* ಜಿಬಿಎ ನೌಕರರ ಸಂಘದಿಂದ ಆಯೋಜನೆ
ವಿಕ ಸುದ್ದಿಲೋಕ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿನ.22ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ , ‘‘ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವದ ಜತೆಗೆ ಪಹಲ್ಗಾಮ್ ನಲ್ಲಿಹತ್ಯೆಯಾದವರಿಗೆ ನುಡಿ ನಮನ ಸಲ್ಲಿಸಲಾಗುವುದು. ಹಾಗೆಯೇ, ಕರುನಾಡ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು,’’ ಎಂದು ಹೇಳಿದರು.
‘‘ಕನ್ನಡ ಭಾಷೆ ಉಳಿಸಿ, ಬೆಳೆಸಲು ಹಾಗೂ ವಿಶ್ವ ಭಾಷೆಯನ್ನಾಗಿಸುವ ಉದ್ದೇಶದಿಂದ 2022ರಲ್ಲಿಪ್ರಥಮ ಬಾರಿಗೆ ಕಾಶಿ, 2023ರಲ್ಲಿನೇಪಾಳದ ಪಶುಪತಿ ದೇವಾಲಯದ ಸನ್ನಿಧಾನ ಹಾಗೂ 2024ರಲ್ಲಿಹರಿದ್ವಾರದಲ್ಲಿರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಅದೇ ರೀತಿ ಈ ಸಲ ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿನ.22ರಂದು ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,’’ ಎಂದು ತಿಳಿಸಿದರು.
‘‘ಜಿಬಿಎ ಅಧಿಕಾರಿ, ನೌಕರರಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮ, ಗಾಯಕಿ ಅನುರಾಧ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಮೇಯರ್ ಗಳಾದ ಆರ್ .ಸಂಪತ್ ರಾಜ್ , ಎಂ.ಗೌತಮ್ ಕುಮಾರ್ , ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ .ಷಡಕ್ಷರಿ, ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥೆ ಎಚ್ .ಎನ್ .ಆರತಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ, ವಕೀಲ ಶ್ರೀನಿವಾಸ್ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ,’’ ಎಂದು ವಿವರಿಸಿದರು.

