****ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲುವ ಅನುಮತಿ ಪತ್ರ ಹಸ್ತಾಂತರ

Contributed byprakashamailankote@gmail.com|Vijaya Karnataka
Subscribe

ಕುತ್ತಿಕೋಲ್‌ನಲ್ಲಿ ಕಾಡುಹಂದಿ ಹಾವಳಿ ಹೆಚ್ಚಾಗಿದೆ. ರೈತರ ಬೆಳೆಗಳನ್ನು ನಾಶ ಮಾಡುತ್ತಿರುವ ಕಾಡುಹಂದಿಗಳನ್ನು ಗುಂಡಿಟ್ಟು ಕೊಲ್ಲಲು ಅನುಮತಿ ನೀಡಲಾಗಿದೆ. ಕುತ್ತಿಕೋಲ್ ಗ್ರಾಪಂ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅವರು ಬಂದೂಕು ಪರವಾನಗಿ ಹೊಂದಿರುವ ಶೂಟರ್‌ಗಳಿಗೆ ಈ ಅನುಮತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ನಿರ್ಧಾರದಿಂದ ರೈತರಿಗೆ ನೆಮ್ಮದಿ ಸಿಗುವ ನಿರೀಕ್ಷೆ ಇದೆ. ಹಲವು ಶೂಟರ್‌ಗಳಿಗೆ ಈ ಅನುಮತಿ ದೊರೆತಿದೆ.

permission to shoot wild boars a protection for farmers

ಕುತ್ತಿಕೋಲ್ : ಕೃಷಿಕರ ಬೆಳೆ ನಾಶ ಮಾಡುತ್ತಿರುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಬಂದೂಕು ಪರವಾನಗಿ ಹೊಂದಿರುವ ಶೂಟರ್ ಗಳಿಗೆ ಕುತ್ತಿಕೋಲ್ ಗ್ರಾಪಂ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅನುಮತಿ ಪತ್ರ ನೀಡಿದರು.

ಸಭೆಯಲ್ಲಿಕುಟ್ಟಿಕೋಲ್ ಗ್ರಾಪಂ ಸದಸ್ಯ ಮಾಧವನ್ ವೆಳ್ಳಾಲ, ಅಶ್ವತಿ ಪುಳುವಿಂಜಿ, ಗ್ರಾಪಂ ಕಾರ ್ಯದರ್ಶಿ, ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು. ಕುಂಞಂಬು ಎನ್ ., ಎಂ. ಬಾಬು, ಚಂದ್ರನ್ ಇ., ಎಂ. ಕುಂಞಿಕಣ್ಣನ್ ನಾಯರ್ , ಪಿ. ಕುಂಞಂಬು ನಾಯರ್ , ರವೀಂದ್ರನ್ ಎಂ., ತಂಬಾನ್ ಕೆ., ಎಂ. ಗಂಗಾಧರನ್ , ರಘುನಾಥನ್ ಬಿ., ಅನಿಲ್ ಕುಮಾರ್ , ನಾರಾಯಣನ್ , ಇ. ಜನಾರ್ದನನ್ ನಾಯರ್ , ಇ. ಚಂದ್ರನ್ ನಾಯರ್ , ಕೆ. ಜಯನಾರಾಯಣನ್ ನಾಯರ್ ಅವರಿಗೆ ಅನುಮತಿ ನೀಡಲಾಗಿದೆ.

(29ಎಂಯುಅನುಮತಿ)

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ