ಪುರಸಭೆ ಸಿಬ್ಬಂದಿ ಸಾವಿಗೆ ಸದಸ್ಯನ ಮೇಲೆ ಆರೋಪ: ಪ್ರತಿಭಟನೆ

Contributed bypurnima.muni@gmail.com|Vijaya Karnataka
Subscribe

ವಿಜಯಪುರ ಪುರಸಭೆಯ ಪವನ್ ಜೋಷಿ ಎಂಬ ಸಿಬ್ಬಂದಿ ನಿಧನರಾಗಿದ್ದಾರೆ. ನಕಲಿ ಖಾತೆ ಮಾಡಿಸಲು ಪುರಸಭೆ ಸದಸ್ಯ ಎ.ಆರ್. ಹನೀಫುಲ್ಲಾ ಒತ್ತಡ ಹೇರಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಪತ್ನಿ ಅನನ್ಯ ಆರೋಪಿಸಿದ್ದಾರೆ. ಪುರಸಭೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಲಾಗಿದೆ. ಈ ಹಿಂದೆ ಇಬ್ಬರು ಇದೇ ಸದಸ್ಯನ ಕಿರುಕುಳದಿಂದ ಮೃತಪಟ್ಟಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

allegations against municipality council member protest

ವಿಕ ಸುದ್ದಿಲೋಕ ವಿಜಯಪುರ ಪುರಸಭೆ ಯಲ್ಲಿದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ಜ್ಯೋಷಿ (38) ಅವರದ್ದು ಸಹಜ ಸಾವಲ್ಲ. ಪುರಸಭೆಯಲ್ಲಿನಕಲಿ ಖಾತೆಗಳು ಮಾಡಿಸುವುದಕ್ಕಾಗಿ, ಪುರಸಭೆ ಸದಸ್ಯ ಎ.ಆರ್ .ಹನೀಫುಲ್ಲಾಎಂಬುವರು ಒತ್ತಡ ಹೇರಿರುವುದರಿಂದ ಅವರ ಸಾವಾಗಿದೆ ಎಂದು ಆರೋಪಿಸಿ, ಮೃತನ ಪತ್ನಿ ಅನನ್ಯ ಅವರು ನಮಗೆ ನ್ಯಾಯ ಬೇಕು ಎಂದು ಪುರಸಭೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಭಾನುವಾರ ತೀವ್ರ ರಕ್ತದೊತ್ತಡದಿಂದ ಅಸ್ವಸ್ಥರಾಗಿದ್ದ ಪವನ್ ಜ್ಯೋಷಿ ಅವರನ್ನು ಸುವೀಕ್ಷಾ ಆಸ್ಪತ್ರೆಯಲ್ಲಿಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಕುಟುಂಬಸ್ಥರು, ಪವನ್ ಜ್ಯೋಷಿ ಅವರ ಅಂಗಾಂಗಗಳನ್ನು ದಾನ ಮಾಡಿದ್ದು, ಬುಧವಾರ ಪುರಸಭೆಯ ಆವರಣದಲ್ಲಿಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ, ಮೃತ ಪವನ್ ಜ್ಯೋಷಿ ಅವರ ಪತ್ನಿ ಅನನ್ಯ, ಮಾತನಾಡಿ, ನನ್ನ ಗಂಡನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಅಕ್ರಮವಾಗಿ ಖಾತೆಗಳು ಮಾಡದಿದ್ದರೆ, ನಿನ್ನ ಪತ್ನಿ, ಮಗುವಿಗೂ ಗಂಡಾಂತರವಿದೆ. ನಿನಗೂ ಗಂಡಾಂತರವಿದೆ ಎಂದು ಬೆದರಿಕೆ ಹಾಕಿದ್ದರಿಂದ ನನ್ನನ್ನು, ನನ್ನ ಮಗನನ್ನು ಪ್ರತ್ಯೇಕವಾಗಿಟ್ಟು, ಪೋಷಣೆ ಮಾಡುತ್ತಿದ್ದರು. ಇತ್ತಿಚೆಗೆ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ನಕಲು ಮಾಡಿ, ಖಾತೆ ಮಾಡಿಕೊಡುವಂತೆ ಒತ್ತಡ ಹೇರಿದ್ದರು ಎಂದು ದೂರಿದ್ದಾರೆ. ಈ ವೇಳೆ ಪಟ್ಟಣದ ನಾಗರಿಕರು, ಡಾ.ಬಿ.ಆರ್ .ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ. ಶ್ರೀನಿವಾಸ್ ಸೇರಿದಂತೆ ಕೆಲ ಸಂಘಟನೆಗಳ ಮುಖಂಡರೂ ಸಹ ಪುರಸಭೆ ಸದಸ್ಯ ಎ.ಆರ್ .ಹನೀಫುಲ್ಲಾಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಇವರ ಕಿರುಕುಳದಿಂದ ಸಾಯುತ್ತಿರುವುದು ಇವರು ಮೂರನೇಯವರು, ಈ ಹಿಂದೆ ಇಬ್ಬರು ಸತ್ತಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸಿ, ಶವವನ್ನು ತೆರವುಗೊಳಿಸಿದರು. ಪುರಸಭೆ ಅಧ್ಯಕ್ಷೆ ಎಸ್ .ಭವ್ಯಾ ಮಹೇಶ್ , ಉಪಾಧ್ಯಕ್ಷೆ ತಾಜುನ್ನಿಸಾ ಮಹಬೂಬ್ ಪಾಷ, ಮುಖ್ಯಾಧಿಧಿಕಾರಿ ಸತ್ಯನಾರಾಯಣ ಮತ್ತು ಕೆಲ ಸದಸ್ಯರು ಅಂತಿಮ ಗೌರವ ಸಲ್ಲಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ