ದೊಡ್ಡಬಳ್ಳಾಪುರ: ನಗರದ ತಾಲೂಕು ಕಚೇರಿ ಎದುರು ಬುಧವಾರ ಜನಸಾಮಾನ್ಯರ ವಸತಿ, ಭೂಮಿ ವಂಚಿತರ ಒಕ್ಕೂಟ, ಡಾ.ಬಿ.ಆರ್ .ಅಂಬೇಡ್ಕರ್ , ಬಸವಣ್ಣ, ಬಾಬು ಜಗಜೀವನ್ ರಾಂ ಒಕ್ಕೂಟ, ಜನಪರ ಹೋರಾಟಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ಜನಪರ ಒಕ್ಕೂಟಗಳ ಅಧ್ಯಕ್ಷ ಜಿ.ನಂಜುಂಡಪ್ಪ ಮಾತನಾಡಿ, ತಾಲೂಕಿನಲ್ಲಿನಿವೇಶನ ರಹಿತ ಬಡವರನ್ನು ಗುರುತಿಸಿ ಅವರಿಗೆ ನಿವೇಶನ ನೀಡಬೇಕು. ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡುವುದು, ಬಡ ರೈತರಿಗೆ ಸಾಗುವಳಿ ಚೀಟಿಯನ್ನು ತಾಲೂಕು ಆಡಳಿತ ಶೀಘ್ರವೇ ನೀಡಬೇಕು. ತಾಲೂಕಿನಲ್ಲಿಅತಿ ಹೆಚ್ಚು ದಲಿತರು, ಹಿಂದುಳಿದ ವರ್ಗದವರು ವಾಸಿಸುತ್ತಿ ದ್ದಾರೆ. ಹಲವು ಭಾಗದಲ್ಲಿವಸತಿ ಇಲ್ಲದೆ ಒಂದೇ ಗುಡಿಸಲಿನಲ್ಲಿ5ರಿಂದ 10 ಮಂದಿ ಕುಟುಂಬಸ್ಥರು ವಾಸ ಮಾಡುತ್ತಿ ದ್ದಾರೆ. ಅರ್ಹರಿಗೆ ಸರಕಾರ ನೀಡುವುದಿಲ್ಲಬದಲಾಗಿ ಮಠ, ದೇವಾಲಯ, ಟ್ರಸ್ಟ್ ಗಳಿಗೆ ಹಾಗೂ ಉಳ್ಳವರಿಗೆ ಸರಕಾರಿ ಜಾಗ ನೀಡಲು ಆದೇಶ ನೀಡುತ್ತದೆ. ಆದರೆ, ನಿರಾಶ್ರಿತರಿಗೆ ಮಾತ್ರ ಕನಿಷ್ಠ ನಿವೇಶನ ಮಂಜೂರು ಮಾಡುವುದಿಲ್ಲ. ಮತ್ತೊಂದೆಡೆ ಬಡ ರೈತರಿಗೆ ಸಾಗುವಳಿ ಚೀಟಿಗೆ ಅರ್ಹರಿದ್ದರೂ ಹತ್ತಾರು ವಷÜರ್ ದಿಂದ ವಿತರಿಸಿಲ್ಲ, ಶೀಘ್ರವಾಗಿ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ನೀಡಿದ ಮನವಿಯಲ್ಲಿಹಲವು ಹಕ್ಕೋತ್ತಾ ಯಗಳನ್ನು ಮಂಡಿಸಲಾಯಿತು. ನಿರಾಶ್ರಿತರಿಗೆ ವಸತಿಗಾಗಿ ಸರಕಾರ ಕೂಡಲೇ ಜಮೀನು ನೀಡಬೇಕು. ಸರಕಾರ ನಿರ್ಮಿಸಿ ರುವ ಬಡಾವಣೆಗಳಲ್ಲಿನಿರಾಶ್ರಿತರನ್ನು ಕಡೆಗಣಿಸಿ ಉಳ್ಳವರಿಗೆ ನೀಡಿರುವುದನ್ನು ವಾಪಾಸ್ ಪಡೆಯ ಬೇಕು.ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸ ಬೇಕು. ಸರಕಾರಿ ಸ್ವತ್ತುಗಳನ್ನು ಉಳ್ಳವರು ಉಪ ಯೋಗಿ ಸುತ್ತಿದ್ದಾರೆ, ತೆರವುಗೊಳಿಸಿ ವಶಕ್ಕೆ ಪಡೆದು ಕೊಳ್ಳಬೇಕು. ಅತಿ ಸಣ್ಣ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಹೋರಾಟ ಗಾರರಿಗೆ ಸೂಕ್ತ ರಕ್ಷಣೆ ನೀಡ ಬೇಕು. ಹೋರಾಟಗಾರರಿಗೆ ಮಾಸಿಕ ಮಾಶಾಸನ ನೀಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿ ಸಿದರು.ರಾಜ್ಯ ಘಟಕದ ಅಧ್ಯಕ್ಷ ಜಿ. ನಂಜುಡಪ್ಪ, ತಾಲೂಕು ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಕೆ.ಜಯರಾಂ, ಮುಖಂಡ ರಾದ ರಂಗಪ್ಪ, ಗಂಗಾಧರ್ , ಮೇಘರಾಜು, ರಮೇಶ್ , ಶಂಕರ್ , ರಾಮ್ ಕುಮಾರ್ , ಲಕ್ಷ್ಮಮ್ಮ ಇತರರಿದ್ದರು.

