(( ಇಂಗ್ಲಿಷ್ ಅಕ್ಷರಗಳಿವೆ ಗಮನಿಸುವುದು))
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳಿಗೆ ಶೇ.50ರಷ್ಟು ರಿಯಾಯಿತಿ
ಕಲಬುರಗಿ: ಕನ್ನಡ ರಾಜ್ಯೋತ್ಸವದ ನಿಮಿತ್ತ ನವೆಂಬರ್ ಪೂರ್ತಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಪುಸ್ತಕಗಳನ್ನು ಶೇ.50ರಷ್ಟು ರಿಯಾಯಿತಿ ದರಗಳಲ್ಲಿಮಾರಾಟ ಮಾಡಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಕೆ.ಬಿ.ಕಿರಣ್ ಸಿಂಗ್ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ(ಸಂಪರ್ಕ ಸಂಖ್ಯೆ: 080-22107705) ಹಾಗೂ ಎಲ್ಲಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಇದಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ hಠಿಠಿps://kpp.ka್ಟ್ಞaಠಿaka.ಜಟv.ಜ್ಞಿ ವೆಬ್ ಸೈಟ್ ದಲ್ಲಿಆನ್ ಲೈನ್ (ಆನ್ ಲೈನ್ ಪುಸ್ತಕ ಖರೀದಿಗೆ ವಿಭಾಗ ಇಲ್ಲಿವೀಕ್ಷಿಸಿ) ನಲ್ಲಿಕೂಡ ಈ ಶೇ.50ರಷ್ಟು ರಿಯಾಯಿತಿ ಲಭ್ಯ ಇರುತ್ತವೆ. ಪುಸ್ತಕ ಪ್ರಿಯರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದ್ದಾರೆ.
**
ಭಾಷಾ ಭಾರತಿ ಪ್ರಾಧಿಕಾರ ಶೇ.50 ರಷ್ಟು ರಿಯಾಯಿತಿ
ಕಲಬುರಗಿ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಪ್ರಕಟಣೆಗಳನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ನಲ್ಲಿ(ನ.1ರಿಂದ 30ರವರೆಗೆ) ಶೇ.50ರ ರಿಯಾಯಿತಿ ದರದಲ್ಲಿಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಜಿಸ್ಟ್ರಾರ್ ದತ್ತಪ್ಪ ಸಾಗನೂರ ತಿಳಿಸಿದ್ದಾರೆ. ಅದೇರೀತಿ ಈ ಪುಸ್ತಕಗಳನ್ನು ಆನ್ ಲೈನ್ ಮೂಲಕವೂ ಶೇ.50ರ ರಿಯಾಯಿತಿ ದರದಲ್ಲಿಪುಸ್ತಕಗಳನ್ನು ಖರೀದಿಸಬಹುದಾಗಿದೆ. ಓದುಗರು ಇದರ ಸದುಪಯೋಗ ಪಡೆಯಬಹುದಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗೆ ಘ್ಕಿಡಿಡಿಡಿ.k್ಠvಛಿಞp್ಠಚಿha*haಚಿha್ಟaಠಿhಜಿ.ka್ಟ್ಞaಠಿaka.ಜಟv.ಜ್ಞಿ ವೆಬ್ ಸೈಟ್ ಗೆ ಸಂಪರ್ಕಿಸಲು ಕೋರಲಾಗಿದೆ.
**
ಇಂದು ವಿದ್ಯುತ್ ವ್ಯತ್ಯಯ
ಕಲಬುರಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿಬರುವ 11ಕೆ.ವಿ.ಗಜಾನನ ಎನ್ ಜೆವೈ ಹಾಗೂ ಅಪ್ಪಾ ಫೀಡರ್ ಗಳ ವ್ಯಾಪ್ತಿಯಲ್ಲಿನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ನ.1ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿಕೋರಿದ್ದಾರೆ.
*ಗಜಾನನ ಎನ್ ಜೆವೈ ಫೀಡರ್ : ಗಜಾನನ ಎನ್ ಜೆವೈ ಹಾಗೂ ಸುತ್ತಲಿನ ಪ್ರದೇಶಗಳು.
*ಅಪ್ಪಾ ಫೀಡರ್ : ಬಿದ್ದಾಪುರ, ಕ್ಯೂಪಿ ಲೇಔಟ್ , ಬಬಲಾದ ರೈಲ್ವೆ ಸ್ಟೇಷನ್ ಸುತ್ತಲಿನ ಪ್ರದೇಶಗಳು.

