ಅಂಕೋಲಾ-ಗೋಕರ್ಣದಲ್ಲಿಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಜಾಥಾ
ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಉಳಿಸೋಣವಿಕ ಸುದ್ದಿಲೋಕ ಗೋಕರ್ಣ
ಮುಂದಿನ ತಲೆಮಾರಿಗೆ ಸಮೃದ್ಧ ಅರಣ್ಯ, ನದಿ ಉತ್ತಮ ಪರಿಸರ ಬಿಟ್ಟುಹೋಗಬೇಕು. ಆದರೆ ಅಘನಾಶಿನಿ , ಗಂಗಾವಳಿ ನದಿ ತಿರುವು ಯೋಜನೆ ಕಾರ ್ಯಗತವಾದರೆ ಬಹುದೊಡ್ಡ ಅನಾಹುತ ಸಂಭವಿಸಲಿದೆ. ಹೀಗಾಗಿ ಪ್ರತಿಯೊಬ್ಬರು ಇದರ ಬಗ್ಗೆ ಜಾಗೃತಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ರಾಜಗೋಪಾಲ ಅಡಿ ಗುರೂಜಿ ಹೇಳಿದರು.
ಗುರುವಾರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ಹಮ್ಮಿಕೊಂಡ ಕಾರವಾರ ಚಲೋ ಜಾಥಾದಲ್ಲಿಅವರು ಮಾತನಾಡಿದರು. ‘‘ಈ ನದಿಯನ್ನೇ ನಂಬಿಕೊಂಡ ಸಾವಿರಾರು ಮೀನುಗಾರರು, ರೈತರು ಇದ್ದಾರೆ. ಒಂದುವೇಳೆ ಈ ಎರಡು ನದಿಗಳಿಗೆ ಡ್ಯಾಂ ನಿರ್ಮಿಸಿದರೆ ನೀರಿನ ಹರಿವು ನಿಂತು ಅತಿಬೇಗ ಸಮುದ್ರದ ಉಪ್ಪುನೀರು ನದಿಗೆ ನುಗ್ಗುತ್ತದೆ. ಇದರಿಂದಾಗಿ ಬಾವಿಯ ನೀರು ಕೂಡ ಉಪ್ಪಾಗಲು ಕಾರಣವಾಗುತ್ತದೆ’’ ಎಂದರು.
‘‘20 ವರ್ಷಗಳ ಹಿಂದೆ ತದಡಿಯಲ್ಲಿಉಷ್ಣಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪುಗೊಂಡಿತ್ತು. ಆದರೆ ಸ್ಥಳೀಯರೆಲ್ಲರೂ ಸೇರಿ ಸಂಘಟಿತ ಹೋರಾಟ ನಿರಂತರವಾಗಿ ಮಾಡಿದ ಹಿನ್ನೆಲೆಯಲ್ಲಿಅಲ್ಲಿಗೆ ನಿಂತುಹೋಯಿತು. ಈ ಯೋಜನೆಯಿಂದ ಉಂಟಾಗುವ ನಷ್ಟದ ಕುರಿತು ಹಳ್ಳಿ ಹಳ್ಳಿಗೂ ತಲುಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿಸಂಘಟಿತ ಹೋರಾಟ ಅತಿಮುಖ್ಯವಾದದ್ದು. ಹಾಗೇ ಕಾರವಾರ ಚಲೋ ಕಾರ್ಯಕ್ರಮ ಶಿವನ ತಾಣ ಗೋಕರ್ಣದಿಂದಲೇ ಆರಂಭಿಸಿರುವುದರಿಂದ ಹೋರಾಟಕ್ಕೆ ಯಶಸ್ಸು ಸಿಗಲಿದೆ’’ ಎಂದು ರಾಜಗೋಪಾಲ ಅಡಿ ಗುರೂಜಿ ವಿವರಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಅನಂತ ಆಶೀಸರ ಮಾತನಾಡಿ, ‘‘ಕಳೆದ 8 ತಿಂಗಳಿಂದ ನಾವು ಹೋರಾಟದ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿಸಮಿತಿ ರಚಿಸಿಕೊಂಡು ಹೋರಾಟಕ್ಕೆ ಇಳಿದಿದ್ದೇವೆ. ನಮ್ಮ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು’’ ಎಂದರು.
ಪ್ರಮುಖರಾದ ಮೋಹನ ನಾಯಕ, ಅರುಣ ಕವರಿ, ಎನ್ .ಎಸ್ .ಹೆಗಡೆ, ಬೀರಪ್ಪ ಗೌಡ ಡಾ. ಸುರೇಶ ಹೆಗಡೆ, ಮಾಜಿ ಎಂಎಲ್ ಸಿ ಶಾಂತಾರಾಮ ಸಿದ್ದಿ, ಪ್ರಮುಖರಾದ ಜಗದೀಶ ನಾಯಕ ಮೊಗಟಾ, ಗಣಪತಿ ನಾಯ್ಕ, ಮಹೇಶ ಶೆಟ್ಟಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ನಂತರ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.
3 ಜಿ.ಕೆ.ಎನ್ 1 ಎ
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ಹಮ್ಮಿಕೊಂಡ ಕಾರವಾರ-ಅಂಕೋಲಾ-ಗೋಕರ್ಣ ಚಲೋ ಜಾಥಾದಲ್ಲಿಅವರು ಮಾತನಾಡಿದರು.