ಹಾರೂಗೇರಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ ಕಾರುಬಾರು

Curated byಶ್ರೀಲಕ್ಷ್ಮೀ ಎಚ್ಎಲ್|Vijaya Karnataka

ಹಾರೂಗೇರಿಯಲ್ಲಿ ಅ.3 ರಿಂದ 7 ರವರೆಗೆ ನಡೆಯಲಿರುವ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದಾದ್ಯಂತ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ. ಇವು ರಸ್ತೆ, ವೃತ್ತಗಳನ್ನು ಆಕ್ರಮಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ, ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಭಕ್ತರಿಗೆ ಕಿರಿಕಿರಿ ಉಂಟುಮಾಡಿ, ಪಟ್ಟಣದ ಅಂದಕ್ಕೆ ಕುತ್ತು ತಂದಿವೆ ಹಾಗೂ ಪರವಾನಗಿ ಶುಲ್ಕವಿಲ್ಲದ ಕಾರಣ ಪುರಸಭೆಗೆ ಆದಾಯ ನಷ್ಟವಾಗಿದೆ.

flex and banner hoarding in harugeri
ಹಾರೂಗೇರಿ : ಅ.3 ರಿಂದ 7 ರವರೆಗೆ ನಡೆಯಲಿರುವ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರ 42ನೇ ವೇದಾಂತ ಪರಿಷತ್‌ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ತುಂಬೆಲ್ಲಅನಧಿಕೃತ ಶುಭಾಶಯ ಬ್ಯಾನರ್‌, ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ.

ರಾಜ್ಯ ಹೆದ್ದಾರಿ ಮಧ್ಯದ ಡಿವೈಡರ್‌, ರಸ್ತೆ ಅಕ್ಕಪಕ್ಕ, ವೃತ್ತಗಳು, ಹೈಮಾಸ್ಟ್‌ ವಿದ್ಯುತ್‌ ಕಂಬ, ಮರ, ಗೋಡೆಗಳಿಗೆ ಅಳವಡಿಸಲಾಗಿರುವ ಫ್ಲೆಕ್ಸ್‌, ಬ್ಯಾನರ್‌ಗಳು ಭಕ್ತರು, ಜನಸಾಮಾನ್ಯರು, ವಾಹನಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಪ್ರಮುಖ ರಸ್ತೆ ತಿರುವುಗಳ ಮಧ್ಯ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ಗಳು ರಸ್ತೆಯನ್ನೇ ಮರೆಮಾಚಿದ್ದು, ಸವಾರರು, ಪಾದಚಾರಿಗಳ ಕಣ್ಣಿಗೆ ಗೋಚರಿಸದಂತಾಗಿ ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಜತೆಗೆ ಪಟ್ಟಣದ ಅಂದಕ್ಕೂ ಕುತ್ತಾಗಿ ಪರಿಣಮಿಸಿದೆ.


ಭಕ್ತರಿಗೆ ಕಿರಿಕಿರಿ:

ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳ ಹಾವಳಿ , ಜಾತ್ರಾ ಮಹೋತ್ಸವ ಜರುಗುವ ರಸ್ತೆಯನ್ನೂ ಆಕ್ರಮಿಸಿದೆ. ಐದು ದಿನಗಳವರೆಗೆ ನಡೆಯುವ ಜಾತ್ರೆಗೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು, ಮಹಾತ್ಮರು ಆಗಮಿಸುತ್ತಿದ್ದು, ಭಕ್ತರು ಸಂಚರಿಸುವ ದಾರಿಯಲ್ಲೇ ಅಳವಡಿಸಿರುವುದರಿಂದ ಕಿರಿಕಿರಿ ಉಂಟಾಗಿದೆ. ಪುರಸಭೆಗೆ ನಷ್ಟ: ಬೇರೆಡೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಲು ಶುಲ್ಕ ಪಾವತಿಸಿ, ಪರವಾನಗಿ ಪಡೆಯಬೇಕೆಂಬ ನಿಯಮವಿದೆ. ಆದರೆ ಹಾರೂಗೇರಿ ಪಟ್ಟಣದಲ್ಲಿಆ ನಿಯಮವೇ ರೂಪುಗೊಳ್ಳದ್ದರಿಂದ ಪುರಸಭೆಗೆ ಆದಾಯ ನಷ್ಟವಾಗಿದೆ. ಕೇಳುವವರಿಲ್ಲದ ಕಾರಣ ಹೆಜ್ಜೆಗೊಂದು ಅನಧಿಕೃತ ಬ್ಯಾನರ್‌ಗಳು ತಲೆಯೆತ್ತಿವೆ.
ಶ್ರೀಲಕ್ಷ್ಮೀ ಎಚ್ಎಲ್

ಲೇಖಕರ ಬಗ್ಗೆಶ್ರೀಲಕ್ಷ್ಮೀ ಎಚ್ಎಲ್ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ