ಪಿಧಿಡಿಒ ಪ್ರಧಿವೀಣ್ ಅಧಿಮಾಧಿನಧಿತಿಗೆ ತಧಿಡೆ
ಬೆಂಗಳೂರು: ರಾಯಚೂರಿನ ಲಿಂಗಸುಗೂರಿನಲ್ಲಿನಡೆದ ಆರ್ ಎಸ್ ಎಸ್ ಪಥಸಂಚಲನದಲ್ಲಿಭಾಗವಹಿಸಿದ್ದಕ್ಕಾಗಿ ಪಿಡಿಒ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕೆಎಟಿ ( ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ) ಗುರುವಾರ ತಡೆ ನೀಡಿದೆ. ಇದರಿಂದಾಗಿ ಸರಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಮಂಗಳವಾರವಷ್ಟೇ ಆರ್ ಎಸ್ ಎಸ್ ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಿಂದ ಹತ್ತಕ್ಕಿಂತ ಅಧಿಕ ಮಂದಿ ಸೇರಬೇಕೆಂದರೆ ಪೊಲೀಸರ ಪೂರ್ವಾನುಮತಿ ಕಡ್ಡಾಯಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದ ಬೆನ್ನಧಿಲ್ಲೇ ಇದೀಗ ಕೆಎಟಿ ಆದೇಶದಿಂದ ಸರಕಾರಕ್ಕೆ ಮುಖಭಂಗವಾಗಿದೆ. ಪ್ರವೀಣ್ ಕುಮಾರ್ ಅಮಾನತು ಸರಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ತಮ್ಮನ್ನು ಅಮಾನತುಗೊಳಿಸಿರುವ ಸರಕಾರದ ಆದೇಶ ಪ್ರಶ್ನಿಸಿ ಪ್ರವೀಣ್ ಕುಮಾರ್ ಕೆಎಟಿ ಮೆಟ್ಟಿಲೇರಿದ್ದರು.

