ವಿಕ ಸುದ್ದಿಲೋಕ ಕೊರಟಗೆರೆ
ಭ್ರಷ್ಟಾಚಾರ ಕೇವಲ ಹಣದ ವ್ಯವಹಾರವಲ್ಲ, ಅದು ನೈತಿಕ ಮೌಲ್ಯಗಳ ಕುಸಿತವಾಗಿದೆ. ಸರಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾರದರ್ಶಕತೆ , ನೈತಿಕತೆ ಮತ್ತು ಹೊಣೆಗಾರಿಕೆಯಿಂದ ನಡೆದುಕೊಂಡಾಗ ಮಾತ್ರ ಶುದ್ಧ ಆಡಳಿತ ಸಾಧ್ಯ ಎಂದು ತುಮಕೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಶಿವರುದ್ರಪ್ಪ ಮೇಟಿ ಹೇಳಿದರು.
ತಾಪಂ ಸಭಾಂಗಣದಲ್ಲಿಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರ ಸಹಕಾರವಿಲ್ಲದೆ ಭ್ರಷ್ಟಾಚಾರ ವಿರೋಧಿ ಚಳವಳಿ ಯಶಸ್ವಿಯಾಗಲಾರದು. ಈ ಪಿಡುಗಿಗೆ ಯಾರೊಬ್ಬರೂ ಒಳಗಾಗಬಾರದು. ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ತಹಸೀಲ್ದಾರ್ ಮಂಜುನಾಥ ಕೆ. ಮಾತನಾಡಿ, ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವ ಹೋರಾಟ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕಾನೂನಿನಲ್ಲಿಭ್ರಷ್ಟಾಚಾರ ವಿರುದ್ಧ ಕಠಿಣ ಶಿಕ್ಷೆಗಳು ಇದ್ದರೂ, ಜನರು ತಮ್ಮ ಹಕ್ಕುಗಳನ್ನು ಅರಿತು ಧೈರ್ಯವಾಗಿ ದೂರು ನೀಡಬೇಕಾಗಿದೆ. ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನ ಬಳಕೆಯು ಸಹಾಯಕವಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದರು.
ತಾಪಂ ಇಒ ಅಪೂರ್ವ ಮಾತನಾಡಿ, ಸರಕಾರಿ ಸೇವೆ ಒಂದು ಕರ್ತವ್ಯ ಮತ್ತು ಸೇವಾ ಧರ್ಮ. ಅಧಿಕಾರಿಗಳು ಜನರ ವಿಶ್ವಾಸ ಗೆಲ್ಲಬೇಕಾದರೆ ಭ್ರಷ್ಟಾಚಾರದಿಂದ ದೂರವಿರುವ ನೈತಿಕ ಬದ್ಧತೆ ಅಗತ್ಯ ಎಂದು ತಿಳಿಸಿದರು.
ಫೋಟೋ 31ಟಿಯುಎಂ1 : ಕೊರಟಗೆರೆ ತಾಪಂ ಸಭಾಂಗಣದಲ್ಲಿಇತ್ತೀಚೆಗೆ ನಡೆದ ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ-2025ನಲ್ಲಿಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಶಿವರುದ್ರಪ್ಪ ಮೇಟಿ ಪ್ರತಿಜ್ಞಾವಿಧಿ ಬೋಧಿಸಿದರು.

