ಈ ಮಹತ್ವದ ಒಪ್ಪಂದದ ಬಗ್ಗೆ ಮಾತನಾಡಿದ ಮಾರ್ಕ್ ವಾಲ್ಟರ್, "ಲಾಸ್ ಏಂಜಲೀಸ್ ಲೇಕರ್ಸ್ ಕ್ರೀಡಾ ಲೋಕದ ಅತ್ಯಂತ ಪ್ರಭಾವಶಾಲಿ ತಂಡಗಳಲ್ಲಿ ಒಂದು. ಶ್ರೇಷ್ಠತೆ ಮತ್ತು ನಿರಂತರ ಯಶಸ್ಸಿನ ಹುಡುಕಾಟವೇ ಈ ತಂಡದ ಗುರುತು. ಲೇಕರ್ಸ್ ತಂಡದ ಪರಂಪರೆ ಮತ್ತು ಜಾಗತಿಕ ಪ್ರಭಾವ ಅಪಾರ. ಜೀನಿ ಬಸ್ ಅವರೊಂದಿಗೆ ಸೇರಿ, ಈ ತಂಡದ ಶ್ರೇಷ್ಠತೆಯನ್ನು ಮುಂದುವರಿಸಲು ಮತ್ತು ಈ ಹೊಸ ಯುಗದಲ್ಲಿ ಕ್ರೀಡಾಂಗಣದ ಒಳಗೂ ಹೊರಗೂ ಯಶಸ್ಸಿನ ಮಾನದಂಡವನ್ನು ಸ್ಥಾಪಿಸಲು ನನಗೆ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ" ಎಂದು ಹೇಳಿದ್ದಾರೆ.ಜೀನಿ ಬಸ್ ಅವರು ತಂಡದ ಬಹುಪಾಲು ಷೇರುಗಳನ್ನು ಮಾರ್ಕ್ ವಾಲ್ಟರ್ ಅವರಿಗೆ ನೀಡಿದ್ದರೂ, ಗವರ್ನರ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಲೇಕರ್ಸ್ ತಂಡದ ಕಾರ್ಯಾಚರಣೆಗಳನ್ನು ತಮ್ಮ ನಾಯಕತ್ವದ ಮೂಲಕ ಮುಂದುವರಿಸಲಿದ್ದಾರೆ. ಮಾರ್ಕ್ ವಾಲ್ಟರ್ ಅವರ ಕ್ರೀಡಾ ಕ್ಷೇತ್ರದ ಅನುಭವ ಲೇಕರ್ಸ್ ತಂಡಕ್ಕೆ ಇನ್ನಷ್ಟು ಬಲ ತುಂಬಲಿದೆ ಎಂದು ಜೀನಿ ಬಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಕಳೆದ ಹತ್ತು ವರ್ಷಗಳಲ್ಲಿ, ನಾನು ಮಾರ್ಕ್ ಅವರನ್ನು ಚೆನ್ನಾಗಿ ಬಲ್ಲೆ. ಮೊದಲು ಒಬ್ಬ ಉದ್ಯಮಿಯಾಗಿ, ನಂತರ ಸ್ನೇಹಿತನಾಗಿ, ಈಗ ಸಹೋದ್ಯೋಗಿಯಾಗಿ. ಲಾಸ್ ಏಂಜಲೀಸ್ ಗೆ ಚಾಂಪಿಯನ್ ಶಿಪ್ ತಂದುಕೊಡುವ ಅವರ ಬದ್ಧತೆಯನ್ನು ಅವರು ಪದೇ ಪದೇ ಸಾಬೀತುಪಡಿಸಿದ್ದಾರೆ. ಲೇಕರ್ಸ್ ಅಭಿಮಾನಿಗಳ ಪರವಾಗಿ, ನಮ್ಮ ಭವಿಷ್ಯದ ಬಗ್ಗೆ ನಾನು ಬಹಳ ಉತ್ಸುಕಳಾಗಿದ್ದೇನೆ" ಎಂದು ಜೀನಿ ಬಸ್ ತಿಳಿಸಿದ್ದಾರೆ.
1947ರಲ್ಲಿ ಸ್ಥಾಪನೆಯಾದ ಲಾಸ್ ಏಂಜಲೀಸ್ ಲೇಕರ್ಸ್, NBAನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ತಂಡವು 65 ಬಾರಿ ಪ್ಲೇಆಫ್ ಗೆ ಪ್ರವೇಶಿಸಿದೆ, 32 ಬಾರಿ ಫೈನಲ್ಸ್ ತಲುಪಿದೆ ಮತ್ತು 17 ಬಾರಿ ಚಾಂಪಿಯನ್ ಶಿಪ್ ಗೆದ್ದಿದೆ.
ಮಾರ್ಕ್ ವಾಲ್ಟರ್ ಯಾರು?
ಮಾರ್ಕ್ ವಾಲ್ಟರ್ ಒಬ್ಬ ಯಶಸ್ವಿ ಉದ್ಯಮಿ ಮತ್ತು ಲೋಕೋಪಕಾರಿ. ಕ್ರೀಡಾ ಕ್ಷೇತ್ರದಲ್ಲಿ ಅವರು ಪ್ರಮುಖ ವ್ಯಕ್ತಿ. ಅವರು TWG Global ಎಂಬ ಜಾಗತಿಕ ಮಟ್ಟದ ಹೋಲ್ಡಿಂಗ್ ಕಂಪನಿಯ ಅಧ್ಯಕ್ಷ ಮತ್ತು CEO ಆಗಿದ್ದಾರೆ. TWG Global ಹಣಕಾಸು, ವಿಮೆ, AI ಮತ್ತು ತಂತ್ರಜ್ಞಾನ, ಕ್ರೀಡೆ ಮತ್ತು ಮನರಂಜನೆ, ಮತ್ತು ಮರ್ಚೆಂಟ್ ಬ್ಯಾಂಕಿಂಗ್ ಸೇವೆಗಳನ್ನು ವಿಶ್ವದಾದ್ಯಂತ ಒದಗಿಸುತ್ತದೆ. ಮಾರ್ಕ್ ವಾಲ್ಟರ್ ಲಾಸ್ ಏಂಜಲೀಸ್ ಲೇಕರ್ಸ್ ತಂಡದ ಬಹುಪಾಲು ಷೇರುಗಳನ್ನು ಹೊಂದಿದ್ದಾರೆ. ಅಲ್ಲದೆ, ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಲಾಸ್ ಏಂಜಲೀಸ್ ಸ್ಪಾರ್ಕ್ಸ್ ತಂಡಗಳಲ್ಲೂ ಪ್ರಮುಖ ಷೇರುಗಳನ್ನು ಹೊಂದಿದ್ದಾರೆ. ಅವರು ಚೆಲ್ಸಿಯಾ ಎಫ್.ಸಿ. ತಂಡದಲ್ಲೂ ಪಾಲುದಾರರಾಗಿದ್ದಾರೆ.
ಅವರ ಕಂಪನಿ TWG Global, ಕ್ಯಾಡಿಲಾಕ್ ಫಾರ್ಮುಲಾ 1 ತಂಡವನ್ನು ನಿಯಂತ್ರಿಸುತ್ತದೆ. ಪ್ರೊಫೆಷನಲ್ ಮಹಿಳಾ ಹಾಕಿ ಲೀಗ್ ಅನ್ನು ಹೊಂದಿದೆ ಮತ್ತು ಬಿಲ್ಲಿ ಜೀನ್ ಕಿಂಗ್ ಕಪ್ ನಲ್ಲಿ ಭಾರೀ ಹೂಡಿಕೆ ಮಾಡಿದೆ.
ಇತ್ತೀಚಿನ ವರದಿಗಳ ಪ್ರಕಾರ, ಲೆಬ್ರಾನ್ ಜೇಮ್ಸ್ ನಿವೃತ್ತಿಯಾಗಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಲಾಸ್ ಏಂಜಲೀಸ್ ಲೇಕರ್ಸ್ ತಂಡವು NBA ಆಟಗಾರನ ವಿಸ್ತರಣೆ ವಿನಂತಿಯನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

