ಜೀವನದಿಯಾದ ತುಂಗಭದ್ರಾ!

Contributed bymanjunath.lokanath@timesgroup.com|Vijaya Karnataka
Subscribe

ಈ ವರ್ಷ ತುಂಗಭದ್ರಾ ನದಿ ಜೀವದಾಯಿನಿಯಾಗಿ ಹರಿಯುತ್ತಿದೆ. ಮೇ ತಿಂಗಳಿನಿಂದಲೇ ನದಿಯಲ್ಲಿ ನೀರಿನ ಹರಿವು ಆರಂಭವಾಗಿತ್ತು. ಈಗಲೂ ನದಿ ಮೈದುಂಬಿ ಹರಿಯುತ್ತಿದ್ದು, ನೀರಿನ ಮಟ್ಟ 5.10 ಮೀಟರ್‌ ಇದೆ. ಭದ್ರಾ ಮತ್ತು ತುಂಗಾ ಡ್ಯಾಂಗಳು ಭರ್ತಿಯಾಗಿವೆ. ಹಿಂಗಾರು ಮಳೆಯೂ ಉತ್ತಮವಾಗಿ ಸುರಿದಿದೆ. ಇದರಿಂದಾಗಿ ಜಿಲ್ಲೆಯ ಜಲಸಮೃದ್ಧಿ ಹೆಚ್ಚಿದೆ. ಬೇಸಿಗೆಯಲ್ಲಿಯೂ ನೀರಿನ ಕೊರತೆ ಎದುರಾಗುವುದಿಲ್ಲ.

life river year round flow of tungabhadra river

ಕಿಕ್ಕರ್ : ವರ್ಷ ಪೂರ್ತಿ ಮಳೆಗಾಲ | ಮೇ ತಿಂಗಳಿಂದಲೂ ಮೈದುಂಬಿ ಹರಿಯುತ್ತಿರುವ ನದಿ | ಈಗಲೂ ನೀರಿನ ಮಟ್ಟ 5.10 ಮೀಟರ್ | ಬೇಸಿಗೆಗೆ ನೀರಿನ ಅಭಯ

---

ಜೀವನದಿಯಾದ ತುಂಗಭದ್ರಾ!

ಯಧಿಳಧಿನಾಡು ಮಂಜು ದಾವಣಗೆರೆ

ಞa್ಞ್ಜ್ಠ್ಞaಠಿh.್ಝಟka್ಞaಠಿhಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ಹಾಗೂ ತುಂಗಾ ಡ್ಯಾಂ ನವೆಂಬರ್ ತಿಂಗಳಲ್ಲೂಭರ್ತಿಯಾಗಿದೆ. ಈ ವರ್ಷ ವರ್ಷ ಪೂರ್ತಿ ಮಳೆಗಾಲವಾಗಿದ್ದು, ಹಿಂಗಾರಲ್ಲೂದಾಖಲೆ ಒಳ ಹರಿವು ಮುಂದುವರಿದು ಎರಡೂ ಡ್ಯಾಂ ಖಾಲಿಯೇ ಆಗಿಲ್ಲ. ಜೊತೆಗೆ ಹೊರ ಹರಿವು ಹೆಚ್ಚಿರುವುದರಿಂದ ತುಂಗಭದ್ರಾ ನದಿ ಈಗಲೂ ಮೈ ದುಂಬಿ ಹರಿಯುತ್ತಿದೆ.

ಮುಂಗಾರು ಮುಗಿದು, ಹಿಂಗಾರು ಶುರುವಾಗಿದೆ. ಈ ಹೊತ್ತಿಗೆ ಮಳೆಗಾಲ ಕ್ಷೀಣಿಸಿ ಒಳ ಹರಿವು ಇಳಿಮುಖವಾಗಿ, ಹೊರ ಹರಿವು ಕೂಡ ಇರುತ್ತಿರಲಿಲ್ಲ. ಹಿಂದಿನ ವರ್ಷ ಇದೇ ದಿನ ಭದ್ರಾ ಡ್ಯಾಂ ಒಳ ಹರಿವು ಕೇವಲ 1763 ಕ್ಯು, ಹೊರ ಹರಿವು 2365 ಕ್ಯುಸೆಕ್ ಇತ್ತು. ತುಂಗಾ ಡ್ಯಾಂ ಪರಿಸ್ಥಿತಿ ಕೂಡ ಇದೇ ರೀತಿ ಇರುತ್ತಿತ್ತು. ಆದರೆ ಈ ವರ್ಷ ನವೆಂಬರ್ ನಲ್ಲೂಎರಡೂ ಡ್ಯಾಂ ತುಂಬಿದ್ದು, ಒಳ ಹರಿವಿನ ಜತೆ ಹೊರ ಹರಿವು ಜಾಸ್ತಿಯಿರುವುದರಿಂದ ನದಿ ನೀರಿನ ಮಟ್ಟ ಕಡಿಮೆಯೇ ಆಗಿಲ್ಲ.

ನದಿಯಲ್ಲಿವರ್ಷ ಪೂರ್ತಿ ನೀರು:

ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ಮತ್ತು ತುಂಗಾ ಡ್ಯಾಂ ಈ ವರ್ಷ ಮಳೆಗಾಲದಲ್ಲಿದಾಖಲೆ ಮೇಲೆ ದಾಖಲೆ ಬರೆಯತ್ತಿದೆ. ಜುಲೈ 15ರ ಹೊತ್ತಿಗೆ ಡ್ಯಾಂ ಭರ್ತಿಯಾಗಿ ದಾಖಲೆ ಬರೆಯಿತು. ಇತಿಹಾಸದಲ್ಲಿಎರಡು ಬಾರಿ ಮಾತ್ರ ಈ ದಾಖಲೆ ಬರೆದಿದೆ. ಮೊದಲ ಬಾರಿ ಡ್ಯಾಂ ತುಂಬಿ ನಾಲೆಗೆ ನೀರು ಹರಿಸುವ ಮುನ್ನವೇ ನದಿಗೆ ನೀರು ಹರಿಸಲಾಯಿತು. ಈಗ ಮಳೆಗಾಲ ಇನ್ನೂ ಮುಂದುವರಿದಿದ್ದು, ಈವರೆಗೂ ಡ್ಯಾಂ ತುಂಬಿಯೇ ಇದೆ. ನದಿಗೂ ಸುಮಾರು 7000 ಕ್ಯುಸೆಕ್ ನೀರು ಹರಿಯತ್ತಿದೆ.

ಈ ವರ್ಷ ಮೇ ತಿಂಗಳಲ್ಲಿಯೇ ಉತ್ತಮ ಮಳೆ ಸುರಿದಿದ್ದರಿಂದ ಡ್ಯಾಂಗೂ ಒಳ ಹರಿವು ಶುರುವಾಗಿತ್ತು. ತುಂಗಭದ್ರಾ ನದಿಯಲ್ಲಿನೀರಿನ ಹರಿವು ಶುರುವಾಯಿತು, ನಂತರ ಜೂನ್ , ಜುಲೈ ತಿಂಗಳಲ್ಲಿಮಳೆ ಅಬ್ಬರಿಸಿದ್ದರಿಂದ ನದಿ ಇನ್ನಷ್ಟು ತುಂಬಿ ಹರಿಯಿತು. ಹಾಗಾಗಿ ಮೇ ತಿಂಗಳ ಕೊನೆಯಲ್ಲಿಆರಂಭವಾದ ನದಿ ಹರಿವು ಈಗಲೂ ಮೈದುಂಬಿದೆ.

5.10 ಮೀಟರ್ ನೀರಿನ ಮಟ್ಟ:

ನವೆಂಬರ್ ತಿಂಗಳ ಹೊತ್ತಿಗೆ ಮಳೆಗಾಲವೂ ಕ್ಷೀಣಿಸಿ ಡ್ಯಾಂಗೂ ಒಳ ಹರಿವು ಇಲ್ಲದೆ ಶೇಖರಣೆಯಾದ ನೀರನ್ನು ಬಳಸಿಕೊಳ್ಳುವ ಸ್ಥಿತಿ ಇರುತ್ತಿತ್ತು. ಆದರೆ ಈ ಬಾರಿ ಮಳೆಗಾಲ ಮುಗಿಯದೆ ಅಕ್ಟೋಬರ್ 31ರ ಶುಕ್ರವಾರವೂ ಡ್ಯಾಂಗೆ 7478 ಕ್ಯುಸೆಕ್ ಒಳ ಹರಿವು ಇದ್ದು, 6877 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅದೇ ರೀತಿ ತುಂಗಾ ಡ್ಯಾಂನಿಂದಲೂ 3663 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಈಗ ನದಿಯಲ್ಲಿಸುಮಾರು 15 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ನದಿ ನೀರಿನಮಟ್ಟ 5.10 ಮೀಟರ್ ಇದೆ.

ಈ ವರ್ಷ ವರ್ಷಪೂರ್ತಿ ಮಳೆಗಾಲ ಎಂಬಂತಾಗಿದ್ದು ಜಿಲ್ಲೆಯ ಆರ್ಥಿಕ, ಆಹಾರದ ಮೂಲವಾದ ತುಂಗಭದ್ರಾ ನದಿ ವರ್ಷ ಪೂರ್ತಿ ಮೈದುಂಬಿ ಹರಿದು ಜೀವನದಿಯಾಗಿ ರೂಪಾಂತರವಾಗಿದೆ. ಈ ಭಾಗದಲ್ಲಿಜಲ ಸಮೃದ್ಧಿಯನ್ನು ಪೊರೆಯುತ್ತಿದೆ.

----------

ಬಾಕ್ಸ್ ...

6 ತಿಂಗಳಿಂದ ನಿರಂತರ ನೀರು

ಈ ವರ್ಷ ಮೇ ತಿಂಗಳ ಎರಡನೇ ವಾರದಿಂದಲೇ ಮಳೆ ಅಬ್ಬರಿಸಿ ಮೇ ತಿಂಗಳ ಕೊನೇ ಹೊತ್ತಿಗಾಗಲೇ ನೀರಿನ ಹರಿವು ಆರಂಭವಾಗಿತ್ತು. ಜೂನ್ ತಿಂಗಳಲ್ಲಿಸುರಿದ ಮಳೆಯಿಂದ ನದಿ ನೀರಿನಮಟ್ಟ ಏರಿಕೆಯಾಯಿತು. ಜುಲೈ ಎರಡನೇ ವಾರದ ಹೊತ್ತಿಗೆ ಎರಡೂ ಡ್ಯಾಂಗಳಿಂದ ದೊಡ್ಡ ಮಟ್ಟದಲ್ಲಿನದಿಗೆ ನೀರು ಹರಿಸಿದ್ದರಿಂದ ಆರು ತಿಂಗಳಿಂದ ನಿರಂತರ ತುಂಗಾಭದ್ರಾ ನದಿ ಮೈ ದುಂಬಿ ಹರಿಯುತ್ತಿದೆ.

----

ಮುಳುಗಿದ ಮೆಟ್ಟಿಲು

ಹರಿಹರದ ತುಂಗಭದ್ರಾರತಿ ತಾಣ ಮತ್ತು ರಾಣೆಬೆನ್ನೂರಿನ ತುಂಗಭದ್ರಾ ನದಿ ತಟದ ಕುರುವತ್ತಿ ತಾಣದಲ್ಲಿಈಗಲೂ ಮೆಟ್ಟಿಲುಗಳ ಮುಳುಗಿವೆ. ಇನ್ನೂ ದೊಡ್ಡ ಪ್ರಮಾಣದಲ್ಲಿನದಿಯಲ್ಲಿನೀರು ಹರಿಯುತ್ತಿದೆ. ಕಾವೇರಿಗಿಂತಲೂ ಹೆಚ್ಚಿನ ಉದ್ದದ ನದಿ ತುಂಗಭದ್ರೆಯಾಗಿದ್ದು ಕಾವೇರಿ ಮಾದರಿಯಲ್ಲಿಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿಲ್ಲ.

---

* ಪೋಟೋ ಇದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ