ಸಾಗರ : ಸಾಧಕರನ್ನು ಸನ್ಮಾನಿಸುವುದು ಸತ್ಸಂಪ್ರದಾಯ. ನಮ್ಮ ನಡುವಿನ ಸಾಧಕರ ಸಾಧನೆ ಎಲ್ಲರಿಗೂ ಪ್ರೇರಣೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಸೋಮವಾರ ಶಂಕರಮಠದ ವತಿಯಿಂದ ನವರಾತ್ರಿ ಅಂಗವಾಗಿ ಹಿರಿಯ ಅರ್ಥಧಾರಿ ಎಂ.ಆರ್.ಲಕ್ಷ್ಮೀನಾರಾಯಣ ರಾವ್ ಅಮಚಿ, ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಅವರಿಗೆ 2025ನೇ ಸಾಲಿನ ಶಾರದಾ ಪ್ರಸಾದ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೃಂಗೇರಿ ಶಂಕರಮಠ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಶಂಕರಾಚಾರ್ಯರ ಹೆಸರಿನಲ್ಲಿಉದ್ಯಾನ ನಿರ್ಮಾಣ , ಬೃಹತ್ ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ , ಎರಡು ಕಡೆ ಮಹಾದ್ವಾರ ಸೇರಿ ಸುಮಾರು 3 ಕೋಟಿ ರೂ. ವೆಚ್ಚದ ವಿವಿಧ ಯೋಜನೆ ಸಿದ್ಧಪಡಿಸಿದೆ ಎಂದರು. ಸನ್ಮಾನ ಸ್ವೀಕರಿಸಿದ ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿದರು.
ಮಾ.ಸ.ನಂಜುಂಡಸ್ವಾಮಿ, ವಿದ್ವಾನ್ ಮಹಾಬಲೇಶ್ವರ ಭಟ್, ಪ್ರೊ. ಕೆ.ಆರ್.ಕೃಷ್ಣಯ್ಯ, ರಾಜಶ್ರೀ, ಎಸ್.ಕೆ.ಪ್ರಭಾವತಿ, ಸವಿತಾ ಶ್ರೀಕಾಂತ್, ಜ್ಯೋತಿ ಮಣೂರು ಮತ್ತಿತರರು ಇದ್ದರು. ವೀಣಾ ಪ್ರಾರ್ಥಿಸಿ, ಪ್ರಭಾವತಿ ಶ್ರೀಧರ್ ಸ್ವಾಗತಿಸಿದರು. ಡಾ.ಕೆಳದಿ ವೆಂಕಟೇಶ್ ಜೋಯ್‌್ಸ ನಿರೂಪಿಸಿದರು. ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಲೇಖಕರ ಬಗ್ಗೆಶ್ರೀಲಕ್ಷ್ಮೀ ಎಚ್ಎಲ್ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ