ಅಫಜಲಪುರ ಸುದ್ದಿ

Contributed byskchoudhari121@gmail.com|Vijaya Karnataka
Subscribe

ಅಫಜಲಪುರದಲ್ಲಿ ಬಸವಪರ ಸಂಘಟನೆಗಳ ಒಕ್ಕೂಟವು ಕನ್ನೇರಿ ಮಠದ ಸ್ವಾಮೀಜಿ ವಿರುದ್ಧ ಪ್ರತಿಭಟನೆ ನಡೆಸಿತು. ಸ್ವಾಮೀಜಿ ನೀಡಿದ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಲಿಂಗಾಯತ ಸಮುದಾಯದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಮುಖಂಡರು ತಿಳಿಸಿದರು. ಕಾನೂನು ಕ್ರಮಕ್ಕೆ ಆಗ್ರಹಿಸಲಾಯಿತು.

afzalpur matha organizations protest

ವಿಕ ಸುದ್ದಿಲೋಕ ಅಫಜಲಪುರ ಬಸವಪರ ಸಂಘಟನೆಗಳ ಒಕ್ಕೂಟ ಅಫಜಲಪುರ ಘಟಕದ ಮುಖಂಡರು ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತರುವ,ಅವಮಾನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿಪಟ್ಟಣದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.ಅಕ್ಟೋಬರ್ 9ರಂದು ಸಾಂಗ್ಲಿಜಿಲ್ಲೆಯ ಜತ್ ್ತ ತಾಲೂಕಿನ ಬೀರೂರು ಗ್ರಾಮದಲ್ಲಿನಡೆದ ಸಭೆಯಲ್ಲಿಕಾಡಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗಾಯತ ಮಠಾಧೀಶರ ಒಕ್ಕೂಟದ ಪೀಠಾಧಿಪತಿಗಳ ವಿರುದ್ಧ ಅಸಂವಿಧಾನಿಕ,ಅಶ್ಲೀಲ ಹಾಗೂ ಹೀನ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿಉಲ್ಲೇಖಿಸಲಾಗಿದೆ. ಈ ಕುರಿತು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸಣ್ಣ ಗುಣಾರಿ ಮಾತನಾಡಿ,ಬಸವ ಸಂಸ್ಕೃತಿ ಅಭಿಯಾನವನ್ನು ಕುಗ್ಗಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ.ಆದರೆ ನಾವು ಮೌನವಾಗುವುದಿಲ್ಲ.ಇಂಥ ಹೇಳಿಕೆಗಳು ಧರ್ಮದ ಹೆಸರಿನಲ್ಲಿದ್ವೇಷ ಬೀಜ ಬಿತ್ತುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ಅಮೃತರಾವ್ ಪಾಟೀಲ್ ಮಾತನಾಡಿ,ಸ್ವಾಮೀಜಿ ಬಾಯಿಂದ ಇಂಥ ಅಸಭ್ಯ ಮಾತುಗಳು ಹೊರಬರುವುದು ಸರಿಯಲ್ಲ. ಅವರು ತಕ್ಷಣ ಕ್ಷಮೆ ಕೇಳದಿದ್ದರೆ ರಾಜ್ಯವ್ಯಾಪಿ ಹೋರಾಟ ತಪ್ಪದು ಎಂದು ಎಚ್ಚರಿಸಿದರು. ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ,ಕನ್ನೇರಿ ಸ್ವಾಮೀಜಿ ನೀಡಿದ ಹೇಳಿಕೆ ಲಿಂಗಾಯತ ಸಮುದಾಯದ ಗೌರವಕ್ಕೆ ಕಲೆ ಬೀರಿದಂತಾಗಿದೆ.ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿಗುರು ಚಾಂದಕವಟೆ, ಮಹೇಶ ಆಲೇಗಾಂವ, ಶಾಂತಪ್ಪ ಅಂಜುಟಗಿ, ರೇವಣಸಿದ್ದಪ್ಪ ಹೂಗಾರ, ಬಸವರಾಜ ಕೆಂಗನಾಳ,ರಾಜೇಂದ್ರ ನರೋಣಿ, ಬಸನಗೌಡ ಪಾಟೀಲ…, ವೀರಪ್ಪ ಪೂಜಾರಿ,ಶಿವಪುತ್ರ ಮೇತ್ರಿ,ನಿಂಗಣ್ಣ ದಾನುನುಲ,ಸಂತೋಷ, ಜಿ.ಎಸ್ . ಬಾಳಿಕಾಯಿ, ಗೋಪಾಲ್ ಮಾಂಗ, ಮಾರುತಿ ಭೊವಿ,ಪ್ರಹ್ಲಾದ ಬರಗಾಲ ಸೇರಿದಂತೆ ಅನೇಕರಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ