ಫೋಟೊ : 31ಸುರ್ 4
ಸುರಪುರ ತಾಲೂಕಿನ ವಾಗಣಗೇರಿ ಗ್ರಾಮಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ
ಸುರಪುರ : ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ತಾಲೂಕಿನ ವಾಗಣಗೇರಾ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನಹೇಳಿದರು. ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಸ್ಪರ್ಶಿ ಬಾಲಕಿ ಸಾವನಪ್ಪಿದ್ದಳು. ಆ ಹಿನ್ನೆಲೆಯಲ್ಲಿಶಾಸಕರು ವಾಗಣಗೇರಾಗೆ ಭೇಟಿ ಕೊಟ್ಟು ದುಃಖದಲ್ಲಿರುವ ಬಾಲಕಿಯ ಕುಟುಂಬಸ್ಥರಿಗೆ ಸಮಾಧಾನ ಮಾಡಿದರು. ಸರಕಾರದಿಂದ ಬರುವ ಪರಿಹಾರವನ್ನು ಆದಷ್ಟು ಬೇಗ ಕೊಡಿಸುವುದಾಗಿ ಭರವಸೆ ನೀಡಿದರು. ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಅಬ್ದುಲ್ ಗಫಾರ್ ನಗನೂರಿ ಸೇರಿ ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.

