ವಿಕ ಸುದ್ದಿಲೋಕ ಕಲಬುರಗಿ ಹೈಕೋರ್ಟ್ ಸೂಚನೆ ನೀಡಿದ್ದರಿಂದ ಚಿತ್ತಾಪುರದಲ್ಲಿಆರೆಸ್ಸೆಸ್ ಪಥ ಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ ಹೊರತು ಸಚಿವ ಪ್ರಿಯಾಂಕ್ ಖರ್ಗೆ ಅನುಮತಿ ನೀಡಿಲ್ಲಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಹೈಕೋರ್ಟ್ ವಿಚಾರಣೆ ವೇಳೆ ‘ನೀವು ಅನುಮತಿ ನೀಡುತ್ತೀರೋ, ಅಥವಾ ನಾವು ಅನುಮತಿ ನೀಡಬೇಕೊ’ ಎಂದು ವಾರ್ನಿಂಗ್ ನೀಡಿದ ಹಿನ್ನೆಲೆಯಲ್ಲಿತಾಲೂಕು ಆಡಳಿತ ಅನುಮತಿ ನೀಡಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲಎಂಬ ಹೇಳಿಕೆಗಳನ್ನು ನೀಡುವ ಕೆಲಸ ಸಚಿವ ಪ್ರಿಯಾಂಕ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಗುರು ದಕ್ಷಿಣೆಗೆ ಅವಮಾನ: ಗುರುವಿಗೆ ನೀಡುವುದು ದಕ್ಷಿಣೆ ಬಗ್ಗೆ ತಿಳಿಯದೆ ಮಾತನಾಡುವ ಪ್ರಿಯಾಂಕ್ ಖರ್ಗೆ ಗುರು ದಕ್ಷಿಣೆ ಎಂಬ ಪದಕ್ಕೆ ಅವಮಾನ ಮಾಡುತ್ತಿದ್ದಾರೆ. ಎಲ್ಲವೂ ಲೆಕ್ಕಕ್ಕೆ ಬರಲಿ ಎಂದು ಹೇಳುವ ಸಚಿವರಿಗೆ ಅವರ ತವರಲ್ಲಿನ ಮುಜರಾಯಿ ಇಲಾಖೆಗೆ ಸೇರಿದ ದಂಡಗುಂಡ ಬಸವೇಶ್ವರ ದೇವಸ್ಥಾನದ ಹುಂಡಿ ಲೆಕ್ಕ ಇದೆಯೇ ಎಂದು ಪ್ರಶ್ನಿಸಿದರು. ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಸೇರಿ ಇತರೆ ಲೆಕ್ಕ ಪತ್ರದ ಮಾಹಿತಿ ಇಲ್ಲಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಗೆ ತಹಸೀಲ್ದಾರ್ ನಾಗಯ್ಯ ಸ್ವಾಮಿ ಉತ್ತರ ನೀಡುತ್ತಾರೆ. ಅಲ್ಲದೆ ಟ್ರಸ್ಟ್ ಅದನ್ನು ನೋಡಿಕೊಳ್ಳುತ್ತಿದೆ ಎಂದು ಹೇಳುತ್ತಾರೆ. ಮುಜರಾಯಿ ಇಲಾಖೆಯೇ ಅಲ್ಲಿನ ಟ್ರಸ್ಟ್ ಅನಧಿಕೃತ ಎಂದರೂ ಕಾಂಗ್ರೆಸ್ ಬೆಂಬಲಿತ ಟ್ರಸ್ಟ್ ಸದಸ್ಯರ ವಿರುದ್ಧ ಕ್ರಮ ಏಕಿಲ್ಲಎಂದು ಪ್ರಶ್ನಿಸಿದರು. ಆರನೇ ಗ್ಯಾರಂಟಿ ಮರೆತ ಸಚಿವ : 10 ದಿನದಲ್ಲಿಸಂಘದ ಭ್ರಷ್ಟಾಚಾರ ಹೇಳುತ್ತೇನೆ ಎಂದವರು ಎರಡೂವರೆ ವರ್ಷದಿಂದ ಮಾಡಿದ್ದೇನು? ಸಚಿವರಗೆ ತಮ್ಮ ಆರನೇ ಗ್ಯಾರಂಟಿ ನೆನಪು ಹೋಗಿದೆಯೇ. ಶಹಾಪುರದಲ್ಲಿಅಕ್ಕಿ ಕಳ್ಳತನದಲ್ಲಿಹೆಸರಿರುವ ಚಾವಲ್ ಚೋರ್ ಡಿಡಿ ಭೀಮರಾಯ ಮಸಳಿ , ಭಾಗ್ಯವಂತಿ ದೇವಿಯ ಗಲ್ಲಾಚೋರ್ ಆಪ್ತ ಕಾರ್ಯದರ್ಶಿ, ಲೋಕಾ ದಾಳಿಯಲ್ಲಿಕೋಟ್ಯಂತರ ರೂ. ಅಕ್ರಮ ಪತ್ತೆಯಾದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಪಕ್ಷದ ಸಂಘಟನಾ ಕಾರ್ಯದರ್ಶಿ ಮಹಾಲಿಂಗ, ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ಯುವ ಮೋರ್ಚಾದ ಅಧ್ಯಕ್ಷ ರಾಕೇಶ್ ಜಮಾದಾರ, ಮಲಕಣ್ಣ ಹಿರೇಪೂಜಾರಿ, ರೋಹಿತ್ ಪಿಸ್ಕೆ, ಶಿವು ಬಾಳಿ ಇದ್ದರು.

