ವಿಕ ಸುದ್ದಿಲೋಕ ರಾಣೇಬೆನ್ನೂರ
ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಅರ್ಹ ಪದವೀಧರ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಬೀಬಿ ಆಯೇಷಾ ಮಹ್ಮದಸಾದಿಕ ಮುಜಾವರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲೆಯ ಪದವೀಧರರು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಹೆಸರು ನೋಂದಾಯಿಸಿಕೊಳ್ಳಲು ನ.6 ಕೊನೆಯ ದಿನವಾಗಿದೆ. ಹೀಗಾಗಿ 2022 ನ.1ಕ್ಕೂ ಮೊದಲು ಪದವಿಯಲ್ಲಿತೇರ್ಗಡೆಯಾಗಿರುವವರು ಘಟಿಕೋತ್ಸವ ಪ್ರಮಾಣ ಪತ್ರ/ ಮೂರು ವರ್ಷದ ಪದವಿಯ ಅಂಕಪಟ್ಟಿ, ಆಧಾರ್ ಕಾರ್ಡ್ , ಮತದಾರರ ಗುರುತಿನ ಚೀಟಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿಕೊಂಡು ಇತ್ತೀಚಿನ ಎರಡು ಕಲರ್ ಫೋಟೋದೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದು ಎಂದರು.
ಬಿಜೆಪಿ ಮಹಿಳೆಗೆ ಟಿಕೆಟ್ ನೀಡಿದರೆ ಮತ್ತು ಪ್ರಜ್ಞಾವಂತ ಪದವಿಧರರು ಚುನಾವಣೆಯಲ್ಲಿನನ್ನನ್ನು ಬೆಂಬಲಿಸಿದರೆ ಪದವೀಧರರ ಸಮಸ್ಯೆಗಳಿಗೆ ವಿಧಾನ ಪರಿಷತನಲ್ಲಿಧ್ವನಿಯಾಗಿರುತ್ತೇನೆ. ರೈತರು, ಶೋಷಿತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಫೋಟೊ 31-ಆರ್ ಎನ್ ಆರ್ -01
ಬೀಬಿ ಆಯೇಷಾ ಮಹ್ಮದಸಾದಿಕ ಮುಜಾವರ.

