ಎಚ್ ಎನ್ ವ್ಯಾಲಿ ಯೋಜನೆಯ 2ನೇ ಹಂತ ಲೋಕಾರ್ಪಣೆಗೊಳಿಸಿದ ಸಣ್ಣ ನೀರಾವರಿ ಸಚಿವ ಬೋಸರಾಜು
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ಜಿಲ್ಲೆಯ ಬಾಗೇಪಲ್ಲಿತಾಲೂಕಿನ ಆಚೇಪಲ್ಲಿಕೆರೆ ಅಂಗಳದಲ್ಲಿಸುಮಾರು 70 ಕೋಟಿ ರೂ. ವೆಚ್ಚದ ಎಚ್ ಎನ್ ವ್ಯಾಲಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಸಚಿವ ಎನ್ .ಎಸ್ . ಬೋಸರಾಜು, ಜಿಲ್ಲಾಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ , ಶಾಸಕ ಸುಬ್ಬಾರೆಡ್ಡಿ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಬೋಸರಾಜು, ‘ಧಿ‘ವ್ಯಾಲಿ ಯೋಜನೆಯಿಂದ ಬಯಲುಸೀಮೆ ಭಾಗಕ್ಕೆ ಸಾಕಷ್ಟು ಅನುಕೂಲವಾಗಿದ್ದು, ಅಂತರ್ಜಲ ವೃದ್ಧಿಯಾಗಿ ಈ ಭಾಗದ ನೀರಿನ ದಾಹ ನೀಗಿಸಲು ನೆರವಾಗಲಿದೆ. ಬಾಗೇಪಲ್ಲಿತಾಲೂಕಿನ 24 ಕೆರೆಗಳಿಗೆ ನೀರು ಹರಿಸಧಿಲಿದ್ದು, ಯಾವುದೇ ಜಲಮೂಲದ ನೆರವಿಲ್ಲದೆ ಮಳೆಯನ್ನೇ ಆಶ್ರಯಿಸಿರುವ ಬಯಲುಸೀಮೆಯ ಜಿಲ್ಲೆಗಳಿಗೆ ಈ ವ್ಯಾಲಿ ಯೋಜನೆ ವರದಾನವಾಗಿದೆ ಎಂದರು.
‘‘ ವ್ಯಾಲಿ ಯೋಜನೆಯಿಂದ ಬಾಗೇಪಲ್ಲಿಸುತ್ತಮುತ್ತಲ 1,500 ಅಡಿಗೂ ಹೆಚ್ಚು ಪಾತಾಳಕ್ಕೆ ಇಳಿದಿರುವ ಅಂತರ್ಜಲವು ಅಭಿವೃದ್ಧಿಗೊಂಡು ಅನ್ನದಾತರ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಲಿದೆ. ಕೆರೆಯಲ್ಲಿಮೀನುಗಾರಿಕೆ ಆರಂಭಗೊಳ್ಳುವುದರಿಂದ ರೈತರ ಆದಾಯ ಹೆಚ್ಚಲಿದೆ. ಇದರಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ’ಧಿ’ ಎಂದರು.
ಜಿಲ್ಲಾಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ‘ಧಿ‘ಅಂತರ್ಜಲ ಕುಸಿತದಿಂದ ನಾನಾ ಸಮಸ್ಯೆ ಎದರಾಗಿದ್ದವು. ವ್ಯಾಲಿ ನೀರಿನ ಯೋಜನೆಯಿಂದ ಸಾಕಷ್ಟು ಕೆರೆಗಳು ತುಂಬಿಕೊಂಡಿದ್ದು ಈ ಭಾಗದ ಅಂತರ್ಜಲ ವೃದ್ಧಿಗೆ ಅನುಕೂಲವಾಗಿದೆ’’, ಎಂದು ತಿಳಿಸಿದರು.
18ಸಿಬಿಪಿಫೋಟೋ09
ಬಾಗೇಪಲ್ಲಿತಾಲೂಕಿನ ಆಚೇಪಲ್ಲಿಕೆರೆಯಂಗಳದಲ್ಲಿಎಚ್ ಎನ್ ವ್ಯಾಲಿ 2ನೇ ಹಂತದ ಯೋಜನೆಯನ್ನು ಸಚಿವರಾದ ಎನ್ .ಎಸ್ . ಬೋಸರಾಜು, ಡಾ.ಎಂ.ಸಿ.ಸುಧಾಕರ್ ಲೋಕಾರ್ಪಣೆಗೊಳಿಸಿದರು.

