ಮಂಗಳೂರು : ಗಾನ ನೃತ್ಯ ಅಕಾಡೆಮಿ ನಿರ್ದೇಶಕರಾದ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯ ಅನಂತಕೃಷ್ಣ ಸಿ.ವಿ ಅವರ ಭರತನಾಟ್ಯ ರಂಗಪ್ರವೇಶ ಮಂಗಳೂರಿನ ಪುರಭವನದಲ್ಲಿಜರುಗಿತು.
ಗುರು ಉಳ್ಳಾಲ ಮೋಹನ್ ಕುಮಾರ್ ,ತುಮಕೂರಿನ ಖ್ಯಾತ ನೃತ್ಯ ಗುರು ಡಾ. ಸಾಗರ್ ಟಿ.ಎಸ್ . ಮಾತನಾಡಿದರು. ಎಸ್ .ಡಿ.ಎಂ ಶಾಲೆಯ ಪ್ರಿನ್ಸಿಪಾಲ್ ಜೋಯ… ಜೆ ರೈ ಹಾಗೂ ಡಾ.ಕಿಶೋರ್ ಕುಮಾರ್ ಉಬ್ರಂಗಳ ಕಲಾವಿದನನ್ನು ಅಭಿನಂದಿಸಿದರು. ರಂಗಪ್ರವೇಶ ಮಾಡಿದ ಅನಂತಕೃಷ್ಣ ಅವರು ತನ್ನ ಗುರುಗಳಾದ ವಿದ್ಯಾಶ್ರೀ ರಾಧಾಕೃಷ್ಣ ಅವರಿಗೆ ಗುರುವಂದನೆ ಸಲ್ಲಿಸಿದರು. ಸುಮಂಗಲಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು. ಹಿಮ್ಮೇಳದಲ್ಲಿಹಾಡುಗಾರಿಕೆಯಲ್ಲಿಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ನಟುವಾಂಗದಲ್ಲಿವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಮೃದಂಗದಲ್ಲಿವಿನಯ… ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿಶೀಜಿತ್ ಕಾಮತ್ ಕೊಚ್ಚಿ ಹಾಗೂ ವೀಣೆಯಲ್ಲಿಸೌಂದರ್ ರಾಜನ್ ತಿರುವನಂತಪುರ ಸಹಕರಿಸಿದರು.
ಚಿತ್ರ: 31ಎಂ-ಡ್ಯಾನ್ಸ್
ಅನಂತಕೃಷ್ಣ ಸಿ.ವಿ ಅವರ ಭರತನಾಟ್ಯ ರಂಗಪ್ರವೇಶ ಮಂಗಳೂರಿನ ಪುರಭವನದಲ್ಲಿಜರುಗಿತು.

