ತಂತ್ರಾಂಶ ಆಧಾರ ಮೇಲೆ ಪರಿಹಾರ ವಿತರಣೆ

Contributed bynijaguni.dindalkoppa@timesofindia.com|Vijaya Karnataka
Subscribe

ಧಾರವಾಡ ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತೀವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಬೆಳೆ ಸಮೀಕ್ಷೆ ದತ್ತಾಂಶ ಮತ್ತು ಫ್ರುಟ್ ಐಡಿ ಆಧಾರದ ಮೇಲೆ ತಂತ್ರಾಂಶ ಬಳಸಿ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಒಟ್ಟು 65,217 ರೈತರಿಗೆ 72,909.36 ಹೆಕ್ಟೇರ್ ಪ್ರದೇಶಕ್ಕೆ 63.16 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

software based grant distribution in dharwad district

ವಿಕ ಸುದ್ದಿಲೋಕ ಧಾರವಾಡ

ಕಳೆದ ಆಗಸ್ಟ್ ನಲ್ಲಿನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತೀವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸುವ ಕುರಿತು ಬೆಳೆ ಸಮೀಕ್ಷೆ ದತ್ತಾಂಶ, ಫ್ರುಟ್ ಐಡಿ ಹೊಂದಿರುವ ರೈತರಿಗೆ ಮತ್ತು ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಭೂಮಿ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನಲ್ಲಿ11,981 ರೈತರು ಫಲಾನುಭವಿಗಳು ಇದ್ದು, 12,462.49 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ ರೂ.10,59,97,343 ಪರಿಹಾರ ಮೊತ್ತ ವಿತರಣೆ ಮಾಡಲಾಗಿದೆ. ನವಲಗುಂದ ತಾಲೂಕಿನಲ್ಲಿ18,433 ರೈತರು ಫಲಾನುಭವಿಗಳು ಇದ್ದು, 20,685.16 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ 18,74,89,876 ರೂ. ಪರಿಹಾರ ವಿತರಣೆ ಮಾಡಲಾಗಿದೆ.

ಹುಬ್ಬಳ್ಳಿ ತಾಲೂಕಿನಲ್ಲಿ11,058 ರೈತರು ಫಲಾನುಭವಿಗಳು ಇದ್ದು 13,856.43 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ 11,78,05,212 ರೂ. ಪರಿಹಾರ ಮೊತ್ತ ವಿತರಣೆ ಮಾಡಲಾಗಿದೆ. ಕುಂದಗೋಳ ತಾಲೂಕಿನಲ್ಲಿ10,912 ರೈತರು ಫಲಾನುಭವಿಗಳು ಇದ್ದು, 11,261.02 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ 9,58,22,368 ರೂ. ಪರಿಹಾರ ಮೊತ್ತ ವಿತರಣೆ ಮಾಡಲಾಗಿದೆ.

ಹುಬ್ಬಳ್ಳಿ ನಗರ ತಾಲೂಕಿನಲ್ಲಿ839 ರೈತರು ಫಲಾನುಭವಿಗಳು ಇದ್ದು, 769.12 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ 65,51,452 ರೂ. ಪರಿಹಾರ ಮೊತ್ತ ವಿತರಣೆ ಮಾಡಲಾಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ11,994 ರೈತರು ಫಲಾನುಭವಿಗಳು ಇದ್ದು, 13,875.13 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ 11,79,64,677 ರೂ. ಪರಿಹಾರ ಮೊತ್ತ ವಿತರಣೆ ಮಾಡಲಾಗಿದೆ.

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ6 ತಾಲ್ಲೂಕಿನ ಬೆಳೆ ಪರಿಹಾರವನ್ನು ಎನ್ ಡಿಆರ್ ಎಫ್ , ಎಸ್ .ಡಿಆರ್ ಎಫ್ ಮಾರ್ಗಸೂಚಿಯಂತೆ ಒಟ್ಟು 65,217 ರೈತ ಫಲಾನುಭವಿಗಳ 72,909.36 ಹೆಕ್ಟರ್ ಪ್ರದೇಶಕ್ಕೆ ಸಂಬಂಧಿಸಿದಂತೆ 63.16 ರೂ. ಕೋಟಿ ಪರಿಹಾರ ಮೊತ್ತ ವಿತರಣೆ ಮಾಡಲಾಗಿದೆ ಎಂದು ಡಿಸಿ ಹೇಳಿದ್ದಾರೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ