ನಿಧಿಕುಂಭ, ಷಢಾದಾರ ಪ್ರತಿಷ್ಠೆ, ಗರ್ಭನ್ಯಾಸ
ವಿಕ ಸುದ್ದಿಲೋಕ ವಿಟ್ಲ
ಭಗವಂತನ ಕೃಪೆಯಿಂದ ಆತ್ಮಬಲ ಜಾಗೃತವಾಗುತ್ತದೆ. ದೇವಾಲಯಗಳ ಜೀರ್ಣೋದ್ಧಾರದಿಂದ ಬದುಕು ಸದೃಢವಾಗುತ್ತದೆ ಎಂದು ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.
ಅಳಿಕೆ ಗ್ರಾಮದ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪುನ ರ್ನಿರ್ಮಾಣದ ಅಂಗವಾಗಿ ನಿಧಿಕುಂಭ, ಷಢಾದಾರ ಪ್ರತಿಷ್ಠೆ, ಗರ್ಭನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ದ್ವಾದಶಾಕ್ಷರೀ ಪಂಚಲಕ್ಷ ಪಠಣ ಸೇವೆ: ಮುಳಿಯ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಬೆಳಗ್ಗೆ ದ್ವಾದಶಾಕ್ಷರೀ ಪಂಚಲಕ್ಷ ಪಠಣ ಸೇವೆಗೆ ಚಾಲನೆ ನೀಡಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದ್ವಾದಶಾಕ್ಷರೀ ಪಂಚಲಕ್ಷ ಪಠಣ ಸೇವೆಯ ಸಮಾರೋಪ ನಡೆಸಿಕೊಟ್ಟರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಹೇಶ್ ಮಡಿಯಾಲ ಅಧ್ಯಕ್ಷತೆ ವಹಿಸಿದ್ದರು. ಕುಂಟುಕುಡೇಲು ರಘುರಾಮ ತಂತ್ರಿ, ವಾಸ್ತುತಜ್ಞ ಎಂ.ಎಸ್ .ಪ್ರಸಾದ್ ಮುನಿಯಂಗಳ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಎಸ್ .ಕೃಷ್ಣ ಭಟ್ , ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ವರ್ಮುಡಿ ಪದ್ಮಿನಿ ರಾಮ ಭಟ್ ಆಲಂಗಾರು, ಸಹಕಾರಿ ಸಂಘದ ಅಧ್ಯಕ್ಷ ರೂಪೇಶ್ ರೈ ಅಳಿಕೆಗುತ್ತು, ದೇವಸ್ಥಾನದ ಮೊಕ್ತೇಸರ ಗೋವಿಂದಪ್ರಕಾಶ್ , ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸುರೇಶ್ ಮಡಿಯಾಲ ಮತ್ತಿತರರು ಉಪಸ್ಥಿತರಿದ್ದರು.
ದೇಗುಲ ನಿರ್ಮಾಣಕ್ಕೆ ಮರ ಒದಗಿಸಿದವರನ್ನು ಜೀರ್ಣೋದ್ಧಾರ ಸಮಿತಿ ಸಂಚಾಲಕ ಕಾನ ಈಶ್ವರ ಭಟ್ ಗೌರವಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಟ್ ಪ್ರಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಶಿವರಾಮ ರಾವ್ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಜಯರಾಮ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.
3110ವಿಟಿಎಲ್ ಮಡಿಯಾಲ
ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಷಿ ಮಾತನಾಡಿದರು.

