ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯೋಜನೆಯ 21ನೇ ಕಂತನ್ನು ಬುಧವಾರ ಬಿಡುಗಡೆ ಮಾಡಲಿದ್ದಾರೆ. ಅರ್ಹ ಫಲಾನುಭವಿಗಳ ಖಾತೆಗೆ ತಲಾ 2,000 ರೂ. ಜಮೆಯಾಗಲಿದೆ. ರಾಷ್ಟ್ರವ್ಯಾಪಿ, ಸುಮಾರು ಒಂಬತ್ತು ಕೋಟಿ ರೈತರು ಈ ಯೋಜನೆಯಡಿಯಲ್ಲಿ18,000 ಕೋಟಿ ರೂ. ಪಡೆಯಲಿದ್ದಾರೆ. ತಮಿಳುನಾಡಿನ ಕೊಯಮತ್ತೂರಿಗೆ ಭೇಟಿ ನೀಡಲಿರುವ ಮೋದಿ, ಅಲ್ಲಿನಡೆಯುವ ‘ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ’ಯಲ್ಲಿಭಾಗವಹಿಸಲಿದ್ದು, ಅದೇ ಕಾರ್ಯಕ್ರಮದಲ್ಲಿಪಿಎಂ ಕಿಸಾನ್ ಹಣ ಬಿಡುಗಡೆ ಮಾಡಲಿದ್ದಾರೆ.
ಇದಕ್ಕೂ ಮುನ್ನ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಅಲ್ಲಿಸತ್ಯ ಸಾಯಿ ಬಾಬಾ ಶತಮಾನೋತ್ಸವ ಕಾರ್ಯಕ್ರಮದಲ್ಲಿಭಾಗಿಯಾಗಲಿದ್ದಾರೆ. ಸಾಯಿಬಾಬಾ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಅವರು ಬಿಡುಗಡೆ ಮಾಡಲಿದ್ದಾರೆ.
==============
ಹೆಡ್ಸ್
* ಸೆನ್ಸೆಕ್ಸ್ 1,07,000 ತಲುಪುವ ನಿರೀಕ್ಷೆ - 00
* ಚಿನ್ನ, ಬೆಳ್ಳಿ ಗಣನೀಯ ಕುಸಿತ-00

