ಹಾಸನಾಂಬ ಭಕ್ತರಿಗೆ ಶಕ್ತಿ ವರದಾನ

Contributed byprakashvkhsn@gmail.com|Vijaya Karnataka
Subscribe

ಹಾಸನಾಂಬ ದೇವಿಯ ದರ್ಶನಕ್ಕೆ ಶಕ್ತಿ ಯೋಜನೆಯಿಂದ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕಳೆದ ಐದು ದಿನಗಳಲ್ಲಿ ಶೇ.80ಕ್ಕೂ ಹೆಚ್ಚು ಮಹಿಳೆಯರು ದೇವಿಯ ದರ್ಶನ ಪಡೆದಿದ್ದಾರೆ. ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. 175 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 8.84 ಲಕ್ಷಕ್ಕೂ ಹೆಚ್ಚು ಭಕ್ತರು ಈಗಾಗಲೇ ದರ್ಶನ ಪಡೆದಿದ್ದಾರೆ. ಶ್ರಮಿಕ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

hassanamba devotees receive the blessing of power plan with the convenience of 175 buses provided by the ksrtc

ಪ್ರಕಾಶ್ ಜಿ., ಹಾಸನ P್ಟakash.ಜಃಠಿಜಿಞಛಿsಟ್ಛಜ್ಞಿdಜಿa.್ಚಟಞ ಶಕ್ತಿ ದೇವತೆ ಹಾಸನಾಂಬ ದರ್ಶನಕ್ಕೆ ನಾಡಿನ ಮೂಲೆ, ಮೂಲೆಯಿಂದ ಲಕ್ಷಾಂತರ ಮಹಿಳಾ ಭಕ್ತರು ಬರುತ್ತಿದ್ದು ಸರಕಾರದ ಶಕ್ತಿ ಯೋಜನೆ ವರದಾನವಾಗಿದೆ. ಕಳೆದ ಐದು ದಿನಗಳಲ್ಲಿಆಗಮಿಸಿದ ಭಕ್ತರಲ್ಲಿಶೇ.80ಕ್ಕೂ ಹೆಚ್ಚು ಮಹಿಳಾ ಭಕ್ತರಿದ್ದಾರೆ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆ ಬಸ್ ನಲ್ಲಿಉಚಿತ ಪ್ರಯಾಣ ಹಿನ್ನೆಲೆಯಲ್ಲಿಈ ಬಾರಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತರ ಸಂಖ್ಯೆ ನಿಯಂತ್ರಿಸಲು ಬಸ್ ಸಂಚಾರ ಸಂಖ್ಯೆ ಕಡಿಮೆ ಮಾಡಿ ಎಂಬ ಅಭಿಪ್ರಾಯ ಅಧಿಕಾರಿ ವಲಯದಿಂದ ವ್ಯಕ್ತವಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಸ್ ಸಂಖ್ಯೆ ಕಡಿಮೆ ಮಾಡಬೇಡಿ ಎಂದು ಸಾರಿಗೆ ಸಚಿವರಿಗೆ ಜಿಲ್ಲಾಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. 175 ಹೆಚ್ಚುವರಿ ಬಸ್ ಸೌಲಭ್ಯ: ಹಾಸನಾಂಬ ದರ್ಶನಕ್ಕೆ ಭಕ್ತರು ಆಗಮಿಸಲು ಅನುಕೂಲವಾಗುವಂತೆ ರಾಜ್ಯದೆಲ್ಲೆಡೆಯಿಂದ ಕೆಎಸ್ ಆರ್ ಟಿಸಿ ಹೆಚ್ಚುವರಿಯಾಗಿ 175 ಬಸ್ ಸೌಲಭ್ಯ ಒದಗಿಸಿದೆ. ಇದಲ್ಲದೆ ಕೆಎಸ್ ಟಿಡಿಸಿ ವತಿಯಿಂದ ನಿತ್ಯ ಬೆಂಗಳೂರಿನಿಂದ ಹಾಸನಕ್ಕೆ ಎರಡು ವಿಶೇಷ ಪ್ಯಾಕೇಜ್ ಟೂರ್ ಬಸ್ ಗಳು ಸಂಚರಿಸುತ್ತಿವೆ. ಈ ಎಲ್ಲಕಾರಣದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ. 8.84 ಲಕ್ಷ ಭಕ್ತರಿಂದ ದರ್ಶನ: ದೂರದ ರಾಯಚೂರು, ಯಾದಗಿರಿ, ಹುಬ್ಬಳ್ಳಿ, ಗದಗ್ , ಚಿತ್ರದುರ್ಗ ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಮಹಿಳಾ ಭಕ್ತರು ಗುಂಪು, ಗುಂಪಾಗಿ ಹಾಸನಾಂಬ ದರ್ಶನಕ್ಕೆ ಆಗಮಿಸುತ್ತಿದ್ದು, ಅ.10ರಿಂದ 15ರವರೆಗೆ 8,84,503 ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಹಗಲು, ರಾತ್ರಿ, ಮಳೆ, ಚಳಿ ಇದ್ಯಾವುದನ್ನು ಲೆಕ್ಕಿಸದೆ ಭಕ್ತರು ಸಾಗರೋಪಾದಿಯಲ್ಲಿಹರಿದು ಬರುತ್ತಿರುವುದು ಜಿಲ್ಲಾಡಳಿತ ಹಾಗೂ ಸರಕಾರದ ಲೆಕ್ಕಾಚಾರವನ್ನು ಬದಲು ಮಾಡಿದೆ. ಜಿಲ್ಲಾಡಳಿತ ಇಂದು ಒಂದು ಲಕ್ಷ ಭಕ್ತರು ಬರಬಹುದು ಎಂದು ಅಂದಾಜು ಮಾಡಿದರೆ ಎರಡರಿಂದ 2.25 ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ. ಇದು ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಶ್ರಮಿಕ ವರ್ಗವೇ ಹೆಚ್ಚು: ಶಕ್ತಿ ಯೋಜನೆ ಸೌಲಭ್ಯ ಬಳಸಿಕೊಂಡು ಹಾಸನಾಂಬ ದರ್ಶನಕ್ಕೆ ಬರುತ್ತಿರು ವವರಲ್ಲಿಶ್ರಮಿಕ ವರ್ಗದವರೇ ಹೆಚ್ಚಾಗಿದ್ದಾರೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಮುಂದಿನ ಏಳು ದಿನ ಮಾತ್ರ ಹಾಸನಾಂಬ ದರ್ಶನಕ್ಕೆ ಅವಕಾಶವಿದ್ದು, ಆ ವೇಳೆಯಲ್ಲೂನಿರೀಕ್ಷೆ ಮೀರಿ ಭಕ್ತರು ಆಗಮಿಸುವ ಸಾಧ್ಯತೆಯನ್ನು ಈಗಾಗಲೇ ಜಿಲ್ಲಾಡಳಿತ ಅಂದಾಜಿಸಿದೆ. ಶೇ.80ಕ್ಕೂ ಹೆಚ್ಚು ಭಕ್ತರು ಕೆಎಸ್ ಆರ್ ಟಿಯ ಶಕ್ತಿ ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಭಕ್ತರಿಂದ ಬಸ್ ನಿಲ್ದಾಣ, ಬಸ್ ಗಳು ತುಂಬಿ ತುಳುಕುತ್ತಿದ್ದು, ಸೀಟ್ ಪಡೆಯಲು ಪೈಪೋಟಿಗೆ ಬೀಳುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. 124 ಶೌಚಾಲಯ ವ್ಯವಸ್ಥೆ: ದೂರದ ಊರುಗಳಿಂದ ಅಪಾರ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಿರುವ ಕಾರಣ 124 ತಾತ್ಕಾಲಿಕ ಶೌಚಾಲಯಗಳನ್ನು ಸೂಕ್ತ ಸ್ಥಳಗಳಲ್ಲಿವ್ಯವಸ್ಥೆ ಮಾಡಲಾಗಿದೆ. ಅದರ ನಿರ್ವಹಣೆಯನ್ನು ಉಸ್ತುವಾರಿ ಸಚಿವರೇ ಗಮನಿಸುತ್ತಿರುವ ಕಾರಣ ಸ್ವಚ್ಛತೆಗೂ ಹೆಚ್ಚಿನ ಕಾಳಜಿ ವಹಿಸಲಾಗಿದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ