ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಪತಿ ನಿಕ್ ಜೊನಾಸ್ ಜತೆ ಫ್ಲೋರಿಡಾದ ವೈಲ್ಡ್ ಅಡ್ವೆಂಚರ್ ಪಾರ್ಕ್ಗೆ ಭೇಟಿ ನೀಡಿದ್ದು, ಅಲ್ಲಿದೈತ್ಯ ಹೆಬ್ಬಾವು ಒಂದನ್ನು ಹಿಡಿದುಕೊಂಡು ಪೋಸ್ ನೀಡಿದ್ದಾರೆ. ಸ್ಟೈಲಿಶ್ ಜೀನ್ಸ್ ಹಾಗೂ ಬಿಳಿ ಟಾಪ್ ಧರಿಸಿ ಕೊರಳಿಗೆ ಹಾವಿನಾಕರದ ನೆಕ್ ಪೀಸ್ ಹಾಕಿ ಹೆಬ್ಬಾವಿನೊಂದಿಗಿನ ಫೋಟೊ ಶೇರ್ ಮಾಡಿರುವ ಅವರು ಅದರೊಂದಿಗೆ ಹಾವುಗಳ ಜತೆಗಿನ ತಮ್ಮ ಬದುಕಿನ ಇಂಟ್ರೆಸ್ಟಿಂಗ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಒಂದರಲ್ಲಿಹಳದಿ ಬಣ್ಣದ ದೊಡ್ಡ ಹೆಬ್ಬಾವಿನೊಂದಿಗೆ ಭಯದಲ್ಲೇ ಪೋಸ್ ನೀಡಿರುವ ಪ್ರಿಯಾಂಕಾ ಚೋಪ್ರಾ, 2011ರಲ್ಲಿತಾವು ನಟಿಸಿದ್ದ ‘ಸಾತ್ ಖೂನ್ ಮಾಫ್ ’ ಸಿನಿಮಾದಲ್ಲಿನಾಗರಹಾವಿನೊಂದಿಗೆ ನಟಿಸಿದ ಫೋಟೊ ಶೇರ್ ಮಾಡಿದ್ದಾರೆ. ಕಪ್ಪು ಬಣ್ಣದ ಮತ್ತೊಂದು ಹಾವಿನೊಂದಿಗೆ ಅವರು ಆತ್ಮವಿಶ್ವಾಸದಿಂದ ಪೋಸ್ ಕೊಟ್ಟಿದ್ದಾರೆ. ಇದರ ಜತೆಗೆ ‘ಜಂಗಲ್ ಬುಕ್ ’ ಸಿನಿಮಾದ ಹಾವು ‘ಖಾ’ ಪಾತ್ರಕ್ಕೆ ತಾವು ಡಬ್ಬಿಂಗ್ ಮಾಡಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ.

