ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ
ವಿಕ ಸುದ್ದಿಲೋಕ ವಿಜಯಪುರ
ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತತ್ತಮಂಗಲ ಗ್ರಾಮದ ಚರಂಡಿಗಳಲ್ಲಿಗಿಡಗಳು ದಟ್ಟವಾಗಿ ಬೆಳೆದಿದ್ದು, ಈ ಗಿಡಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿನ ಎಲ್ಲಾಚರಂಡಿಗಳಲ್ಲಿಕಸಕಡ್ಡಿಗಳು ತುಂಬಿಕೊಂಡಿವೆ. ಮನೆಗಳಲ್ಲಿಉಪಯೋಗಿಸಿ ಹೊರಗೆ ಬಿಟ್ಟ ನೀರು, ಚರಂಡಿಗಳಲ್ಲಿಹರಿಯಲು ಅವಕಾಶವಿಲ್ಲದಂತಾಗಿದೆ. ಇದರಿಂದ ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿಯ ಜತೆಗೆ, ಚರಂಡಿಗಳಿಂದ ಬೀರುವ ದುರ್ವಾಸನೆಗೆ ಮನೆಗಳಲ್ಲಿನೆಮ್ಮದಿಯಿಂದ ವಾಸ ಮಾಡಲು ತುಂಬಾ ಕಷ್ಟವಾಗಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗುತ್ತಿಲ್ಲಎಂದು ದೂರಿದ್ದಾರೆ.
ಇಲ್ಲಿನ ಸರಕಾರಿ ಶಾಲೆಯ ಮುಂಭಾಗದಲ್ಲೂಗಿಡಗಳು ಬೆಳೆದು ನಿಂತಿದ್ದರೂ, ತೆರವುಗೊಳಿಸಿ ಸ್ವಚ್ಚಗೊಳಿಸುವ ಗೋಜಿಗೆ ಯಾವೊಬ್ಬರೂ ಕ್ರಮ ವಹಿಸಿಲ್ಲ. ಶಾಲೆಯ ಕಾಂಪೌಂಡ್ ಮುಂದೆ ದೇವಸ್ಥಾನವಿದ್ದು, ಅದರ ಅಕ್ಕಪಕ್ಕದಲ್ಲಿಗಿಡಗಳು ಬೆಳೆದಿವೆ. ಆಗಾಗ ಹಾವುಗಳ ದರ್ಶನವೂ ಆಗುತ್ತಿದೆ. ಶಾಲೆಯ ಮಕ್ಕಳು ಇಲ್ಲಿಆಟವಾಡುತ್ತಾರೆ. ಓಡಾಡುತ್ತಾರೆ. ಮಕ್ಕಳಿಗೇನಾದರೂ ತೊಂದರೆಯಾದರೆ, ಯಾರು ಹೊಣೆ?. ಗ್ರಾಮ ಪಂಚಾಯಿತಿ ಅಧಿಧಿಕಾರಿಗಳು ಇತ್ತ ಗಮನಹರಿಸಿ, ಗ್ರಾಮದಲ್ಲಿನ ಎಲ್ಲಾಚರಂಡಿಗಳಲ್ಲಿತುಂಬಿರುವ ಹೂಳು ತೆಗೆದು, ಗಿಡಗಳನ್ನು ತೆರವುಗೊಳಿಸಿ, ಬ್ಲಿಚಿಂಗ್ ಪೌಡರ್ ಹಾಕುವ ಮೂಲಕ ಗ್ರಾಮದಲ್ಲಿಅನೈರ್ಮಲ್ಯ ಕಾಡದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕೋಟ್ .
ಈಗಾಗಲೇ ದೊಡ್ಡತತ್ತಮಂಗಲ ಗ್ರಾಮದಲ್ಲಿಚರಂಡಿಗಳೆಲ್ಲಾಸ್ವಚ್ಛಗೊಳಿಸಲಾಗಿದೆ. ಯಾವುದೇ ಚರಂಡಿಯಲ್ಲಿಗಿಡಗಳು ಬೆಳೆದಿಲ್ಲ. ಸ್ವತಃ ಎಂಜಿನಿಯರ್ ಅವರೇ ಹೋಗಿ, ಪರಿಶೀಲನೆ ಮಾಡಿಕೊಂಡು ಬಂದು ಬಿಲ್ ಕೊಟ್ಟಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಗಿಡಗಳು ಪುನಃ ಬೆಳೆದಿರಬಹುದು.
-ಮುನಿರಾಜು, ಪಿಡಿಒ, ಮಂಡಿಬೆಲೆ ಗ್ರಾಮ ಪಂಚಾಯಿತಿ
31.ವಿಜೆಪಿ 01: ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮುದ್ದೇನಹಳ್ಳಿ ಗ್ರಾಮದಲ್ಲಿನ ಚರಂಡಿಯಲ್ಲಿಬೆಳೆದಿರುವ ಗಿಡಗಳು.
