ವಿಕ ಸುದ್ದಿಲೋಕ ನೆಲಮಂಗಲ( ಬೆಂಗಳೂರು ಗ್ರಾಮಾಂತರ ಜಿಲ್ಲೆ) :
ಮುಸ್ಲಿಂ ಸಮುದಾಯದವರ ಮದುವೆಯಲ್ಲಿತಿಲಕವಿಟ್ಟು ಊಟಕ್ಕೆ ಕುಳಿತ ವ್ಯಕ್ತಿಯನ್ನು ಊಟ ಮಾಡುವಂತಿಲ್ಲತಡೆದು ವಾಪಸ್ ಕಳುಹಿಸಿದ್ದಾರೆನ್ನುವ ಸಂಬಂಧದ ವಿಡಿಯೊ ಜಾಲತಾಣದಲ್ಲಿವೈರಲ್ ಆಗಿದೆ.
ತಾಲೂಕಿನ ಇಸ್ಲಾಂಪುರದ ಸಮಿವುಲ್ಲಾ ಮಗ ಮುಜಾಮಿಲ್ ಪಾಷ ಹಾಗೂ ಸಾನಿಯಾ ಎಂಬುವವರ ಮದುವೆಯು ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಈ ಸಮಾರಂಭಕ್ಕೆ ಸಾನಿಯಾ ಕಡೆಯವರ ಆಹ್ವಾನದ ಮೇರೆಗೆ ರಾಜು ಎಂಬುವರು ಹೋಗಿದ್ದರು. ಅವರು ಊಟ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸಮೀವುಲ್ಲಾ, ರಾಜು ಹಣೆಯಲ್ಲಿತಿಲಕ ನೋಡಿ, ‘‘ನಿಮ್ಮನ್ನು ಯಾರು ಕರೆದವರು, ನೀವು ಊಟ ಮಾಡಬಾರದು, ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ,’’ ಎಂದು ಅವಮಾನ ಮಾಡಿದ್ದಾರೆ ಎಂದು ರಾಜು ಆರೋಪ ಮಾಡಿದ್ದಾರೆ. ಸಮೀವುಲ್ಲಾಹಾಗೂ ರಾಜು ನಡುವಿನ ಮಾತುಗಳ ವಿಡಿಯೊ ಜಾಲತಾಣದಲ್ಲಿವೈರಲ್ ಆಗಿದೆ.
ದೂರು ಬಂದಿಲ್ಲ:
‘‘ಮುಸ್ಲಿಂ ಮದುವೆಯಲ್ಲಿಹಿಂದೂ ವ್ಯಕ್ತಿಗೆ ತಿಲಕವಿಟ್ಟಿದ್ದಾನೆ ಎಂಬ ಕಾರಣಕ್ಕಾಗಿ ಊಟ ನಿರಾಕರಿಸಲಾಗಿದೆ ಎಂಬ ಕುರಿತಂತೆ ಯಾವುದೇ ದೂರು ಬಂದಿಲ್ಲ,’’ ಎಂದು ನೆಲಮಂಗಲ ಟೌನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
‘‘ಜಾಲತಾಣಗಳಲ್ಲಿಹರಿದಾಡುತ್ತಿರುವ ವಿಡಿಯೊ ಸಂಬಂಧ ಮಾಹಿತಿ ಪಡೆದಿದ್ದು, ವಿಡಿಯೊ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುತ್ತಿದೆ,’’ ಎಂದೂ ಪೊಲೀಸರು ತಿಳಿಸಿದ್ದಾರೆ.
31ನೆಲಪಿಹೆಚ್ 1: ನೆಲಮಂಗಲ ನಗರದ ಸಮೀಪದ ಕಲ್ಯಾಣ ಮಂಟಪದಲ್ಲಿನಡೆದ ವಾಗ್ವಾದದ ಚಿತ್ರ

