ಆರೋಗ್ಯ ಕರ ಜೀವನಕ್ಕೆ ಪೌಷ್ಟಿಕ ಆಹಾರ ಪೂರಕ ವಿಕ ಸುದ್ದಿಲೋಕ ತ್ಯಾಮಗೊಂಡ್ಲು: ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮಗಳು ಮಕ್ಕಳು ಮತ್ತು ಮಹಿಳೆಯರ ಪೌಷ್ಟಿಕಾಂಶÜದ ಕೊರತೆ ನೀಗಿಸಲು ಹಾಗೂ ಅವರ ಆರೋಗ್ಯ ಸುಧಾರಿಸಲು ಪೂರಕವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜಾತ ತಿಳಿಸಿದರು. ತ್ಯಾಮಗೊಂಡ್ಲುಪಟ್ಟಣದ ಸಮುದಾಯ ಭವನದಲ್ಲಿಅಂಗನವಾಡಿಗಳ ಸಹಯೋಗದಲ್ಲಿಆಯೋಜಿಸಲಾಗಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಸಮಾಜದಲ್ಲಿನ ದುರ್ಬಲ ಹಾಗೂ ಹಿಂದುಳಿದ ಮಕ್ಕಳಲ್ಲಿಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಿ ಆರೋಗ್ಯರ ಸಮಾಜ ಕಟ್ಟುವಲ್ಲಿಈ ಯೋಜನೆಗಳು ಸಹಕಾರಿಯಾಗಿವೆ, ಮಕ್ಕಳು ಹಾಗೂ ಮಹಿಳೆಯರು ಸಮತೋಲಿತ ಆಹಾರ ಸೇವಿಸಬೇಕು ತಾಜಾ ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಹಾಲು ಮೊಸರನ್ನು ನಿತ್ಯ ಸೇವಿಸಬೇಕು ಎಂದರು. ಅಪೌಷ್ಟಿಕತೆ ಕೊರತೆಯಿಂದ ಮಕ್ಕಳಲ್ಲಿಆಯಾಸ, ನಿಸ್ಯಕ್ತಿಯಿಂದ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ, ಆದ್ದರಿಂದ ಗರ್ಭಿಣಿಯರು ಹಾಗೂ ಮಕ್ಕಳಿಗೆ ಸಮತೋಲಿತ ಆಹಾರ ನೀಡಬೇಕು, ಅಂಗನವಾಡಿಗಳಲ್ಲಿಹಾಗು ಶಾಲೆಗಳಲ್ಲಿನ ಪೌಷ್ಟಿಕ ಆಹಾರ ವಿತರಿಸುವ ಯೋಜನೆಗಳನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದರು. ತ್ಯಾಮಗೊಂಡ್ಲುಹೋಬಳಿ ನಾನಾ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗು ಸಾರ್ವಜನಿಕರು ಭಾಗವಹಿಸಿದ್ದರು. 15ತ್ಯಾಮಪೋಟೊ1 ತ್ಯಾಮಗೊಂಡ್ಲುಪಟ್ಟಣದ ಸಮುದಾಯ ಭವನದಲ್ಲಿಅಂಗನವಾಡಿಗಳ ಸಹಯೋಗದಲ್ಲಿಪೋಷಣ್ ಮಾಸಾಚರಣೆ ಆಚರಿಸಲಾಯಿತು.

