ವಿಕ ಸುದ್ದಿಲೋಕ ಯಳಂದೂರು ಪಟ್ಟಣದ ನಾಯಕ ಜನಾಂಗದ ವತಿಯಿಂದ ಬುಧÜವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಪಟ್ಟಣದ 7 ಬೀದಿಯ ನಾಯಕ ಜನಾಂಗದ ಯಜಮಾನರು, ಮುಖಂಡರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿವಾಲ್ಮೀಕಿ ಅವರ ಭಾವಚಿತ್ರವನ್ನು ಬೆಳ್ಳಿರಥದ ತೆರೆದ ವಾಹನದ ಮೇಲೆ ಇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ವೀರಗಾಸೆ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ಗೊಲ್ಲರ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು, ವಾದ್ಯ ಮೇಳ ದೊಂದಿಗೆ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಎಸ್ ಬಿಐ ಬ್ಯಾಂಕಿನಿಂದ ದೊಡ್ಡ ಅಂಗಡಿ ಬೀದಿ, ಬಳೇಪೇಟೆ, ಬಸ್ ನಿಲ್ದಾಣ, ಮಹದೇಶ್ವರ ಚಿತ್ರಮಂದಿರ ಮೂಲಕ ಮೆರವಣಿಗೆ ಮಾಡಲಾಯಿತು. ವರಹಸ್ವಾಮಿ ದೇವಾಲಯದ ಹತ್ತಿರದ ಕಾರು ನಿಲ್ದಾಣದಲ್ಲಿಮೆರವಣಿಗೆ ಅಂತ್ಯವಾಯಿತು. ಪಟ್ಟಣದ ಯಜಮಾನರು, ಮುಖಂಡರು, ಸಾರ್ವಜನಿಕರು ಹಾಜರಿದ್ದರು.

