ಫಾಲೋ ಅಪ್
...........
ಯಲಬುರ್ಗಾ ತಾಲೂಕಿನಲ್ಲಿಸಾಮೂಹಿಕ ಅತ್ಯಾಚಾರ ಪ್ರಕರಣ
ವಿಸ್ತೃತ ವರದಿಗೆ ಮಹಿಳಾ ಆಯೋಗ ಸೂಚನೆ
ವಿಕ ಸುದ್ದಿಲೋಕ ಕೊಪ್ಪಳ
ಜಿಲ್ಲೆಯ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಬಳಿ ಭಾನುವಾರ ರಾತ್ರಿ 39 ವರ್ಷದ ಒಂಟಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಜಿಲ್ಲಾಪೊಲೀಸ್ ಇಲಾಖೆಗೆ ರಾಜ್ಯ ಮಹಿಳಾ ಆಯೋಗ ನಿರ್ದೇಶನ ನೀಡಿದೆ.
‘‘ಕುಷ್ಟಗಿ ಪಟ್ಟಣಕ್ಕೆ ವೈಯಕ್ತಿಕ ಕೆಲಸದ ನಿಮಿತ್ತ ಬಂದಿದ್ದ ಸಂತ್ರಸ್ತೆಯನ್ನು ನಾಲ್ವರು ಆರೋಪಿಗಳು ಬೈಕ್ ನಲ್ಲಿಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಮದ್ಯ ಕುಡಿಸಿ ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ. ಈ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಇಂತಹ ಕೃತ್ಯವನ್ನು ಮಹಿಳಾ ಆಯೋಗ ತೀವ್ರವಾಗಿ ಖಂಡಿಸುತ್ತದೆ. ಸಂಬಂಧಪಟ್ಟ ಠಾಣಾಧಿಕಾರಿಗಳ ಮೂಲಕ ನಿಯಮಾನುಸಾರ ಪರಿಶೀಲನೆ ನಡೆಸಬೇಕು. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣದ ವಿಸ್ತೃತ ವರದಿಯನ್ನು ತಕ್ಷಣವೇ ಆಯೋಗಕ್ಕೆ ಕಳುಹಿಸಬೇಕು,’’ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಯೋಗದ ಪ್ರತಿಯನ್ನು ಯಲಬುರ್ಗಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗೂ ರವಾನಿಸಲಾಗಿದೆ.
ನ್ಯಾಯಾಂಗ ಬಂಧನದಲ್ಲಿಆರೋಪಿಗಳು:
ಘಟನೆಗೆ ಸಂಬಂಧಿಸಿದಂತೆ ಗದಗ ಜಿಲ್ಲೆರೋಣ ತಾಲೂಕಿನ ಅಸೂಟಿ ಗ್ರಾಮದ ಲಕ್ಷತ್ರ್ಮಣ ಕೆಂಚಪ್ಪ ಕರಗುಳಿ, ಬಸವರಾಜ ಸಕ್ರೆಪ್ಪ, ಕೊಪ್ಪಳ ಜಿಲ್ಲೆಯಲಬುರ್ಗಾ ತಾಲೂಕಿನ ಹನುಮಾಪುರ ಗ್ರಾಮದ ಭೀಮಪ್ಪ ಮಸ್ಕಿ ಹಾಗೂ ಶಶಿಕುಮಾರ ಮಸ್ಕಿ ಎನ್ನುವ ಆರೋಪಿಗಳನ್ನು ಭಾನುವಾರ ತಡರಾತ್ರಿಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ವಿವರ:
ಸಂಬಂಧಿಕರೊಬ್ಬರಿಂದ 5,000 ರೂ. ಪಡೆಯಲು ಹೊಸಪೇಟೆ-ಕುಷ್ಟಗಿ ಬಸ್ ನಲ್ಲಿಬಂದಿದ್ದ ಒಂಟಿ ಮಹಿಳೆಯ ಅಸಹಾಯಕತೆಯನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಬೈಕ್ ಮೇಲೆ ಮಹಿಳೆಯನ್ನು ಕರೆದುಕೊಂಡು ಹೋಗಿ ಮದ್ಯ ಕುಡಿಸಿ, ಸಾಮೂಹಿಕ ಅತ್ಯಾಚಾರಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಸ್ವಸ್ಥ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿಚಿಕಿತ್ಸೆ ಕೊಡಿಸಲಾಗಿದೆ.

