ಫೋಟೊ : 31ಸುರ್ 1
ಸುರಪುರ ರಾಷ್ಟ್ರೀಯ ಏಕತಾ ದಿವಸ ನಿಮಿತ್ತ ಮ್ಯಾರಥಾನ್ ಗೆ ಡಿವೈಎಸ್ ಪಿ ಚಾಲನೆ ನೀಡಿದರು.
ರಾಷ್ಟ್ರೀಯ ಏಕತಾ ದಿವಸ | ಮ್ಯಾರಥಾನ್ ಗೆ ಡಿವೈಎಸ್ಪಿ ಜಾವೇದ್ ಚಾಲನೆ
ಸುರಕ್ಷತೆ ಅರಿವು ಮೂಡಿಸುವ ಉದ್ದೇಶ
ವಿಕ ಸುದ್ದಿಲೋಕ ಸುರಪುರ
ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಸರ್ದಾರ ವಲ್ಲಭಭಾಯಿ ಪಟೇಲರ್ 150ನೇ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿಸುರಕ್ಷತೆ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವುದು ಪೊಲೀಸ್ ಇಲಾಖೆ ಏರ್ಪಡಿಸಿರುವ ಮ್ಯಾರಥಾನ್ ನ ಉದ್ದೇಶವಾಗಿದೆ ಎಂದು ಡಿವೈಎಸ್ಪಿ ಜಾವೇದ್ ಇನಾಮದಾರ್ ತಿಳಿಸಿದರು.
ಸಮೀಪದ ತಿಮ್ಮಾಪುರ ಬಸ್ ನಿಲ್ದಾಣದಲ್ಲಿಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ (ಏಕತೆಗಾಗಿ ಓಟ) ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಮ್ಯಾರಥಾನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲಇದು ದಿನಾಲು ನಡೆಯುವ ಪ್ರಕ್ರಿಯೆಯಾಗಿದೆ. ಯುವಕರು ದಿನ ನಿತ್ಯ ಆಟದ ಮೈದಾನದಲ್ಲಿಕ್ರಮಬದ್ದವಾಗಿ ಓಟ, ವ್ಯಾಯಾಮ, ಧ್ಯಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದು ಭವಿಷ್ಯದಲ್ಲಿಪೊಲೀಸ್ ಮತ್ತು ಸೇನೆ ಸೇರ್ಪಡೆಗೆ ಅನುಕೂಲವಾಗಲಿದೆ ಎಂದರು.
ಪಿಐ ಉಮೇಶ ನಾಯಕ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನ ನಿಮಿತ್ತ ರಾಷ್ಟ್ರೀಯ ಐಕ್ಯತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಓಟದಲ್ಲಿನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ತಿಮ್ಮಾಪುರ ಬಸ್ ನಿಲ್ದಾಣದಿಂದ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ನಡೆಯಿತು. ಮ್ಯಾರಥಾನ ಓಟದಲ್ಲಿವಿಜೇತರರಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಯಲ್ಲಾಲಿಂಗ (ಪ್ರಥಮ), ಎಸ್ಪಿ ಕಾಲೇಜಿನ ದೇವರಾಜ (ದ್ವಿತೀಯ), ಮೌನೇಶ (ತೃತೀಯ). ಬಾಲಕಿಯರ ವಿಭಾಗದಲ್ಲಿಎಸ್ಪಿ ಕಾಲೇಜಿನ ರೋಹಿಣಿ (ಪ್ರಥಮ), ಮಾಳಮ್ಮ (ದ್ವಿತೀಯ), ಮಲ್ಲಮ್ಮ (ತೃತೀಯ) ಸ್ಥಾನ ಪಡೆದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಸ್ವೀಕರಿಸಿದರು.
ಪಿಎಸ್ ಐಗಳಾದ ಶರಣಪ್ಪ ಹವಲ್ದಾರ್ ಸಿದ್ದಣ್ಣ ಯಡ್ರಾಮಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಲಭೀಮ ದೇಸಾಯಿ, ಅಂಬೇಡ್ಕರ್ ಕಾಲೇಜು ಪ್ರಾಂಶುಪಾಲ ನಾಗಣ್ಣ ಪೂಜಾರಿ, ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ರಾಮನಗೌಡ ಪಾಟೀಲ್ , ಶ್ರೀಪ್ರಭು ಕಾಲೇಜಿನ ಉಪನ್ಯಾಸಕ ವೀರುಪಾಕ್ಷಿ, ದೈಹಿಕ ನಿರ್ದೇಶಕ ಡಾ.ರಮೇಶ ಶÜಹಾಪುರಕರ್ , ನಿಷ್ಠಿ ಕಾಲೇಜಿನ ಉಪನ್ಯಾಸಕ ಸಿದ್ದಣ್ಣ, ಲಿಂಗರಾಜ ಸೇರಿ ಇತರರಿದ್ದರು. ಎಸ್ ಟಿಒ ಸಣ್ಣೆಕ್ಕೆಪ್ಪ ಕೊಂಡಿಕಾರ ಪ್ರಾಸ್ತಾವಿಕ ಮಾತನಾಡಿದರು. ಪೊಲೀಸ್ ಪೇದೆ ದಯಾನಂದ ಜಮಾದಾರ್ ಏಕತಾ ದಿನದ ಪ್ರಮಾಣ ವಚನ ಬೋಧಿಸಿದರು.
