(ಧಿಟೆಕ್ ಸಧಿಮ್ಮಿಧಿಟ್ ..ಧಿ) ಬಿಡದಿ ಬಳಿ ಎಐ ಸಿಟಿ ನಿರ್ಮಾಣ (ಲೀಡ್ )

Contributed byshiva.rama@timesgroup.com|Vijaya Karnataka
Subscribe

Bengaluru is gearing up for a major transformation. An AI City will be built on 9,000 acres near Bidadi. This is part of a massive ₹1.5 lakh crore infrastructure plan. The city will also get a second international airport. Other developments include a long flyover and an underground tunnel road. The government is also launching a department for Non-Resident Indians.

bengalurus ambitious ai city project near bidadi set to transform the region

ಬೆಂಗಳೂರು ಐಟಿ ವೃತ್ತಿಪರರ ತವರೂರು| ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೊತ್ತದ ಯೋಜನೆ| ಡಿಸಿಎಂ ಡಿಕೆಶಿ ಮಾಹಿತಿ

ವಿಕ ಸುಧಿದ್ದಿಧಿಲೋಕ ಬೆಂಗಧಿಳೂಧಿರು

ಬಿಡದಿಯಲ್ಲಿ9000 ಎಕರೆಯಲ್ಲಿಎಐ ಸಿಟಿ ನಿರ್ಮಾಣ ಮಾಡಲಾಗುವುದು. ನಗರದ ದಕ್ಷಿಣ ಭಾಗದಲ್ಲಿ2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಧಿಪಧಿನೆ, 41 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ, ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್ , ಬಿಸಿನೆಸ್ ಕಾರಿಡಾರ್ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಉಧಿಪಧಿಮುಧಿಖ್ಯಧಿಮಂತ್ರಿ ಡಿ.ಕೆ. ಶಿಧಿವಧಿಕುಧಿಮಾರ್ ಹೇಧಿಳಿಧಿದಧಿರು.

ಬೆಂಗಧಿಳೂರು ಟೆಕ್ ಸಧಿಮ್ಮಿಧಿಟ್ ಧಿನಲ್ಲಿಮಾಧಿತಧಿನಾಧಿಡಿದ ಅಧಿವರು, ‘ಧಿ‘ನಮ್ಮ ಸರಕಾರ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲಿದೆ. ಗ್ರಾಮೀಣ ಭಾಗದಲ್ಲಿಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಸಿಎಸ್ ಆರ್ ಶಾಲೆಗಳನ್ನು ನಿರ್ಮಿಸಲಾಗುವುದು,’’ ಎಂದು ತಿಳಿಸಿದರು.

‘‘ತಂತ್ರಜ್ಞಾನ ಹಾಗೂ ಪ್ರತಿಭೆ ಬೆಂಗಳೂರಿನ ಎರಡು ಆಧಾರಸ್ತಂಭಗಳಾಗಿವೆ. ದೇಶದ ಐಟಿ ರಫ್ತಿನಲ್ಲಿಶೇ.40-45ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ನಮ್ಮಲ್ಲಿಹೆಚ್ಚು ಎಂಜಿನಿಯರಿಂಗ್ , ಪ್ಯಾರಾ ಮೆಡಿಕಲ…, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂಇಲ್ಲ,’’ ಎಂದರು.

‘‘ಬೆಂಗಳೂರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಸಾಕಷ್ಟು ಬೆಳೆದಿದೆ. ಕ್ಯಾಲಿಫೋರ್ನಿಯಾದಲ್ಲಿ13 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಇದು ಬೆಂಗಳೂರಿನ ಐಟಿ ಕ್ಷೇತ್ರದ ಸಾಮರ್ಥ್ಯ. ಬೆಂಗಳೂರಿನಲ್ಲಿ1.40 ಕೋಟಿ ಜನರಿದ್ದಾರೆ. ಈ ಪೈಕಿ ಶೇ.20ರಷ್ಟು ಮಂದಿ ಐಟಿ ವೃತ್ತಿಪರರಾಧಿಗಿಧಿದ್ದಾಧಿರೆ,’’ ಎಂದು ತಿಳಿಸಿದರು.

‘‘ಬೆಂಗಳೂರು ಜಾಗತಿಕ ನಗರ. ಜಾಗತಿಕ ಮಟ್ಟದಲ್ಲಿನಾವು ಸ್ಪರ್ಧಿಸಲು ಬಯಸುತ್ತೇವೆ. ಈ ನಗರವನ್ನು ಮತ್ತಷ್ಟು ಬಲವಾಗಿ ಬೆಳೆಸಲು ಎಲ್ಲರೂ ಸಹಕರಿಸಿ,’’ ಎಂದು ಕರೆ ನೀಡಿದರು.

ವೇದಿಕೆಯಲ್ಲಿಕೆಇಒ (ಜ್ಞಾನಚಾಲಿತ, ಆರ್ಥಿಕ ಮುಕ್ತ ಮೂಲ): ಎಐ- ಸಿದ್ಧ ವೈಯಕ್ತಿಕ ಕಂಪ್ಯೂಟರ್ , ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030 ಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ , ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಧಿಚಿಧಿವ ಪಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ , ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ, ಬಯೋಕಾನ್ ಮುಖ್ಯಸ್ಥೆ ಡಾ. ಕಿರಣ್ ಮಜುಂದಾರ್ ಷಾ, ಕರ್ನಾಟಕ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ , ಇಸ್ರೊ ಮಾಜಿ ಮುಖ್ಯಸ್ಥ ಡಾ. ಎ.ಎಸ್ . ಕಿರಣ್ ಕುಮಾರ್ , ಕರ್ನಾಟಕ ಡಿಜಿಟಲ್ ಎಕಾನಮಿ ಮುಖ್ಯಸ್ಥ ಬಿ.ವಿ.ನಾಯ್ಡು ಉಧಿಪಧಿಸ್ಥಿಧಿತಧಿರಿಧಿದ್ದಧಿರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ