ಬೆಳಗಾವಿಯ ಬಸವನ ಕುಡಚಿ ವೃದ್ಧಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ವೈದ್ಯಕೀಯ ಸಾಮಗ್ರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ದತ್ತಪ್ರಸಾದ ಗಿಜರೆ ವೈದ್ಯಕೀಯ ವೃತ್ತಿ ಪವಿತ್ರ ಸೇವೆ ಎಂದು ಬಣ್ಣಿಸಿದರು. ಗುರುಸಿದ್ಧ ಸ್ವಾಮೀಜಿ ವೈದ್ಯಕೀಯ ಕೋರ್ಸ್ ಅನ್ನು ಶ್ರದ್ಧೆ, ನಿಷ್ಠೆಯಿಂದ ಪೂರೈಸಿ ಸಮಾಜಮುಖಿ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿ, ಹಣಕ್ಕಿಂತ ಸೇವೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಬೆಳಗಾವಿ : ವೈದ್ಯಕೀಯ ವೃತ್ತಿ ಒಂದು ಪವಿತ್ರ ಸೇವೆ. ಐದು ವರ್ಷಗಳ ಕಾಲ ಅಧ್ಯಯನದಲ್ಲಿ ಪರಿಶ್ರಮದಿಂದ ಈ ವೃತ್ತಿಯ ಜ್ಞಾನ ಅರಿಯಬೇಕು ಎಂದು ಬಂಜೆತನ ಹಾಗೂ ಸ್ತ್ರೀರೋಗ ತಜ್ಞ ಡಾ.ದತ್ತಪ್ರಸಾದ ಗಿಜರೆ ಹೇಳಿದರು.
ತಾಲೂಕಿನ ಬಸವನ ಕುಡಚಿ ದೇವರಾಜ ಅರಸ್ ಕಾಲನಿಯ ಶ್ರೀಮತಿ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮದಲ್ಲಿಆಯೋಜಿಸಿದ್ದ ಕಾರ‍್ಯಕ್ರಮದಲ್ಲಿವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ವೈದ್ಯಕೀಯ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ''ಜೀವನದಲ್ಲಿ ಸಾಧಿಸಲು ಸಾಕಷ್ಟು ದಾರಿಗಳಿವೆ. ನೀವು ಆಯ್ದುಕೊಂಡಿರುವ ದಾರಿ ಅತ್ಯಂತ ಪವಿತ್ರವಾದದ್ದು. ಶ್ರದ್ಧೆ ನಿಷ್ಠೆಯಿಂದ ವೈದ್ಯಕೀಯ ಕೋರ್ಸ್ ಪೂರೈಸಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. ಹಣವೇ ಸರ್ವಸ್ವವಲ್ಲ, ವೈದ್ಯಕೀಯ ವೃತ್ತಿಯನ್ನು ಹಣಕ್ಕೆ ಅರ್ಪಿಸಬಾರದು,'' ಎಂದರು. ಪ್ರಾಸ್ತಾವಿಕ ಮಾತನಾಡಿದ ಡಾ.ಮಹಾಂತೇಶ ರಾಮಣ್ಣವರ, ವೈದ್ಯ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ಉತ್ತಮವಾದ ಶಿಕ್ಷಣ ಪಡೆಯಬೇಕು ಎಂದರು. ವೃದ್ಧಾಶ್ರಮದ ಸಂಯೋಜಕ ಎಂ.ಎಸ್. ಚೌಗಲಾ ಮಾತನಾಡಿದರು. ಡಾ.ರೋಹಿಣಿ ನೇಗಿನಾಳ. ಡಾ. ಸುಭಾಷ ನೇಗಿನಹಾಳ, ಕಿರಣ್ ಚೌಗುಲಾ, ಮಹೇಶ ಗುರನಗೌಡರ, ಸುಜಿತ ಮೊರಬದ, ಅಜಯ್ ಪೂಜಾರಿ ಇತರರಿದ್ದರು. ಸಂಕೇತ ಕುಲಕರ್ಣಿ, ಓಂಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ಲೇಖಕರ ಬಗ್ಗೆಶ್ರೀಲಕ್ಷ್ಮೀ ಎಚ್ಎಲ್ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ