ವಿಕ ಸುದ್ದಿಲೋಕ ಬೆಂಗಳೂರು
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಸತಿ ಪ್ರದೇಶಗಳಲ್ಲಿನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದ 14 ಪೇಯಿಂಗ್ ಗೆಸ್ಟ್ ಗಳಿಗೆ (ಪಿ.ಜಿ) ಬೀಗ ಹಾಕಲಾಗಿದೆ.
‘‘ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಉದ್ದಿಮೆ ಪರವಾನಗಿ ಪಡೆಯದೆ ಎಸ್ ಒಪಿ ಮಾನದಂಡಗಳನ್ನು ಉಲ್ಲಂಘಿಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿತರಣೆಯ ವಿಶೇಷ ಅಭಿಯಾನ ಕೈಗೊಳ್ಳಲು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಆದೇಶಿಸಲಾಗಿದೆ,’’ ಎಂದು ಆಯುಕ್ತ ಡಿ.ಎಸ್ .ರಮೇಶ್ ತಿಳಿಸಿದರು.
‘‘ಪಟ್ಟಂದೂರು ಅಗ್ರಹಾರದಲ್ಲಿನ ಎಸ್ ವಿಕೆ ಪಿ.ಜಿ, ವಂಶಿಕೃಷ್ಣ ಪಿ.ಜಿ, ಲಕ್ಷ್ಮಿನಾರಾಯಣಪುರ ಬಳಿಯ ಡ್ವೆಲ್ ಕೋ-ಲಿವಿಂಗ್ , ಮೈತ್ರಿ ಲೇಔಟ್ ನಲ್ಲಿನ ರಾಯಲ್ ಹೋಮ್ ಸ್ಟೇಸ್ , ಪ್ರಶಾಂತ್ ಲೇಔಟ್ ನಲ್ಲಿನ ಡ್ರೀಮ್ ಲ್ಯಾಂಡ್ , ಮಾರತ್ ಹಳ್ಳಿ ಸಮೀಪದ ಝೋಲೋ ಅಸ್ಮಿ ಜೆಂಟ್ಸ್ , ಕೆ.ಆರ್ .ಜೆಂಟ್ಸ್ , ಹೊರಮಾವು ಸಮೀಪದ ಎಸ್ .ಜಿ.ಜೆಂಟ್ಸ್ ಆ್ಯಂಡ್ ಲೇಡೀಸ್ ಪಿ.ಜಿ, ದೂರವಾಣಿನಗರದ ಸೇಂಟ್ ಮರಿಯಾ, ಕೆ.ಆರ್ .ಪುರದ ಎಸ್ ಎಲ್ ವಿ ಕಂಫರ್ಟ್ಸ್ ಜೆಂಟ್ಸ್ , ಬಸವನಪುರದ ಶ್ರೀಗಣೇಶ ಜೆಂಟ್ಸ್ , ಮಹದೇವಪುರದ ಎಸ್ ಎಸ್ ವಿ ಟವರ್ , ಬಿ.ನಾರಾಯಣಪುರದ ಬ್ಲಿಸ್ ಕೋ-ಲಿವಿಂಗ್ , ಸತ್ಯ ಬಡಾವಣೆಯ ವಿಡಿಎಸ್ ಲಕ್ಸುರಿ ಪಿ.ಜಿ.ಗೆ ಬೀಗ ಹಾಕಲಾಗಿದೆ,’’ ಎಂದು ಮಾಹಿತಿ ನೀಡಿದರು.
466 ಉದ್ದಿಮೆ ಪರವಾನಗಿ ವಿತರಣೆ:
‘‘ಪಾಲಿಕೆ ವ್ಯಾಪ್ತಿಯ 17 ವಾರ್ಡ್ ಗಳಲ್ಲಿನ.10 ರಿಂದ 15ರವರೆಗೆ ಕೈಗೊಂಡಿದ್ದ ವಿಶೇಷ ಅಭಿಯಾನದಲ್ಲಿಉದ್ದಿಮೆದಾರರು ಅರ್ಜಿ ಸಲ್ಲಿಸಿದ ದಿನದಂದೇ ಏಕಗವಾಕ್ಷಿ ವ್ಯವಸ್ಥೆ ಮೂಲಕ 466 ಉದ್ದಿಮೆ ಪರವಾನಗಿ ವಿತರಿಸಿದ್ದು, 25,52,800 ರೂ. ಶುಲ್ಕ ಸಂಗ್ರಹಿಸಲಾಗಿದೆ,’’ ಎಂದು ಹೇಳಿದರು.
‘‘ವಾಣಿಜ್ಯ ಮಳಿಗೆ ಕರಾರುಪತ್ರ, ವಿದ್ಯುತ್ ಬಿಲ್ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದ ದಿನವೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಉದ್ದಿಮೆ ಪರವಾನಗಿ ವಿತರಿಸಲಾಗುತ್ತಿದೆ,’’ ಎಂದು ತಿಳಿಸಿದರು.

