ವಿಕ ಸುದ್ದಿಲೋಕ ಕೊಡಿಗೇನಹಳ್ಳಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರು ಜಿಲ್ಲೆಯ ಎಲ್ಲಾಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲು ಸೂಚಿಸಿರುವ ಹಿನ್ನೆಲೆಯಲ್ಲಿಈ ಭಾಗದಲ್ಲಿಇಂದು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು ಹೇಳಿದರು. ಮಧುಗಿರಿ ತಾಲೂಕು ಚಿಕ್ಕಮಾಲೂರು, ದೊಡ್ಡಮಾಲೂರು ಹಾಗೂ ಕೊಡಿಗೇನಹಳ್ಳಿ ವ್ಯಾಪ್ತಿಯ 5ರಿಂದ 10ನೇ ತರಗತಿಯ ಎಲ್ಲಾಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದ ಅವರು, ಮಾಜಿ ಶಾಸಕ ಎಂ. ವೀರಭದ್ರಯ್ಯ ಹಾಗೂ ಬಿಜೆಪಿ ಮುಖಂಡ ಎಲ್ .ಸಿ. ನಾಗರಾಜು ಅವರ ಸೂಚನೆಯಂತೆ ತಾಲೂಕಿನ ಎಲ್ಲಾಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಹಮ್ಮಿಕೊಂಡಿದ್ದೇವೆ. ಈಗಾಗಲೇ ಮಿಡಿಗೇಶಿ ಹೋಬಳಿ ಪೂರ್ಣಗೊಳಿಸಿದ್ದು, ಇದೀಗ ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿವಿತರಣೆ ಮಾಡಲಾಗುತ್ತಿದೆ ಎಂದರು. ನಿವೃತ್ತ ಪ್ರಿನ್ಸಿಪಾಲ್ ಟಿ.ಜೆ. ಗೋವಿಂದ ರಾಜು ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಸಮಯ ವ್ಯಧಿರ್ಥ ಮಾಡದೆ, ಮನಸ್ಸು ಹಿಡಿತದಲ್ಲಿಕೊಂಡು ಶಿಕ್ಷಣ ಪಡೆದುಕೊಳ್ಳಬೇಕು. ಬಹುತೇಕ ರಾಜ್ಯದ ಉನ್ನತ ಅಧಿಕಾರಿಗಳು ಸರಕಾರಿ ಶಾಲೆಯಲ್ಲೇ ಓಧಿದಿಧಿದಧಿವಧಿರಾಧಿಗಿಧಿದ್ದು, ಅವರನ್ನು ಸ್ಫೂರ್ತಿಯಾಗಿ ಸ್ವೀಕರಿಸಿ, ಸಾಧಿಧಧಿನೆಧಿಗೆ
ಶ್ರಧಿಮಿಧಿಸಧಿಬೇಕು ಎಂದರು. ವಿದ್ಯೆ ಕಲಿಸಿದ ಗುರು ಹಾಗೂ ಹಿರಿಯನ್ನು ಗೌರವಿಸುವ ಗುಣವನ್ನು ಮೊದಲು ಜೀವನದಲ್ಲಿಅಳವಡಿಸಿಕೊಳ್ಳಬೇಕು. ದೇಶದ ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಮಕ್ಕಳಿಂದ ಮಾತ್ರ ಸಾಧ್ಯ. ನೀವುಗಳು ಈ ವಯಸ್ಸಿನಲ್ಲಿಸಮಯ ಮತ್ತು ಶಿಕ್ಷಣವನ್ನು ವ್ಯರ್ಥ ಮಾಡದೆ ಎರಡನ್ನೂ ನಿಮ್ಮದಾಗಿಸಿಕೊಂಡಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು. ್ಲಜಿಪಂ ಮಾಜಿ ಸದಸ್ಯ ಎಸ್ .ಡಿ. ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಕೆ.ಸಿ. ನರಸರರೆಡ್ಡಿ, ಮುಖ್ಯ ಶಿಕ್ಷಕಿ ಅನುಸೂಯ ದೇವಿ ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು.

