ಗಮನ ಸೆಳೆದ ಏಕತಾ ನಡಿಗೆ
ವಿಕ ಸುದ್ದಿಲೋಕ ಹೊಸನಗರ
ಸರದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪಟ್ಟಣದಲ್ಲಿಏಕತಾ ನಡಿಗೆ ಕಾರ ್ಯಕ್ರಮ ಶುಕ್ರವಾರ ನಡೆಯಿತು.
ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನಿಂದ ಆರಂಭಗೊಂಡು, ಇಲ್ಲಿನ ಖಾಸಗಿ ಬಸ್ ನಿಲ್ದಾಣದ ವರೆಗೆ ನಡೆದ ನಡಿಗೆಯಲ್ಲಿವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಪಟ್ಟಣದ ನಾಗರಿಕರು ಹೆಜ್ಜೆ ಹಾಕಿದರು.
ಪೊಲೀಸ್ ವೃತ್ತ ನಿರೀಕ್ಷಕ ಮುತ್ತನಗೌಡ ನಡಿಗೆಗೆ ಹಸಿರು ನಿಶಾನೆ ತೋರಿ, ಏಕತಾ ನಡಿಗೆಯ ಪ್ರಮಾಣ ವಚನ ಬೋಧಿಸಿದರು. ಪ್ರಾಂಶುಪಾಲ ಡಾ.ಕೆ.ಉಮೇಶ್ ಕಾರ ್ಯಕ್ರಮಕ್ಕೆ ಶುಭಕೋರಿದರು. ದೇಶಭಕ್ತಿ ಕುರಿತ ಘೋಷಣೆಗಳು ಮೊಳಗಿದವು. ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು, ಪಿಎಸ್ ಐ ಶಂಕರಗೌಡ ಪಾಟೀಲ್ , ಹಾಲಗದ್ದೆ ಉಮೇಶ್ , ಬಿ.ಎಸ್ .ಸುರೇಶ್ , ವಿಜೇಂದ್ರ ಶೇಟ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಚಿತ್ರ:
31ಎಚ್ ಒಎಸ್ ಪಿ3:
ಹೊಸನಗರದಲ್ಲಿಸರದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಏಕತಾ ನಡಿಗೆ ಕಾರ ್ಯಕ್ರಮ ನಡೆಯಿತು.

