ವಿಕ ಸುದ್ದಿಲೋಕ ಕಲಬುರಗಿ ಸಾಮಾಜಿಕ ನ್ಯಾಯ , ಸಮಾನತೆ, ಮಹಿಳೆ ಮತ್ತು ಅಲ್ಪಸಂಖ್ಯಾತರು, ದಲಿತ ಆದಿವಾಸಿಗಳ ಮೇಲಿನ ದೌರ್ಜನ್ಯ ಖಂಡಿಸಿ ಭಾರತ ಕಮ್ಯುನಿಸ್ವ್ ಪಕ್ಷದ ಮುಖಂಡರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಮೂಲಕ ಸಿಎಂಗೆ ಪತ್ರ ಸಲ್ಲಿಸಿದರು. ದೇಶದಲ್ಲಿಮನುಸ್ಮೃತಿ, ವರ್ಣಾಶ್ರಮ ಪದ್ಧತಿ ಜಾರಿ ಮಾಡಿ ಕೋಮುಗಲಭೆ ಸೃಷ್ಟಿಸುತ್ತಿರುವುದು ಖಂಡನೀಯ. 2023ರ ಎನ್ ಸಿಆರ್ ಬಿ ವರದಿ ಪ್ರಕಾರ ದೇಶದಲ್ಲಿದಲಿತರ ಮೇಲಿನ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚುತ್ತಿವೆ. ಇದಕ್ಕೆಲ್ಲಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಭಾರತದ ಇತಿಹಾಸದಲ್ಲಿಶತಮಾನಗಳಿಂದಲೂ ಅಸ್ಪೃಶ್ಯತೆ ಮತ್ತು ಶೋಷಣೆಗಳಿಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳ ಮೇಲಿನ ದಬ್ಬಾಳಿಕೆ ಇಂದಿಗೂ ನಿಂತಿಲ್ಲ. ರಾಜ್ಯದಲ್ಲಿಪ್ರತಿದಿನ 12-ರಿಂದ 15 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತವೆ. ವಾಸ್ತವದಲ್ಲಿಪೊಲೀಸರ ಬಳಿ ದಾಖಲಾಗದಿರುವ ದೌರ್ಜನ್ಯ ಪ್ರಕರಣಗಳು ಲೆಕ್ಕಕ್ಕೆ ಸಿಗದಷ್ಟಿವೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ ಮೇಲೆ ನಡೆಸಿರುವ ದೌರ್ಜನ್ಯ ಪ್ರಕರಣಗಳೇ ಹೆಚ್ಚಿರುವುದು ಈ ಸಮುದಾಯಗಳು ಇಂದಿಗೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವುದಕ್ಕೆ ಸಾಕ್ಷಿ ಎನ್ನುವಂತಿದೆ. ಅಧಿಕಾರದಲ್ಲಿರುವ ಸರಕಾರಗಳು ಇಂತಹ ಮನಸ್ಥಿತಿಯನ್ನು ಹೋಗಲಾಡಿಸಲು ಸಂವಿಧಾನದ ಆಶಯಗಳಂತೆ ಅಧಿಕಾರ ನಡೆಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ್ , ಪದ್ಮಾವತಿ ಮಾಲಿಪಾಟೀಲ್ , ಸಿದ್ದಪ್ಪ ಪಾಲ್ಕಿ, ಸಾಜೀದ್ ಅಹ್ಮದ್ , ಭೀಮಾಶಂಕರ ಮಾಡಿಯಾಳ, ಮಹ್ಮದ್ ಚೌದ್ರಿ ಇತರರಿದ್ದರು.

