವುದು ನಿಮ್ಮಲ್ಲಿರುವ ಚಾಣಾಕ್ಷತನವನ್ನು ಅವಲಂಭಿಸಿದೆ. ಸಾಮಾಜಿಕವಾಗಿ ವಿವಿಧ ಅವಕಾಶಗಳು ಒದಗಿ ಬರಲಿವೆ.
ಅದೃಷ್ಟ ಸಂಖ್ಯೆ : 08
---------
ತುಲಾ: ಅನಗತ್ಯ ವಿಚಾರಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸುವುದು ಒಳ್ಳೆಯದು. ವ್ಯವಹಾರಗಳಲ್ಲಿಲೆಕ್ಕಾಚಾರಗಳು ಸರಿಯಾಗಲಿವೆ. ಒತ್ತಡಗಳೇ ನಿಮ್ಮನ್ನು ಚುರುಕಾಗಿಸಲಿದೆ. ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ.
ಅದೃಷ್ಟ ಸಂಖ್ಯೆ : 07
----------
ವೃಶ್ಚಿಕ: ದೈವಾನುಗ್ರಹ ಉತ್ತಮವಾಗಿರುವುದರಿಂದ ಜವಾಬ್ದಾರಿಯಿಂದ ದುಡಿಯುವ ನಿಮಗೆ ಎಲ್ಲವೂ ಯಶಸ್ವಿಯಾಗಲಿವೆ. ವೈರಿಗಳು ತಾವಾಗಿಯೇ ನಿಮ್ಮಿಂದ ದೂರವಾಗಲಿದ್ದಾರೆ. ನಾಗ ದೇವರ ಸೇವೆ ಅಗತ್ಯ.
ಅದೃಷ್ಟ ಸಂಖ್ಯೆ : 08
----------
ಧನು: ನೀವು ಮಾಡುವ ಯಾವುದೇ ವ್ಯವಹಾರಗಳನ್ನು ಅವಲೋಕಿಸಿಯೇ ಮುಂದಿನ ಹೆಜ್ಜೆ ಇಡಬೇಕಾಗಲಿದೆ. ಅಷ್ಟಮದ ಗುರು , ಸುಖ ಸ್ಥಾನದ ಶನಿ ಸೂಚಿಸುವಂತೆ ಆರ್ಥಿಕ, ಆರೋಗ್ಯ ವಿಚಾರದಲ್ಲಿಎಚ್ಚರಿಕೆ ಇರಲಿ.
ಅದೃಷ್ಟ ಸಂಖ್ಯೆ :09
----------
ಮಕರ: ಸ್ಪಷ್ಟ ನಿರ್ಧಾರಗಳು ನಿಮ್ಮ ವ್ಯವಹಾರದಲ್ಲಿಹೆಚ್ಚಿನ ಭದ್ರತೆಯನ್ನು ಒದಗಿಸಿ ಕೊಡಲಿವೆ. ವೈಯಕ್ತಿಕ ಜೀವನದತ್ತ ಮನಸ್ಸನ್ನು ತಿರುಗಿಸುವುದು ಒಳ್ಳೆಯದು. ಗುರುವಿನ ಅನುಗ್ರಹವಿರುವ ಕಾರಣದಿಂದ ಸುಖಾಂಶ ಅಧಿಕವಾಗಿರುತ್ತದೆ.
ಅದೃಷ್ಟ ಸಂಖ್ಯೆ :08
----------
ಕುಂಭ: ನಿಮ್ಮ ವ್ಯವಹಾರಗಳಲ್ಲಿನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ಗುರುವಿನ ಪೂರ್ಣ ಅನುಗ್ರಹ ಇರುವುದರಿಂದ ಎಲ್ಲವನ್ನೂ ಉತ್ತಮವಾಗಿ ನಿಭಾಯಿಸಿಕೊಂಡು ಹೋಗಬಹುದು. ಸಾಂಸಾರಿಕವಾಗಿ ಹಿರಿಯರ ಸಲಹೆ ಅಗತ್ಯ.
ಅದೃಷ್ಟ ಸಂಖ್ಯೆ : 04
----------
ಮೀನ: ಅವಿವಾಹಿತರಿಗೆ ಅನಿರೀಕ್ಷಿತ ರೀತಿಯಲ್ಲಿವಿವಾಹ ಸಂಬಂಧಗಳು ಹುಡುಕಿಕೊಂಡು ಬರಲಿವೆ. ನಿಮ್ಮ ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳುವ ಶುಭ ಕ್ಷಣಗಳು ಜೀವನದಲ್ಲಿಬರಲಿವೆ. ಮಾಡಿರುವ ಸಾಲಗಳು ಮುಗಿದು ಹೋಗಲಿವೆ.
ಅದೃಷ್ಟ ಸಂಖ್ಯೆ : 06

