ಸಮೀಕ್ಷೆ ಅಂತ್ಯ: ಶೇ.89ರಷ್ಟು ಜನ ಸಮೀಕ್ಷೆ ಪೂರ್ಣ ಆನ್ ಲೈನ್ ಮೂಲಕ ನ.10ರವರೆಗೆ ಅವಕಾಶ
Contributed by: Keerthi Prasad|Vijaya Karnataka•
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶುಕ್ರವಾರ ಅಂತ್ಯಗೊಂಡಿದೆ. ರಾಜ್ಯಾದ್ಯಂತ ಶೇ.89ರಷ್ಟು ಜನರ ಸಮೀಕ್ಷೆ ಪೂರ್ಣಗೊಂಡಿದೆ. ಆನ್‌ಲೈನ್ ಮೂಲಕ ಸ್ವಯಂ ಸಮೀಕ್ಷೆಗೆ ನ.10ರವರೆಗೆ ಅವಕಾಶ ನೀಡಲಾಗಿದೆ. ಸೆ.22ರಂದು ಆರಂಭವಾದ ಸಮೀಕ್ಷೆ ಎರಡು ಬಾರಿ ಗಡುವು ವಿಸ್ತರಣೆ ಬಳಿಕ ತೆರೆ ಕಂಡಿತು. ಜಿಬಿಎ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಶೇ.97.51ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ಬೆಂಗಳೂರು: ರಾಜ್ಯಾದ್ಯಂತ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶುಕ್ರವಾರಕ್ಕೆ ಶೇ.89ರಷ್ಟು ಪೂರ್ಣಗೊಂಡಿದೆ. ಆನ್‌ಲೈನ್ ಮೂಲಕ ಸ್ವಯಂ ಸಮೀಕ್ಷೆಗೆ ನವೆಂಬರ್ 10ರವರೆಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 22ರಂದು ಆರಂಭವಾದ ಈ ಸಮೀಕ್ಷೆಯು ಎರಡು ಬಾರಿ ಗಡುವು ವಿಸ್ತರಣೆಗೊಂಡು ಇದೀಗ ತೆರೆ ಕಂಡಿದೆ. ಜಿಬಿಎ ವ್ಯಾಪ್ತಿ ಹೊರತುಪಡಿಸಿ ರಾಜ್ಯದಾದ್ಯಂತ ಶೇ.97.51ರಷ್ಟು ಸಮೀಕ್ಷೆ ಮುಗಿದಿದೆ.
ಜಿಬಿಎ ವ್ಯಾಪ್ತಿಯಲ್ಲಿ ಶುಕ್ರವಾರದ ಅಂತ್ಯಕ್ಕೆ 59,07,707 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಸ್ವಯಂ ಸಮೀಕ್ಷೆಗಾಗಿ https://ksis.karnataka.gov.in/ksisdchdta/ka.gov.in ವಿಳಾಸಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 8050770004 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.ರಾಜ್ಯದ ಅಂದಾಜು ಜನಸಂಖ್ಯೆ 6,85,38,000 ಇದೆ. ಅಕ್ಟೋಬರ್ 31ರವರೆಗೆ 6,13,83,908 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆಗೆ ನಿರಾಕರಿಸಿದ ಕುಟುಂಬಗಳ ಸಂಖ್ಯೆ 4,22,258. ಖಾಲಿ ಅಥವಾ ಬೀಗ ಹಾಕಿದ್ದ ಮನೆಗಳ ಸಂಖ್ಯೆ 34,49,681. ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಒಳಗಾದ ಜನಸಂಖ್ಯೆ 59,07,767.