ಪೋಕ್ಸೋ ಕಾಯಿದೆಯಿಂದ ಮಕ್ಕಳ ಹಕ್ಕು ರಕ್ಷಣೆ

Contributed byvenki_dhreporter@rediffmail.com|Vijaya Karnataka

ಕೆಜಿಎಫ್‌ ತಾಲೂಕಿನಲ್ಲಿ ಪೋಕ್ಸೋ ಕಾಯಿದೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಮಕ್ಕಳ ಹಕ್ಕು ರಕ್ಷಣೆಗಾಗಿ ರೂಪಿಸಲಾದ ಈ ಕಾಯಿದೆ, ಅಪರಾಧಿಗಳಿಗೆ ಶೀಘ್ರ ಶಿಕ್ಷೆ ನೀಡಲು ಸಹಕಾರಿಯಾಗಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನು ಅರಿವು ಅತ್ಯಗತ್ಯ. ಅಸಭ್ಯ ವರ್ತನೆಗೂ ಕಠಿಣ ಶಿಕ್ಷೆ ಇದೆ. ಧೈರ್ಯವಾಗಿ ಮುಂದೆ ಬಂದು ದೂರು ನೀಡಲು ವಿದ್ಯಾರ್ಥಿನಿಯರಿಗೆ ಸಲಹೆ ನೀಡಲಾಯಿತು.

protection of childrens rights through pocso act our opinions

ವಿಕ ಸುದ್ದಿಲೋಕ ಕೆಜಿಎಫ್

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೋಕ್ಸೋ ಕಾಯಿದೆ ರೂಪಿಸಲಾಗಿದೆ. ಪೋಕ್ಸೋ ಕಾಯಿದೆ ಜಾರಿಗೆ ಬಂದ ನಂತರ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ನೀಡಲು ಸಹಕಾರಿಯಾಗಿದೆ ಎಂದು ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ಅಭಿಪ್ರಾಯಪಟ್ಟರು.

ಬೇತಮಂಗಲ ಸರಕಾರಿ ಪ್ರೌಢಶಾಲೆಯಲ್ಲಿಹಮ್ಮಿಕೊಂಡಿದ್ದ, ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕಾನೂನು ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಕ್ಸೋ ಕಾಯಿದೆ ಅರಿವು ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆ ಇಲ್ಲದೆ ಜಗತ್ತು ಇಲ್ಲ, ಹೆಣ್ಣು ಒಬ್ಬ ಶಕ್ತಿ ಸ್ವರೂಪಿಣಿ. ಅಂತಹ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಹೆಣ್ಣು ಮಕ್ಕಳ ರಕ್ಷಣೆ ಮಾಡಲು ನಮ್ಮ ದೇಶದಲ್ಲಿವಿಶೇಷ ಕಾನೂನು ರೂಪಿಸಿದ್ದು, ಕಾನೂನು ಅರಿವುವನ್ನು ಮೂಡಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೋಕ್ಸೋ ಕಾಯಿದೆ ರೂಪಿಸಲಾಗಿದೆ. ಪೋಕ್ಸೋ ಕಾಯಿದೆ ಜಾರಿಗೆ ಬಂದ ನಂತರ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ನೀಡಲು ಸಹಕಾರಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್ ಕುಮಾರ್ ಎಂ. ಅಭಿಪ್ರಾಯಪಟ್ಟರು.

ಶಾಲಾ ಆವರಣ, ಸಾರ್ವಜನಿಕ ಸ್ಥಳ ಹೀಗೆ ಯಾವುದೇ ಸ್ಥಳದಲ್ಲಿನಿಮಗೆ ಸಮಸ್ಯೆಯಾದಲ್ಲಿ, ಯಾರಾದರೂ ಅಸಭ್ಯವಾಗಿ ವರ್ತಿಸಿದಾಗ ಹೆದರದೇ ಪೊಲೀಸರಿಗೆ ಮಾಹಿತಿ ಕೊಡಿ. ಕಾನೂನು ನಿಮಗೆ ರಕ್ಷಣೆ ನೀಡಲಿದೆ ಎಂದರು.

‘ಪೋಕ್ಸೋ ಕಾಯಿದೆ ಪ್ರಕಾರ ದೌರ್ಜನ್ಯವೆಸಗುವ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಸ್ವರೂಪ ಕಠಿಣವಾಗಿವೆ. ಅಸಭ್ಯ ನಡವಳಿಕೆಯನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಕನಿಷ್ಠ 5 ವರ್ಷದ ಶಿಕ್ಷೆಗೆ ಅರ್ಹವಾದ ಅಪರಾಧವಾಗಿದೆ. ಪಾಲಕರು ತಪ್ಪು ಎಸಗಿದರೂ ಶಿಕ್ಷಾರ್ಹ. ಸಮಾಜದಲ್ಲಿನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ವಿದ್ಯಾರ್ಥಿನಿಯರು ಧೈರ್ಯವಾಗಿ ಮುಂದೆ ಬರಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶೆಮಿದ.ಕೆ ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಎಸ್ .ಎನ್ .ರಾಜಗೋಪಾಲಗೌಡ ಮಾತನಾಡಿ, ಕಾನೂನನ್ನು ಗೌರವಿಸುವ, ಪಾಲಿಸುವ ಧೋರಣೆ ಬೆಳೆಸಿಕೊಳ್ಳಬೇಕು. ನಾವುಗಳು ಬೇರೆಯವರ ಹಕ್ಕುಗಳನ್ನು ಗೌರವಿಸುವುದು ಕಾನೂನನ್ನು ಪಾಲಿಸುವ ಮೊದಲ ಹೆಜ್ಜೆ. ಕಾನೂನು ಅರಿವಿನ ಕೊರತೆ ಇರುವವರಲ್ಲಿಕಾನೂನು ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್ , ಕಾರ ್ಯದರ್ಶಿ ನಾಗರಾಜ್ , ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ಕೌಶಿಕ್ ಸಿ., ಬೇತಮಂಗಲ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಂಗಶಾಮಯ್ಯ, ಕಾನೂನು ಅರಿವು ಕುರಿತು ಸವಿಸ್ತಾರವಾಗಿ ಮಂಡಿಸಿದರು.

ಸಿಡಿಪಿಒ ರಾಜೇಶ್ , ಪಿಡಿಒ ವಸಂತ್ ಕುಮಾರ್ , ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಂಜುಮ್ ಮೊಹಮದಿ, ವಕೀಲರಾದ ಪರಮೇಶ್ವರ್ , ಕಾನೂನು ನೆರವು ಸಂಯೋಜಕರಾದ ವಿದ್ಯಾ ಸಿ. ಹಾಗೂ ಠಾಣಾಧಿಕಾರಿ ಗುರುಶಾಲಚಿಂತಕಾಲ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಕಾರ ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

31ಕೆಜಿಎಫ್ 2: ಬೇತಮಂಗಲ ಗ್ರಾಮೀಣ ಪ್ರೌಢಶಾಲೆಯಲ್ಲಿಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.